‘ಅಪ್ಪನ ಹೆಸರನ್ನು ಹೇಗೆ ಕಾಪಾಡಿಕೊಳ್ಳಬೇಕು ಎಂಬುದಕ್ಕೆ ಶಿವರಾಜ್ಕುಮಾರ್ ಒಳ್ಳೆಯ ಉದಾಹರಣೆ’; ಧನುಷ್
ಶಿವರಾಜ್ ಕುಮಾರ್ ಅವರು ಕ್ಯಾನ್ಸರ್ ಚಿಕಿತ್ಸೆಗಾಗಿ ಅಮೆರಿಕದಲ್ಲಿದ್ದಾರೆ. ಅವರ ಹಳೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. 'ಜೈಲರ್' ಮತ್ತು 'ಕ್ಯಾಪ್ಟನ್ ಮಿಲ್ಲರ್' ಚಿತ್ರಗಳಲ್ಲಿನ ಅವರ ಅಭಿನಯಕ್ಕೆ ಧನುಷ್ ಅವರು ಪ್ರಶಂಸೆ ವ್ಯಕ್ತಪಡಿಸಿದ್ದರು. ಧನುಷ್ ಅವರ ಈ ಮಾತುಗಳು ಸಹ ವೈರಲ್ ಆಗಿವೆ. ಅಭಿಮಾನಿಗಳು ವಿವಿಧ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ.
ಶಿವರಾಜ್ಕುಮಾರ್ ಅವರು ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಅವರ ಖ್ಯಾತಿ ದಿನ ಕಳೆದಂತೆ ಹೆಚ್ಚುತ್ತಲೇ ಇದೆ. ಅವರು ಈಗ ಒಂದು ಬ್ರೇಕ್ನಲ್ಲಿ ಇದ್ದಾರೆ. ಅವರಿಗೆ ಕ್ಯಾನ್ಸರ್ ಇರುವ ಕಾರಣ ಅಮೆರಿಕ ತೆರಳಿದ್ದು, ಅಲ್ಲಿ ಚಿಕಿತ್ಸೆಗೆ ಒಳಗಾಗಲಿದ್ದಾರೆ. ಈ ಸಂದರ್ಭದಲ್ಲಿ ಅವರ ಹಳೆಯ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಇದಕ್ಕೆ ಫ್ಯಾನ್ಸ್ ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.
ಶಿವರಾಜ್ಕುಮಾರ್ ಅವರು ಇತ್ತೀಚೆಗೆ ಕನ್ನಡದಲ್ಲಿ ಮಾತ್ರವಲ್ಲದೆ ಪರಭಾಷೆಯಲ್ಲೂ ಹೆಸರು ಮಾಡಿದ್ದಾರೆ. ಅವರ ಖ್ಯಾತಿ ಹೆಚ್ಚುತ್ತಿದೆ. ಅವರು ತಮಿಳು ಸಿನಿಮಾಗಳಲ್ಲಿ ನಟಿಸಿದ್ದರು. ಧನುಷ್ ನಟನೆಯ ‘ಕ್ಯಾಪ್ಟನ್ ಮಿಲ್ಲರ್’ ಹೆಸರಿನ ಸಿನಿಮಾದಲ್ಲಿ ಶಿವರಾಜ್ಕುಮಾರ್ ನಟಿಸಿದ್ದರು. ಈ ಚಿತ್ರದ ಮೂಲಕ ಅವರು ಗಮನ ಸೆಳೆದಿದ್ದರು. ಈ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಧನುಷ್ ಆಡಿದ ಮಾತನ್ನು ವೈರಲ್ ಮಾಡಲಾಗುತ್ತಿದೆ.
