ಬಿಗ್ ಬಾಸ್ ಮನೆಯಲ್ಲಿ ದೆವ್ವ ನೋಡಿ ಚೈತ್ರಾ ಕುಂದಾಪುರಗೆ ಬಂತು ಚಳಿ-ಜ್ವರ

Bigg Boss Kannada: ಬಿಗ್​ಬಾಸ್ ಕನ್ನಡ ಸ್ಪರ್ಧಿ ಚೈತ್ರಾ ಕುಂದಾಪುರಗೆ ಚಳಿ ಜ್ವರ ಶುರುವಾಗಿದೆ. ಬಿಗ್ ಬಾಸ್ ಸ್ಪರ್ಧಿಗಳಿಗೆ ಕನ್ನಡಿಯಲ್ಲಿ ಲೈಟ್ ತೋರಿಸಿ, ಕನ್ನಡಿಯಲ್ಲಿ ಮುಖ ಬರುವಂತೆ ಮಾಡಿ ಭಯ ಬೀಳಿಸಲಾಯಿತು. ಇದನ್ನು ನೋಡಿ ಚೈತ್ರಾ ಅವರು ಬೆವತೇ ಹೋದರು. ಈಗ ಅವರಿಗೆ ಚಳಿ ಜ್ವರ ಶುರುವಾಗಿದೆ.

ಬಿಗ್ ಬಾಸ್ ಮನೆಯಲ್ಲಿ ದೆವ್ವ ನೋಡಿ ಚೈತ್ರಾ ಕುಂದಾಪುರಗೆ ಬಂತು ಚಳಿ-ಜ್ವರ
Chaitra Kundapura (27)
Follow us
 ಶ್ರೀಲಕ್ಷ್ಮೀ ಎಚ್
| Updated By: ಮಂಜುನಾಥ ಸಿ.

Updated on: Dec 22, 2024 | 8:01 AM

‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಚೈತ್ರಾ ಕುಂದಾಪುರ ಅವರು ಸಾಕಷ್ಟು ಸದ್ದು ಮಾಡುತ್ತಿದ್ದಾರೆ. ಅವರು ಅನೇಕ ಕಾರಣಕ್ಕೆ ಟೀಕೆಗೆ ಒಳಗಾದ ಉದಾಹರಣೆ ಇದೆ. ಅವರು ದೊಡ್ಮನೆಯಲ್ಲಿ ಯಾವಾಗ ಕುಗ್ಗುತ್ತಾರೆ, ಯಾವಾಗ ಸಿಡಿದೇಳುತ್ತಾರೆ ಎಂದು ಹೇಳೋದು ಕಷ್ಟ. ಈಗ ಚೈತ್ರಾ ಅವರು ನಡೆದುಕೊಂಡ ರೀತಿ ಅನೇಕರಿಗೆ ಶಾಕಿಂಗ್ ಎನಿಸಿದೆ. ದೊಡ್ಮನೆಯಲ್ಲಿ ದೆವ್ವ ನೋಡಿ ಅವರಿಗೆ ಚಳಿ ಜ್ವರ ಬಂದಿದೆ.

ಕಲರ್ಸ್ ಕನ್ನಡದಲ್ಲಿ ಹೊಸ ಧಾರಾವಾಹಿ ಪ್ರಸಾರ ಕಾಣುತ್ತಿದೆ ಎಂದರೆ ಅದನ್ನು ಬಿಗ್ ಬಾಸ್​ನಲ್ಲಿ ಪ್ರಚಾರ ಮಾಡಲಾಗುತ್ತದೆ. ಈಗಲೂ ಹಾಗೆಯೇ ಆಗಿದೆ. ‘ನೂರು ಜನ್ಮಕೂ’ ಹೆಸರಿನ ಹಾರರ್ ಸೀರಿಯಲ್ ಕಲರ್ಸ್ ಕನ್ನಡದಲ್ಲಿ ಡಿಸೆಂಬರ್ 23ರಿಂದ ಪ್ರಸಾರ ಕಾಣಲಿದೆ. ‘ಗೀತಾ’ ಧಾರಾವಾಹಿಯಿಂದ ಹೆಸರಾದ ಧನುಷ್ ಗೌಡ, ಹಿರಿಯ ನಟಿ ಗಿರಿಜಾ ಲೋಕೇಶ್, ಭಾಗ್ಯಶ್ರೀ, ಬಿ.ಎಂ. ವೆಂಕಟೇಶ್ ಹಾಗೂ ಗಾಯಕಿ ಅರ್ಚನಾ ಉಡುಪ ಮೊದಲಾದವರು ಪಾತ್ರವರ್ಗದಲ್ಲಿದ್ದಾರೆ. ಈ ಧಾರಾವಾಹಿಯ ಪ್ರಮೋಷನ್ ಬಿಗ್ ಬಾಸ್ ಮನೆಯಲ್ಲಿ ಮಾಡಲಾಗಿದೆ.

