ವಿಜಯಪುರ: ರಾಜ್ಯದಲ್ಲಿ ಧರ್ಮ ದಂಗಲ್ಗೆ ಬ್ರೇಕ್ ಬೀಳುತ್ತಿಲ್ಲ. ಒಂದಲ್ಲಾ ಒಂದು ವಿಚಾರಕ್ಕಾಗಿ ಧರ್ಮ ದಂಗಲ್ ಮತ್ತೆ ಮುನ್ನಲೆಗೆ ಬರುತ್ತಲೇ ಇದೆ. ಇತ್ತೀಚಿಗೆ ಅಂಜನಾದ್ರಿಯಲ್ಲಿ ಹಿಂದೂಯೇತರ ವ್ಯಾಪಾರಸ್ಥರಿಗೆ ಅವಕಾಶ ನೀಡಬಾರದೆಂದು ಹಿಂದೂ ಸಂಘಟನೆಗಳು ಬೋರ್ಡ್ ಹಾಕಿದ್ದವು. ಈಗ ಇದು ವಿಜಯಪುರಕ್ಕೂ ಕಾಲಿಟ್ಟಿದ್ದು, ನಗರದ ಸಿದ್ದೇಶ್ವರ ಜಾತ್ರೆಯಲ್ಲಿ (Siddeshwar jatre) ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶ ನೀಡಬಾರದೆಂದು ವಿಜಯಪುರ (Vijaypura) ಜಿಲ್ಲಾ ಶ್ರೀರಾಮಸೇನೆ ಕಾರ್ಯಕರ್ತರು (Shri ram sena activists), ಸಿದ್ದೇಶ್ವರ ಸಂಸ್ಥೆ ಅಧ್ಯಕ್ಷ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಅವರಿಗೆ ಮನವಿ ಮಾಡಿದ್ದಾರೆ.
ಪ್ರತಿವರ್ಷ ಸಂಕ್ರಮಣದ ವೇಳೆ 8 ದಿನ ಸಿದ್ದೇಶ್ವರ ಜಾತ್ರೆ ನಡೆಯುತ್ತದೆ. ಹೀಗಾಗಿ ಬಸನಗೌಡ ಪಾಟೀಲ್ ಯತ್ನಾಳ್ ನೇತೃತ್ವದಲ್ಲಿ ಈ ಬಾರಿಯ ಜಾತ್ರಾ ಪೂರ್ವಭಾವಿ ಸಭೆ ನಡೆದಿದೆ. ಸಭೆಯಲ್ಲಿ ಜಿಲ್ಲಾ ಶ್ರೀರಾಮಸೇನೆ ಕಾರ್ಯಕರ್ತರು ಅಂಗಡಿ-ಮುಂಗಟ್ಟು ಹಾಕಲು ಮುಸ್ಲೀಂ ವ್ಯಾಪಾರಸ್ಥರಿಗೆ ಅವಕಾಶ ನೀಡಬಾರದು. ಲವ್ ಜಿಹಾದ್ ನಿಲ್ಲೋವರೆಗೂ ವ್ಯಾಪಾರ ನಿಷೇಧಿಸುವಂತೆ ಮನವಿ ಮಾಡಿದ್ದಾರೆ.
ಅಂಜನಾದ್ರಿ ಬೆಟ್ಟದಲ್ಲಿ ಅನ್ಯ ಧರ್ಮೀಯರು ವ್ಯಾಪಾರ ಮಾಡುತ್ತಿದ್ದರೆ ಖಂಡಿಸುತ್ತೇನೆ- ಶಶಿಕಲಾ ಜೊಲ್ಲೆ
ಕೊಪ್ಪಳ: ಜಿಲ್ಲೆಯ ಗಂಗಾವತಿಯಲ್ಲಿ ಸಚಿವೆ ಶಶಿಕಲಾ ಜೊಲ್ಲೆ ಅಂಜನಾದ್ರಿ ಬೆಟ್ಟದಲ್ಲಿ ಅನ್ಯ ಧರ್ಮೀಯರ ವ್ಯಾಪಾರಕ್ಕೆ ವಿರೋಧ ವಿಚಾರವಾಗಿ ಈಗಾಗಲೇ ಮನವಿ ಕೊಟ್ಟಿದ್ದಾರೆ. ನನ್ನ ಗಮನಕ್ಕೆ ಬಂದಿದೆ. ಈ ಕುರಿತು ಏನೆಲ್ಲಾ ವ್ಯವಸ್ಥೆ ಮಾಡಿಕೊಳ್ಳಬೇಕೋ ಅದನ್ನ ಮಾಡುತ್ತೇನೆ. ಅನ್ಯ ಧರ್ಮಿಯರು ವ್ಯಾಪಾರ ಮಾಡುತ್ತಿದ್ದರೆ ಅದನ್ನು ಖಂಡಿಸುತ್ತೇನೆ. ಆದಷ್ಟು ನಮ್ಮ ಧರ್ಮದವರಿಗೆ ಅನುಕೂಲ ಆಗುವ ರೀತಿ ಮಾಡಿಕೊಡುತ್ತೇನೆ ಎಂದಿದ್ದರು.
