ತ್ರಿವಿಕ್ರಮ್​ನ ಹೊರಗೆ ಕಳಿಸಿ ಮತ್ತೆ ವಾಪಸ್ ಕರೆಸಿದ್ದು ಯಾಕೆ? ಕಾರಣ ತಿಳಿಸಿದ ಸುದೀಪ್

ಈ ವಾರ ಬಿಗ್ ಬಾಸ್ ಮನೆಯಿಂದ ತ್ರಿವಿಕ್ರಮ್​ ಅವರು ಎಲಿಮಿನೇಟ್ ಆದರು ಎಂದು ಭಾನುವಾರದ ಎಪಿಸೋಡ್​ನಲ್ಲಿ ತೋರಿಸಲಾಗಿತ್ತು. ಆದರೆ ಅವರು ಎಲಿಮಿನೇಟ್​ ಆಗಿಲ್ಲ. ಸೋಮವಾರದ ಸಂಚಿಕೆಯಲ್ಲಿ ಅವರು ವಾಪಸ್ ಬಿಗ್ ಬಾಸ್ ಮನೆಗೆ ಬಂದಿದ್ದಾರೆ. ಈ ವಿಷಯವನ್ನು ಸ್ವತಃ ಸುದೀಪ್ ಅವರು ಘೋಷಿಸಿದಾಗಲೇ ದೊಡ್ಮನೆ ಮಂದಿಗೆ ಅಸಲಿ ವಿಷಯ ಗೊತ್ತಾಯಿತು.

ತ್ರಿವಿಕ್ರಮ್​ನ ಹೊರಗೆ ಕಳಿಸಿ ಮತ್ತೆ ವಾಪಸ್ ಕರೆಸಿದ್ದು ಯಾಕೆ? ಕಾರಣ ತಿಳಿಸಿದ ಸುದೀಪ್
Trivikram, Bhavya Gowda
Follow us
ಮದನ್​ ಕುಮಾರ್​
|

Updated on: Dec 23, 2024 | 10:12 PM

ತ್ರಿವಿಕ್ರಮ್ ಅವರು ಕಳೆದ ವಾರ ತಮ್ಮನ್ನು ತಾವೇ ನಾಮಿನೇಟ್ ಮಾಡಿಕೊಂಡಿದ್ದರು. ಅವರ ಆ ನಿರ್ಧಾರಕ್ಕೆ ಅನೇಕರು ಅಚ್ಚರಿ ವ್ಯಕ್ತಪಡಿಸಿದ್ದರು. ಅದಕ್ಕಿಂತಲೂ ಹೆಚ್ಚು ಅಚ್ಚರಿಯ ವಿಷಯ ಏನು ಎಂದರೆ, ಭಾನುವಾರ (ಡಿಸೆಂಬರ್​ 22) ತ್ರಿವಿಕ್ರಮ್​ ಎಲಿಮಿನೇಟ್ ಆಗಿದ್ದಾರೆ ಎಂದು ಕಿಚ್ಚ ಸುದೀಪ್ ತಿಳಿಸಿದರು. ಆಗ ಬಹುತೇಕರಿಗೆ ಶಾಕ್ ಆಯಿತು. ಆದರೆ ಸೋಮವಾರ (ಡಿ.23) ತ್ರಿವಿಕ್ರಮ್ ವಾಪಸ್ ಬಂದಿದ್ದಾರೆ. ಅವರನ್ನು ಎಲಿಮಿನೇಟ್​ ಅಂತ ಹೊರಗೆ ಕಳಿಸಿ ಮತ್ತೆ ಒಳಗೆ ಕರೆದುಕೊಂಡಿದ್ದು ಯಾಕೆ ಎಂಬುದನ್ನು ಕೂಡ ಸುದೀಪ್ ವಿವರಿಸಿದರು. ‘ತ್ರಿವಿಕ್ರಮ್​ಗೆ ಸ್ವಲ್ಪ ಬಿಸಿ ಮುಟ್ಟಿಸಬೇಕು ಎಂಬ ಕಾರಣಕ್ಕೆ ಈ ರೀತಿ ಮಾಡಿದ್ವಿ. ಈ ವಾರ ಓಟಿಂಗ್ ಲೈನ್ಸ್ ಓಪನ್ ಆಗಿರಲಿಲ್ಲ’ ಎಂದು ಸುದೀಪ್ ಹೇಳಿದರು.

