ಕಿಚ್ಚನ ಚಪ್ಪಾಳೆ ಪಡೆದ ಭವ್ಯಾ; ಮತ್ತೆ ಬದಲಾವಣೆ ತಂದ ಸುದೀಪ್
ಭವ್ಯಾ ಗೌಡ ಅವರು ಕಿಚ್ಚನ ಚಪ್ಪಾಳೆ ಪಡೆದು ಸಂಭ್ರಮಿಸಿದ್ದಾರೆ. ಈ ವಾರದ ಅವರ ಆಟವನ್ನು ಸುದೀಪ್ ಮೆಚ್ಚಿಕೊಂಡಿದ್ದಾರೆ. ಕೆಲ ವಾರದಿಂದ ಸುದೀಪ್ ಅವರು ಚಪ್ಪಾಳೆ ನೀಡುವುದನ್ನು ನಿಲ್ಲಿಸಿದ್ದರು. ಆದರೆ ಈಗ ಮತ್ತೆ ಅವರು ಚಪ್ಪಾಳೆ ನೀಡಲು ಆರಂಭಿಸಿದ್ದಕ್ಕಾಗಿ ಎಲ್ಲರಿಗೂ ಖುಷಿ ಆಗಿದೆ. ಬಿಗ್ ಬಾಸ್ ಆಟದಲ್ಲಿ ಇನ್ನು ಉಳಿದಿರುವುದು ಕೆಲವೇ ದಿನಗಳು ಮಾತ್ರ. ಶೀಘ್ರವೇ ಫಿನಾಲೆ ಬರಲಿದೆ.
ಬಿಗ್ ಬಾಸ್ ಸ್ಪರ್ಧಿಗಳಿಗೆ ‘ಕಿಚ್ಚನ ಚಪ್ಪಾಳೆ’ ಸಿಕ್ಕರೆ ಸಿಕ್ಕಾಪಟ್ಟೆ ಖುಷಿ ಆಗುತ್ತದೆ. ಆದರೆ ಕಳೆದ ಕೆಲವು ವಾರಗಳಿಂದ ಸುದೀಪ್ ಅವರು ಚಪ್ಪಾಳೆ ನೀಡುತ್ತಿರಲಿಲ್ಲ. ಈ ಸೀಸನ್ನಲ್ಲಿ ಕೆಲವು ಸ್ಪರ್ಧಿಗಳು ನಡೆದುಕೊಂಡ ರೀತಿ ಸುದೀಪ್ ಅವರಿಗೆ ಇಷ್ಟ ಆಗಿರಲಿಲ್ಲ. ಆ ಕಾರಣದಿಂದಲೇ ಅವರು ಚಪ್ಪಾಳೆ ನೀಡುವುದನ್ನು ನಿಲ್ಲಿಸಿದ್ದರು. ಆದರೆ ಕಳೆದ ವಾರ ಭವ್ಯಾ ಗೌಡ ಒಂದು ಮನವಿ ಮಾಡಿದ್ದರು. ದಯವಿಟ್ಟು ಕಿಚ್ಚನ ಚಪ್ಪಾಳೆ ನೀಡಿ ಎಂದು ಅವರು ಕೋರಿಕೊಂಡಿದ್ದರು. ಹಾಗಾಗಿ, ಮತ್ತೆ ಈ ವಾರದಿಂದ ಸುದೀಪ್ ಅವರು ಚಪ್ಪಾಳೆ ನೀಡಲು ಆರಂಭಿಸಿದ್ದಾರೆ. ಈ ವಾರ ಭವ್ಯಾ ಗೌಡ ಅವರಿಗೆ ಕಿಚ್ಚನ ಚಪ್ಪಾಳೆ ಸಿಕ್ಕಿದೆ.
