‘ನನಗೆ ಅವಮಾನ ಮಾಡಬೇಡಿ’; ಚೈತ್ರಾ ಬಳಿ ಕೋರಿದ ಕಿಚ್ಚ ಸುದೀಪ್
ಕಿಚ್ಚ ಸುದೀಪ್ ಮತ್ತು ಚೈತ್ರಾ ಕುಂದಾಪುರ ಅವರ ನಡುವೆ ಪ್ರತಿ ವಾರ ಜಗಳಗಳು ನಡೆಯುತ್ತಿವೆ. ಚೈತ್ರಾ ಅವರ ಪದೇ ಪದೇ ಅನಾರೋಗ್ಯದಿಂದ ಬಳಲುವುದನ್ನು ಸುದೀಪ್ ಪ್ರಶ್ನಿಸಿದ್ದಾರೆ. ಸರಿಯಾದ ಆಹಾರ ಸೇವಿಸಲು ಸಲಹೆ ನೀಡಿದ್ದಾರೆ. ಆದರೆ, ಚೈತ್ರಾ ಅವರ ಉತ್ತರ ಸುದೀಪ್ ಅವರನ್ನು ಕೋಪಗೊಳ್ಳುವಂತೆ ಮಾಡಿದೆ.
ಕಿಚ್ಚ ಸುದೀಪ್ ಹಾಗೂ ಚೈತ್ರಾ ಮಧ್ಯೆ ಪ್ರತಿ ವಾರ ಒಂದಲ್ಲ ಒಂದು ವಿಚಾರಕ್ಕೆ ಚರ್ಚೆಗಳು ನಡೆಯುತ್ತವೆ. ಪದೇ ಪದೇ ಸುದೀಪ್ ಅವರು ಕ್ಲಾಸ್ ತೆಗೆದುಕೊಳ್ಳುತ್ತಿದ್ದಾರೆ. ಈ ವಾರವೂ ಚೈತ್ರಾಗೆ ಸುದೀಪ್ ಅವರು ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಇದಕ್ಕೆ ಕಾರಣ ಆಗಿದ್ದು ಚೈತ್ರಾ ಅವರ ನಡೆ. ಅವರ ನಡೆಯಿಂದ ಬೇಸತ್ತ ಸುದೀಪ್ ಅವರು, ಯಾರಿಗೆ ಬೇಕಿದ್ದರೂ ಅವಮಾನ ಮಾಡಿ, ನನಗೆ ಮಾತ್ರ ಮಾಡಬೇಡಿ ಎಂದು ಸವಿನಯ ಪ್ರಾರ್ಥನೆ ಮಾಡಿಕೊಂಡಿದ್ದಾರೆ.
ಈ ವಾರ ಚೈತ್ರಾ ಕುಂದಾಪುರ ಅವರು ಕಳಪೆ ಪಟ್ಟ ಸೇರಿದರು. ಈ ಕಳಪೆ ವಿಚಾರ ಸಾಕಷ್ಟು ಚರ್ಚೆಗೆ ಕಾರಣ ಆಯಿತು. ಈಗ ಚೈತ್ರಾ ಕುಂದಾಪುರ ಅವರು ಸುದೀಪ್ ಕಡೆಯಿಂದ ಬೈಸಿಕೊಂಡರು. ಚೈತ್ರಾ ಕುಂದಾಪುರ ಅವರಿಗೆ ಪದೇ ಪದೇ ಆರೋಗ್ಯ ಕೈ ಕೊಡುತ್ತಿದೆ. ಇದನ್ನು ಸುದೀಪ್ ಪ್ರಶ್ನೆ ಮಾಡಿದ್ದಾರೆ. ‘ಚೈತ್ರಾ ಅವರೇ ಪದೇ ಪದೇ ಅನಾರೋಗ್ಯಕ್ಕೆ ಒಳಗಾಗುತ್ತಿದ್ದೀರಿ. ಸರಿಯಾಗಿ ಆಹಾರ ತೆಗೆದುಕೊಂಡ್ರೆ ಸರಿ ಹೋಗುತ್ತದೆ ಎಂದು ವೈದ್ಯರು ಹೇಳಿದ್ದಾರೆ. ಅದನ್ನು ಮಾಡಿ’ ಎಂದರು ಸುದೀಪ್.
‘ನನಗೆ ಕುಗ್ಗಿದ್ದಾಗ ಆಹಾರ ಸೇರಲ್ಲ’ ಎಂದರು ಚೈತ್ರಾ ಕುಂದಾಪುರ. ಈ ವಿಚಾರ ಸುದೀಪ್ ಕೋಪಕ್ಕೆ ಕಾರಣ ಆಯಿತು. ‘ನಿಮ್ಮನ್ನು ಯಾರೂ ಕುಗ್ಗಿಸಲ್ಲ. ನಿಮಗೆ ಅನಾರೋಗ್ಯ ಆದಾಗ ಸರಿ ಮಾಡೋದು ನಮ್ಮ ಕೆಲಸ. ಆದರೆ, ನಿಮಗೆ ಅನಾರೋಗ್ಯ ಉಂಟಾಗೋದಕ್ಕೆ ಒಂದು ಪ್ಯಾಟರ್ನ್ ಕಾಣುತ್ತಿದೆ. ಆ ಬಗ್ಗೆ ನಾನು ಮಾತನಾಡುತ್ತಿದ್ದೇನೆ’ ಎಂದರು ಸುದೀಪ್.
ಇದನ್ನೂ ಓದಿ: ಚೈತ್ರಾಗೆ ಕೈಕೊಟ್ಟ ಗ್ರಹಚಾರ; ಕಾಲ ಮೇಲೆ ಬಿತ್ತು ಸುಡುವ ಗಂಜಿ
ಈ ಮಾತು ಚೈತ್ರಾ ಕೋಪಕ್ಕೆ ಕಾರಣ ಆಯಿತು. ನಂತರ ಸುದೀಪ್ ಪ್ರಶ್ನೆ ಕೇಳಿದಾಗ ಉತ್ತರ ಕೊಡೋಕೆ ನಿರಾಕರಿಸಿದರು. ಇದು ಸುದೀಪ್ ಕೋಪಕ್ಕೆ ಕಾರಣ ಆಯಿತು. ‘ಇದು ಯಾವ ರೀತಿಯ ಬಿಹೇವಿಯರ್? ನೀವು ಯಾರಿಗೆ ಬೇಕಿದ್ದರೂ ಅವಮಾನ ಮಾಡಿ ನನಗೆ ಮಾಡಬೇಡಿ. ಪ್ಯಾಟರ್ನ್ ಕಾಣಿಸ್ತಾ ಇದೆ. ಅದನ್ನು ಎತ್ತಿ ಹೇಳ್ತಾ ಇದೀನಿ ಅಷ್ಟೇ’ ಎಂದು ಸುದೀಪ್ ಅವರು ಖಡಕ್ ಆಗಿಯೇ ಹೇಳಿದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.