ದೊಡ್ಮನೆಯಲ್ಲಿ ತ್ರಿವಿಕ್ರಮ್ ಅವರು ಸ್ಟ್ರಾಂಗ್ ಸ್ಪರ್ಧಿ ಎಂಬುದು ನಿಜ. ಆದರೆ ಅವರಿಗೆ ಓವರ್​ ಕಾನ್ಫಿಡೆನ್ಸ್ ಕೂಡ ಇದೆ. ಅದೇ ಕಾರಣಕ್ಕೆ ಅವರು ತಮ್ಮನ್ನು ತಾವು ನಾಮಿನೇಟ್ ಮಾಡಿಕೊಂಡಿದ್ದರು. ‘ಸೇವ್ ಆಗುತ್ತೇನೆ ಎಂಬ ಕಾನ್ಫಿಡೆನ್ಸ್ ನಿಮಗೆ ಇದೆಯಾ’ ಎಂದು ಸುದೀಪ್ ಅವರು ಪ್ರಶ್ನೆ ಮಾಡಿದ್ದರು. ಈಗ ಅವರು ಮತ್ತೆ ವಾಪಸ್ ಬಂದಿದ್ದಾರೆ. ಅವರ ಆಟ ಹೇಗಿರಲಿದೆ ಎಂಬುದನ್ನು ನೋಡಬೇಕಿದೆ.

ತ್ರಿವಿಕ್ರಮ್ ಮತ್ತು ಭವ್ಯಾ ಗೌಡ ಅವರು ಬಿಗ್ ಬಾಸ್ ಮನೆಯಲ್ಲಿ ಸಖತ್ ಕ್ಲೋಸ್ ಆಗಿದ್ದಾರೆ. ತ್ರಿವಿಕ್ರಮ್ ಎಲಿಮಿನೇಟ್ ಆಗುತ್ತಿದ್ದಾರೆ ಎಂದು ಸುದೀಪ್ ಘೋಷಿಸಿದ್ದಾಗ ಭವ್ಯಾ ಸಿಕ್ಕಾಪಟ್ಟೆ ಅತ್ತಿದ್ದರು. ಈಗ ತ್ರಿವಿಕ್ರಮ್ ವಾಪಸ್ ಬಂದಿರುವುದು ಭವ್ಯಾ ಅವರಿಗೆ ಖುಷಿ ಆಗಿದೆ. ಇನ್ನು, ಬಿಗ್ ಬಾಸ್ ಆಟದಲ್ಲಿ ಉಳಿದಿರುವುದು ಕೆಲವೇ ದಿನಗಳು ಮಾತ್ರ. ಹಾಗಾಗಿ ಎಲ್ಲರೂ ವೈಯಕ್ತಿಕ ಆಟದ ಕಡೆಗೆ ಹೆಚ್ಚು ಗಮನ ನೀಡಬೇಕಿದೆ.