‘ಜೈಲರ್’ ಸಿನಿಮಾದಲ್ಲಿ ಶಿವರಾಜ್ಕುಮಾರ್ ನಟಿಸಿದ್ದರು. ಅವರ ಎಂಟ್ರಿಗೆ ಸಖತ್ ಸಿಳ್ಳೆ ಬಿದ್ದಿತ್ತು. ರಜನಿಕಾಂತ್ ಕೂಡ ಶಿವರಾಜ್ಕುಮಾರ್ಗೆ ಕರೆ ಮಾಡಿ, ‘ಒಂದೇ ದೃಶ್ಯದಲ್ಲಿ ಎಲ್ಲರನ್ನೂ ತಿಂದ್ಕೊಂಡು ಬಿಟ್ಯಲ್ಲ’ ಎಂದು ಹೆಮ್ಮೆಯಿಂದ ಹೇಳಿದ್ದರಂತೆ. ಧನುಷ್ಗೂ ಈ ಚಿತ್ರ ಇಷ್ಟ ಆಗಿದ್ದು, ಕ್ಯಾಪ್ಟನ್ ಮಿಲ್ಲರ್ ಈವೆಂಟ್ನಲ್ಲಿ ಮಾತನಾಡಿದ್ದರು.
‘ಜೈಲರ್ ಕ್ಲೈಮ್ಯಾಕ್ಸ್ ಸ್ಲೋ ಮೋಷನ್ನಲ್ಲಿ ನಡೆದು ಬಂದಹಾಗೆಯೇ ತಮಿಳುನಾಡು ಜನರ ಮನಸ್ಸಲ್ಲೂ ಹಾಗೆಯೇ ನಡೆದು ಹೋದ್ರಿ. ಮನುಷ್ಯನ ಮನಸ್ಸಿಗೆ, ನಿಮ್ಮ ಕೆಲಸಕ್ಕೆ ನಾನು ದೊಡ್ಡ ಅಭಿಮಾನಿ. ಅಪ್ಪನ ಹೆಸರನ್ನು ಹೇಗೆ ಕಾಪಾಡಿಕೊಳ್ಳಬೇಕು ಎಂಬುದಕ್ಕೆ ದೊಡ್ಡ ಉದಾಹರಣೆ. ನನ್ನ ಮಗ ಇದ್ದಾನೆ. ನಿಮ್ಮ ನೋಡಿ ಕಲಿಯಬೇಕು’ ಎಂದರು.
View this post on Instagram
ಆ ಬಳಿಕ ಎದ್ದು ನಿಂತು ಶಿವರಾಜ್ಕುಮಾರ್ ಅವರಿಗೆ ಜೋರಾದ ಚಪ್ಪಾಳೆ ತಟ್ಟಲು ಹೇಳಿದರು. ಅಲ್ಲಿ ನೆರೆದಿದ್ದ ಸಾವಿರಾರು ಮಂದಿ ಶಿವರಾಜ್ಕುಮಾರ್ ಅವರಿಗೆ ಎದ್ದು ನಿಂತು ಚಪ್ಪಾಳೆ ತಟ್ಟಿದರು. ಈಗ ವಿಡಿಯೋನ ಎಲ್ಲೂ ವೈರಲ್ ಮಾಡುತ್ತಿದ್ದಾರೆ. ಇದಕ್ಕೆ ಫ್ಯಾನ್ಸ್ ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಾ ಇದ್ದಾರೆ.
ಇದನ್ನೂ ಓದಿ: ಕಮಲ್ ಹಾಸನ್ನ ತಬ್ಬಿ ಮೂರು ದಿನ ಸ್ನಾನ ಮಾಡಿರಲಿಲ್ಲ ಶಿವರಾಜ್ಕುಮಾರ್
ಶಿವರಾಜ್ಕುಮಾರ್ ಅವರು ಸದ್ಯ ಅಮೆರಿಕದಲ್ಲಿ ಇದ್ದಾರೆ. ಅಲ್ಲಿ ಅವರು ಚಿಕಿತ್ಸೆ ಪಡೆಯುತ್ತಾ ಇದ್ದಾರೆ. ಶೀಘ್ರವೇ ಅವರು ಶಸ್ತ್ರಚಿಕಿತ್ಸೆ ಪಡೆಯಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.