ಬಿಗ್ ಬಾಸ್ ಸ್ಪರ್ಧಿಗಳಿಗೆ ಕನ್ನಡಿಯಲ್ಲಿ ಲೈಟ್ ತೋರಿಸಿ, ಕನ್ನಡಿಯಲ್ಲಿ ಮುಖ ಬರುವಂತೆ ಮಾಡಿ ಭಯ ಬೀಳಿಸಲಾಯಿತು. ಇದನ್ನು ನೋಡಿ ಚೈತ್ರಾ ಅವರು ಬೆವತೇ ಹೋದರು. ಅವರು ಬಿದ್ದು ಒದ್ದಾಡೋಕೆ ಆರಂಭಿಸಿದರು. ಅವರ ಬಳಿ ಇದನ್ನು ಅರಗಿಸಿಕೊಳ್ಳೋಕೆ ಆಗಲೇ ಇಲ್ಲ. ಭಯದಲ್ಲೇ ಅವರು ಹೋಗಿ ದೇವರ ದೀಪ ಹಚ್ಚಿದರು. ಪ್ರಾರ್ಥನೆ ಮಾಡಿದರು. ಹಣೆಗೆ ಕುಂಕುಮ ಇಟ್ಟುಕೊಂಡರು.

ಇದನ್ನೂ ಓದಿ:ಮೋಸ ಮಾಡಿ ಗೆದ್ರಾ ಚೈತ್ರಾ ಕುಂದಾಪುರ?

ಜೈಲಿನಲ್ಲಿ ಇದ್ದಾಗ ಅವರಿಗೆ ಸ್ವಲ್ಪ ಜ್ವರ ಬಂದಿತ್ತು. ಈ ಘಟನೆ ಬಳಿಕ ಈ ಜ್ವರ ಮಿತಿ ಮೀರಿತು. ಅವರು ಎಲ್ಲರನ್ನು ಹಿಡಿದು ತಬ್ಬಿದರು. ಅವರ ಮುಖದಲ್ಲಿ ಭಯ ಎದ್ದು ಕಾಣುತ್ತಿತ್ತು. ಮೊದಲೇ ಕುಗ್ಗಿದ್ದ ಅವರು ಈ ಘಟನೆಯಿಂದ ಮತ್ತಷ್ಟು ಕುಗ್ಗುವಂತೆ ಆಯಿತು.

ಚೈತ್ರಾ ಕುಂದಾಪುರ ನಡೆದುಕೊಂಡ ರೀತಿ ಮನೆಯವರಿಗೆ ಅಚ್ಚರಿ ಎನಿಸಿತು. ಅವರು ಈ ರೀತಿ ನಡೆದುಕೊಂಡಿದ್ದು ಏಕೆ ಎಂಬ ಪ್ರಶ್ನೆ ಅನೇಕರನ್ನು ಕಾಡಿತು. ಅವರ ಭಯ ನೋಡಿ ಕೆಲವರು ಶಾಕ್ ಕೂಡ ಆದರು. ಕೊನೆಗೆ ಧಾರಾವಾಹಿ ತಂಡದವರು ಬರುವ ಮೂಲಕ ಎಲ್ಲರಿಗೂ ಸರ್​ಪ್ರೈಸ್ ಕೊಟ್ಟರು. ಆ ಬಳಿಕ ಚೈತ್ರಾ ಅವರಿಗೆ ಜ್ವರ ಹೆಚ್ಚಿದ್ದರಿಂದ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