ಇದನ್ನೂ ಓದಿ: ಮ್ಯಾಕ್ಸ್ ಟ್ರೇಲರ್: ರಗಡ್ ಲುಕ್​ನಲ್ಲಿ ಮಾಸ್ ಆಗಿ ಕಾಣಿಸಿಕೊಂಡ ಕಿಚ್ಚ ಸುದೀಪ್

ಭವ್ಯಾ ಗೌಡ ಅವರು ಈ ವಾರ ಕ್ಯಾಪ್ಟನ್ ಆಗಿದ್ದಾರೆ. ಹಾಗಾಗಿ ಅವರು ಮುಂದಿನ ವಾರಕ್ಕೆ ಬರುವುದು ಖಚಿತ. ತ್ರಿವಿಕ್ರಮ್ ಜೊತೆ ಹೆಚ್ಚು ಕಾಲ ಕಳೆದರೆ ಭವ್ಯಾ ಗೌಡ ಆಟಕ್ಕೆ ನಂತರದಲ್ಲಿ ತೊಂದರೆ ಆಗಬಹುದು. ತ್ರಿವಿಕ್ರಮ್ ಅವರು ಕೂಡ ತಮ್ಮ ವೈಯಕ್ತಿಕ ಆಟದ ಕಡೆಗೆ ಹೆಚ್ಚು ಗಮನ ನೀಡಬೇಕಿದೆ. ಉಗ್ರಂ ಮಂಜು ಮತ್ತು ಗೌತಮಿ ಜಾದವ್ ಅವರಿಗೂ ಇದೇ ಮಾತು ಅನ್ವಯ ಆಗಲಿದೆ. ಬಿಗ್ ಬಾಸ್ ಮನೆಯಲ್ಲಿ 85 ದಿನಗಳು ಕಳೆದಿವೆ. 12 ವಾರಗಳ ಕಳೆದಿದ್ದು, ಈಗ ಆಟದ ತೀವ್ರತೆ ಹೆಚ್ಚುತ್ತಿದೆ. ಮುಂದಿನ ವಾರ ಖಂಡಿತವಾಗಿ ಎಲಿಮಿನೇಷನ್ ಇರಲಿದೆ. ಡಬಲ್ ಎಲಿಮಿನೇಷನ್​ ಮತ್ತು ಮಿಡ್​ ವೀಕ್ ಎಲಿಮಿನೇಷನ್​ನ ಶಾಕ್ ಕೂಡ ಎದುರಾಗಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಸಿಟಿ ರವಿ ವಿರುದ್ಧ ರಾಷ್ಟ್ರಪತಿಗೆ ಪತ್ರ, ಮೋದಿ ಭೇಟಿ ಮಾಡುವೆ: ಹೆಬ್ಬಾಳ್ಕರ್
ಸಿಟಿ ರವಿ ವಿರುದ್ಧ ರಾಷ್ಟ್ರಪತಿಗೆ ಪತ್ರ, ಮೋದಿ ಭೇಟಿ ಮಾಡುವೆ: ಹೆಬ್ಬಾಳ್ಕರ್
ಭದ್ರಾವತಿ ಉಕ್ಕು ಕಾರ್ಖಾನೆಗೆ ಪುನಶ್ಚೇತನ: ಕುಮಾರಸ್ವಾಮಿ ಗುಡ್ ನ್ಯೂಸ್
ಭದ್ರಾವತಿ ಉಕ್ಕು ಕಾರ್ಖಾನೆಗೆ ಪುನಶ್ಚೇತನ: ಕುಮಾರಸ್ವಾಮಿ ಗುಡ್ ನ್ಯೂಸ್
ಸಿಟಿ ರವಿ ಅಶ್ಲೀಲ ಪದ ಬಳಸಿದ ವಿಡಿಯೋ ಬಿಡುಗಡೆ ಮಾಡಿದ ಲಕ್ಷ್ಮೀ ಹೆಬ್ಬಾಳ್ಕರ್
ಸಿಟಿ ರವಿ ಅಶ್ಲೀಲ ಪದ ಬಳಸಿದ ವಿಡಿಯೋ ಬಿಡುಗಡೆ ಮಾಡಿದ ಲಕ್ಷ್ಮೀ ಹೆಬ್ಬಾಳ್ಕರ್
ಕೊಹ್ಲಿ, ರೋಹಿತ್ ತಂಡಗಳನ್ನು ಸೋಲಿಸಿ 25 ಸಾವಿರ ರೂ. ಗೆದ್ದ ಯುವ ಆಟಗಾರ
ಕೊಹ್ಲಿ, ರೋಹಿತ್ ತಂಡಗಳನ್ನು ಸೋಲಿಸಿ 25 ಸಾವಿರ ರೂ. ಗೆದ್ದ ಯುವ ಆಟಗಾರ
ಬಳ್ಳಾರಿ: ಮನೆಯಿಂದ ದೂರವಾಗಿ 25 ವರ್ಷಗಳ ಬಳಿಕ ಪತ್ತೆಯಾದ ಮಹಿಳೆ
ಬಳ್ಳಾರಿ: ಮನೆಯಿಂದ ದೂರವಾಗಿ 25 ವರ್ಷಗಳ ಬಳಿಕ ಪತ್ತೆಯಾದ ಮಹಿಳೆ
ನೆಲಮಂಗಲ: ಬೆಳ್ಳಂ ಬೆಳಗ್ಗೆ ಬಾರ್ ತೆರದು ಅಕ್ರಮವಾಗಿ ಮದ್ಯ ಮಾರಾಟ
ನೆಲಮಂಗಲ: ಬೆಳ್ಳಂ ಬೆಳಗ್ಗೆ ಬಾರ್ ತೆರದು ಅಕ್ರಮವಾಗಿ ಮದ್ಯ ಮಾರಾಟ
ನಿಜಕ್ಕೂ ಎಲಿಮಿನೇಟ್ ಆದ್ರಾ ತ್ರಿವಿಕ್ರಂ?; ಅಭಿಮಾನಿಗಳಿಗೆ ಬಿಗ್ ಶಾಕ್
ನಿಜಕ್ಕೂ ಎಲಿಮಿನೇಟ್ ಆದ್ರಾ ತ್ರಿವಿಕ್ರಂ?; ಅಭಿಮಾನಿಗಳಿಗೆ ಬಿಗ್ ಶಾಕ್
ಅಯ್ಯಪ್ಪ ಮಾಲೆ ಧರಿಸಿದ ಬಳಿಕ ಈ ತಪ್ಪುಗಳನ್ನು ಮಾಡಲೇಬಾರದು
ಅಯ್ಯಪ್ಪ ಮಾಲೆ ಧರಿಸಿದ ಬಳಿಕ ಈ ತಪ್ಪುಗಳನ್ನು ಮಾಡಲೇಬಾರದು
Daily horoscope: ಸೋಮವಾರದ ದಿನ ಭವಿಷ್ಯ ತಿಳಿಯಿರಿ
Daily horoscope: ಸೋಮವಾರದ ದಿನ ಭವಿಷ್ಯ ತಿಳಿಯಿರಿ
ನೆಲಮಂಗಲ ಅಪಘಾತ: ದುರಂತಕ್ಕೂ ಮುನ್ನ ಚಂದ್ರಮ್ ಕೊನೆಯ ದೃಶ್ಯ ಇಲ್ಲಿದೆ ನೋಡಿ
ನೆಲಮಂಗಲ ಅಪಘಾತ: ದುರಂತಕ್ಕೂ ಮುನ್ನ ಚಂದ್ರಮ್ ಕೊನೆಯ ದೃಶ್ಯ ಇಲ್ಲಿದೆ ನೋಡಿ