ಸಚಿವೆ ವಿರುದ್ಧ ರವಿ ಕೆಟ್ಟ ಪದ ಬಳಸಿದ್ದು ನಿಜ ಅಂತ ಬೇರೆ ಶಾಸಕರೂ ಹೇಳಿದ್ದಾರೆ ಎಂದ ಸಿದ್ದರಾಮಯ್ಯ

ಸಚಿವೆ ವಿರುದ್ಧ ರವಿ ಕೆಟ್ಟ ಪದ ಬಳಸಿದ್ದು ನಿಜ ಅಂತ ಬೇರೆ ಶಾಸಕರೂ ಹೇಳಿದ್ದಾರೆ ಎಂದ ಸಿದ್ದರಾಮಯ್ಯ

ಅರುಣ್​ ಕುಮಾರ್​ ಬೆಳ್ಳಿ
|

Updated on: Dec 19, 2024 | 4:07 PM

ನಿನ್ನೆ ವಿಧಾನ ಪರಿಷತ್​ನಲ್ಲಿ ಸಿಟಿ ರವಿ ಅವರು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಅಸಂಸದೀಯ ಪದ ಬಳಸಿದ್ದು ರಾಜ್ಯಾದ್ಯಂತ ಚರ್ಚೆಯಾಗುತ್ತಿದೆ. ಆಡಳಿತ ಪಕ್ಷದ ನಾಯಕರು ರವಿ ಹೇಳಿದ್ದನ್ನು ಖಂಡಿಸಿದ್ದಾರೆ. ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ರವಿ ತಾನು ಕೆಟ್ಟ ಪದ ಬಳಕೆ ಮಾಡಿಲ್ಲ ಎನ್ನುತ್ತಿದ್ದಾರೆ. ತಾನು ಮಾತಾಡಿದ್ದು ಪರಿಷತ್ ಪುಸ್ತಕಗಳಲ್ಲಿ ದಾಖಲಾಗಿರುತ್ತದೆ ಅದನ್ನು ತೆಗೆದು ನೋಡಲಿ ಅಂತ ಅವರು ಹೇಳುತ್ತಾರೆ.

ಬೆಳಗಾವಿ: ವಿಧಾನ ಪರಿಷತ್ ನಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಪರಿಷತ್ ಸದಸ್ಯ ಸಿಟಿ ರವಿಯವರು ಬಳಸಿರುವ ಆಕ್ಷೇಪಾರ್ಹ ಪದದ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಆ ಸಮಯದಲ್ಲಿ ತಾನು ಮೇಲ್ಮನೆಯಲ್ಲಿರಲಿಲ್ಲ, ಅದರೆ ಶಾಸಕರು ತಮಗೆ ವಿಷಯ ತಿಳಿಸಿದರು, ಲಕ್ಷ್ಮಿಯವರು ತುಂಬಾ ನೊಂದುಕೊಂಡಿದ್ದಾರೆ, ಸಭಾಪತಿ ಮತ್ತು ಪೊಲೀಸರಿಗೂ ಅವರು ದೂರು ಸಲ್ಲಿಸಿದ್ದಾರೆ, ರವಿಯವರು ಬಳಸಿರುವ ಪದ ಕ್ರಿಮಿನಲ್ ಅಫೆನ್ಸ್ ಅನಿಸಿಕೊಳ್ಳುತ್ತದೆ ಎಂದು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಎಐಸಿಸಿ ಅಧಿವೇಶನಕ್ಕೆ ಅಡ್ಡಿಪಡಿಸುವ ಪ್ರಯತ್ನ ಬಿಜೆಪಿ ಮಾಡಿದರೆ ಕಾನೂನುರೀತ್ಯಾ ಕ್ರಮ: ಸಿದ್ದರಾಮಯ್ಯ