ಟಿವಿ9 ಕನ್ನಡ ಸುದ್ದಿ ವಾಹಿನಿಯ ಆ್ಯಂಕರ್ ಸುಕನ್ಯಾಗೆ ಒಲಿದ ರಾಜ್ಯ ಮಟ್ಟದ ಪ್ರಶಸ್ತಿ

| Updated By: ಗಂಗಾಧರ​ ಬ. ಸಾಬೋಜಿ

Updated on: Feb 04, 2023 | 4:46 PM

ಪತ್ರಿಕೋದ್ಯಮ ಕ್ಷೇತ್ರದಲ್ಲಿನ ಗಣನೀಯ ಸಾಧನೆಗೆ ಟಿವಿ9 ಕನ್ನಡ ಸುದ್ದಿ ವಾಹಿನಿಯ ಸುದ್ದಿ ವಾಚಕಿ‌ ಸುಕನ್ಯಾ ಅವರಿಗೆ ರಾಜ್ಯ ಮಟ್ಟ ಪ್ರಶಸ್ತಿ ಒಲಿದು ಬಂದಿದೆ.

ಟಿವಿ9 ಕನ್ನಡ ಸುದ್ದಿ ವಾಹಿನಿಯ ಆ್ಯಂಕರ್ ಸುಕನ್ಯಾಗೆ ಒಲಿದ ರಾಜ್ಯ ಮಟ್ಟದ ಪ್ರಶಸ್ತಿ
ಆ್ಯಂಕರ್ ಸುಕನ್ಯಾಗೆ ಒಲಿದ ರಾಜ್ಯ ಮಟ್ಟದ ಪ್ರಶಸ್ತಿ
Follow us on

ವಿಜಯಪುರ: ಪತ್ರಿಕೋದ್ಯಮ ಕ್ಷೇತ್ರದಲ್ಲಿನ ಗಣನೀಯ ಸಾಧನೆಗೆ ಟಿವಿ9 ಕನ್ನಡ ಸುದ್ದಿ ವಾಹಿನಿಯ ಸುದ್ದಿ ವಾಚಕಿ‌ ಸುಕನ್ಯಾ (Sukanya) ಅವರಿಗೆ ರಾಜ್ಯ ಮಟ್ಟ ಪ್ರಶಸ್ತಿ (State Level Award) ಒಲಿದು ಬಂದಿದೆ. ಜಿಲ್ಲೆಯಲ್ಲಿ ಇಂದು (ಫೆ. 4) ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಶ್ರೀ ಕಂದಗಲ್ ಹಣಮಂತರಾಯ ರಂಗಮಂದಿರದಲ್ಲಿ ಆಯೋಜಿಸಿದ್ದ “37ನೇ ಪತ್ರಕರ್ತರ ರಾಜ್ಯ ಸಮ್ಮೇಳನ”ದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಪ್ರಶಸ್ತಿ‌ ಪ್ರದಾನ ಮಾಡಿದರು. ಸುಕನ್ಯಾ‌ ಅವರ ಜೊತೆಗೆ ಸಿಎಂ ಬೊಮ್ಮಾಯಿ ಮಾಧ್ಯಮ ಸಂಯೋಜಕರಾದ ಶಂಕರ ಪಾಗೋಜಿ ಹಾಗೂ ಬಿ.ಎನ್ ಮಲ್ಲೇಶ್​ ಅವರಿಗೂ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಪತ್ರಕರ್ತರು ಪ್ರಾದೇಶಿಕ ಪತ್ರಕರ್ತರು ಆಗಬಾರದು: ಸಿಎಂ ಬೊಮ್ಮಾಯಿ