ಗಂಗಾವತಿ ತಾಲೂಕಿನಲ್ಲಿರುವ ಹನುಮ ಜನ್ಮಸ್ಥಳ ಐತಿಹಾಸಿಕ ಅಂಜನಾದ್ರಿಯಲ್ಲಿಂದು ಹನುಮ ಮಾಲೆ ವಿಸರ್ಜನೆ ಹಿನ್ನಲೆ. ಅಂಜನಾದ್ರಿಯಲ್ಲಿ ಈ ಭಾರಿ ಹಿಂದೂಗಳನ್ನು ಹೊರತುಪಡಿಸಿ ವ್ಯಾಪಾರ ವಹಿವಾಟು ನೆಡಸದಂತೆ ಜಿಲ್ಲಾಧಿಕಾರಿಗೆ ಹಿಂದೂ ಜಾಗರಾಣ ವೇದಿಕೆ ಮನವಿ ಮಾಡಿತ್ತು. ಹೀಗಾಗಿ ಹಿಂದೂಗಳಿಗೆ ಮಾತ್ರ ವ್ಯಾಪಾರಕ್ಕೆ ಅವಕಾಶ ಮಾಡಿಕೊಟ್ಟಿತ್ತು. ಇದರ ಹೊರತಾಗಿ ಇಂದು ಮುಸ್ಲಿಂ ವರ್ತಕರು ವ್ಯಾಪಾರ ಮಾಡುತ್ತಿದ್ದಾರೆ ಎನ್ನುವ ಆರೋಪ ಕೇಳಿಬಂದಿದ್ದು ಅದಕ್ಕೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಶಶಿಕಲಾ ಜೊಲ್ಲೆಯವರು ಹೇಳಿದ್ದರು.
ಇನ್ನು ಇದೆ ಸಂದರ್ಭದಲ್ಲಿ ಮದರಸಾಗಳಂತೆ ಕೇಸರಿ ಶಾಲೆಗಳನ್ನ ಆರಂಭಿಸಬೇಕು ಎನ್ನುವ ವಿಚಾರವಾಗಿ ಮಾತನಾಡಿದ ಅವರು ಈಗಾಗಲೇ ಆ ಬೇಡಿಕೆಯಿದೆ, ಸಂಘರ್ಷ ನಡೆಯುತ್ತಿದೆ. ಶಿಕ್ಷಣ ಸಚಿವರು, ಸಿಎಂ ವಿಶೇಷ ಕಾಳಜಿ ವಹಿಸುತ್ತಾರೆ. ಯಾವುದಕ್ಕೂ ಹಿಂದುಗಳಿಗೆ ಅನ್ಯಾಯ ಆಗಬಾರದು. ಒಂದೇ ನಿಯಮದಡಿ ಶಿಕ್ಷಣ ಕಲಿಯಬೇಕು ಮದರಾಸಗಳನ್ನ ಸ್ಥಗಿತಗೊಳಬೇಕು ಎನ್ನುವುದಲ್ಲ, ಅಲ್ಲಿ ಹಿಂದೂ ವಿರೋಧಿ ಚಟುವಟಿಕೆ ಆಗಬಾರದು ಎಂದು ತಿಳಿಸಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:11 pm, Wed, 7 December 22