ಭವ್ಯಾ ಗೌಡ ಅವರು ಬಿಗ್ ಬಾಸ್ ಮನೆಯಲ್ಲಿ ಎರಡನೇ ಬಾರಿ ಕ್ಯಾಪ್ಟನ್ ಆಗಿದ್ದಾರೆ. ಈ ಸರಿ ಅವರು ಯಾರದ್ದೇ ಬೆಂಬಲ ಪಡೆಯದೇ, ಸ್ವಂತ ಶ್ರಮದಿಂದ ಕ್ಯಾಪ್ಟನ್ ಪಟ್ಟವನ್ನು ಪಡೆದುಕೊಂಡಿದ್ದಾರೆ. ಅಲ್ಲದೇ, ಇಡೀ ವಾರ ಗಟ್ಟಿಯಾಗಿ ತಮ್ಮ ನಿಲುವು ಏನು ಎಂಬುದನ್ನು ಸಾಬೀತು ಮಾಡಿದ್ದಾರೆ. ಈ ಎಲ್ಲ ಕಾರಣಗಳಿಂದಾಗಿ ಅವರ ಆಟವನ್ನು ಸುದೀಪ್ ಮೆಚ್ಚಿಕೊಂಡು ಚಪ್ಪಾಳೆ ನೀಡಿದ್ದಾರೆ.
ಹಾಗಂತ ಈ ವಾರದಲ್ಲಿ ಭವ್ಯಾ ಅವರ ಆಟ ಶೇ.100ರಷ್ಟು ಚೆನ್ನಾಗಿತ್ತು ಎಂದು ಅರ್ಥವಲ್ಲ. ತಕ್ಕಮಟ್ಟಿಗೆ ಅವರು ಸುಧಾರಿಸಿಕೊಂಡಿದ್ದಾರೆ ಎಂಬ ಕಾರಣವನ್ನು ಕೊಟ್ಟು ಸುದೀಪ್ ಅವರು ಮೆಚ್ಚುಗೆ ಸೂಚಿಸಿದ್ದಾರೆ. ‘ಚಪ್ಪಾಳೆ ಕೊಡಲು ಮತ್ತೆ ಆರಂಭಿಸಿ ಅಂತ ನಾನು ಕಳೆದ ವಾರ ರಿಕ್ವೆಸ್ಟ್ ಮಾಡಿದ್ದೆ. ಅದು ನನಗೇ ಸಿಕ್ಕಿದ್ದಕ್ಕೆ ಖುಷಿ ಆಗಿದೆ’ ಎಂದು ಭವ್ಯಾ ಗೌಡ ಅವರು ಬಿಗ್ ಬಾಸ್ ಮನೆಯ ಒಳಗಿರುವ ಟಿವಿ ಬಳಿ ಬಂದು ಸುದೀಪ್ ಅವರ ಫ್ರೇಮ್ ಪಕ್ಕದಲ್ಲಿ ಫೋಟೋ ಕ್ಲಿಕ್ಕಿಸಿಕೊಂಡರು.
ಇದನ್ನೂ ಓದಿ: ‘ಈ ಗಾಂಚಲಿ ನಮ್ಮತ್ರ ಬೇಡಮ್ಮ’: ಹನುಮಂತಗೆ ಮೊದಲ ಬಾರಿ ಸುದೀಪ್ ಕ್ಲಾಸ್
ಈ ವಾರ ತ್ರಿವಿಕ್ರಮ್ ಅವರಿಗೆ ಕಿಚ್ಚನ ಚಪ್ಪಾಳೆ ಸಿಗಬಹುದು ಎಂದು ಕೆಲವರು ಭಾವಿಸಿದ್ದರು. ಅಲ್ಲದೇ ಮೋಕ್ಷಿತಾಗೆ ಕೂಡ ಚಪ್ಪಾಳೆ ಸಿಗಬಹುದು ಎಂದು ಊಹಿಸಲಾಗಿತ್ತು. ಆದರೆ ಅಂತಿಮವಾಗಿ ಭವ್ಯಾ ಗೌಡ ಅವರು ಈ ಮೆಚ್ಚುಗೆಗೆ ಪಾತ್ರರಾದರು. ಭಾನುವಾರದ (ಡಿ.22) ಶೋನಲ್ಲಿ ಸುದೀಪ್ ಅವರು ತುಂಬ ಲವಲವಿಕೆಯಿಂದ ಎಲ್ಲರನ್ನೂ ನಗಿಸಿದರು. ಒಟ್ಟಾರೆ ಎಪಿಸೋಡ್ನಲ್ಲಿ ಸಾಕಷ್ಟು ಫನ್ ತುಂಬಿತ್ತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.