ಬಳಿಕ ಸಿಎಂ ಬಸವರಜ ಬೊಮ್ಮಾಯಿ ಮಾತನಾಡಿ, ಒಂದು ಕೆಲಸ ಬೇಡ ಎಂದರೆ ಹಲವು ಕಾರಣಗಳು ಇರುತ್ತವೆ. ಆದರೆ ಜನರಿಗೆ ಒಳ್ಳೇದಾಗುತ್ತೆ ಎಂದರೆ ಆ ಕೆಲಸ ಮಾಡಬೇಕು. ಪತ್ರಕರ್ತರು ಪ್ರಾದೇಶಿಕ ಪತ್ರಕರ್ತರು ಆಗಬಾರದು. ಅಖಂಡ ಕರ್ನಾಟಕದ ಪತ್ರಕರ್ತರು ಆಗಬೇಕು. ಎಲ್ಲ ಭಾಗ ಅಭಿವೃದ್ಧಿ ಆಗಬೇಕು ಎಂದ್ರೆ ಎಲ್ಲರೂ ಸಮಗ್ರ ಕರ್ನಾಟಕದ ಬಗ್ಗೆ ಮಾತನಾಡಬೇಕು. ಪತ್ರಕರ್ತರು ಹಾಗೂ ರಾಜಕಾರಣಿಗಳು ಅವಿನಾಭಾವ ಸಂಬಂಧ ಇದೆ. ನಮ್ಮನ್ನ ಬಿಟ್ಟು ನೀವು, ನಿಮ್ಮನ್ನ ಬಿಟ್ಟು ನಾವು ಇರೋಕಾಗಲ್ಲಾ ಎಂದು ಹೇಳಿದರು.

ಇದನ್ನೂ ಓದಿ: ಕಾರ್ಕಳ ಸಚಿವ ಸುನೀಲಕುಮಾರ್ ಕ್ಷೇತ್ರ, ಅಲ್ಲಿ ಬೇರೆಯವರಿಗೆ ಅವಕಾಶವಿಲ್ಲ ಎಂದು ಶ್ರೀರಾಮಸೇನೆಗೆ ಟಾಂಗ್ ಕೊಟ್ಟ ಸಿಎಂ ಬೊಮ್ಮಾಯಿ

ಪತ್ರಿಕೋದ್ಯಮ ಗಟ್ಟಿಗೊಳಿಸುವುದು ಸವಾಲಿನ‌ ಕೆಲಸ

ಪತ್ರಿಕೆ ಇರದಿದ್ದರೆ ನಮ್ಮನ್ನ ಯಾರೂ ಕೇಳುತ್ತಿರಲಿಲ್ಲ. ನಮ್ಮ ವ್ಯಕ್ತಿತ್ವವನ್ನು ರೂಪಿಸುವುದು ಪತ್ರಿಕೆಗಳು. ರಾಜಕಾರಣಿಗಳು ಇರದಿದ್ದರೆ ಪತ್ರಿಕೆಯಲ್ಲಿ ಬರೀ ಸ್ಪೋರ್ಟ್ ಸುದ್ದಿ ಬರಿಬೇಕಿತ್ತು. ಈಗ ಮೊದಲು ಪುಟದಲ್ಲಿ ರಾಜಕಾರಣದ ಸುದ್ದಿ ಇರುತ್ತದೆ. ಹಾಗಾಗಿ ರಾಜಕಾರಣ, ಪತ್ರಿಕೋದ್ಯಮ ಆರೋಗ್ಯಕರ ಸಂಬಂಧ ಇರಬೇಕು. ಪ್ರತಿಯೊಬ್ಬ ಓದುಗನೂ ಪತ್ರಕರ್ತನಾಗಿದ್ದಾನೆ. ಇಂತಹ ಸಂದರ್ಭದಲ್ಲಿ ಪತ್ರಿಕೋದ್ಯಮ ಗಟ್ಟಿಗೊಳಿಸುವುದು ಸವಾಲಿನ‌ ಕೆಲಸ ಎಂದರು.

ಗ್ರಾಮೀಣ ಪತ್ರಕರ್ತರಿಗೂ ಉಚಿತ ಬಸ್ ಪಾಸ್

ಕ್ರೆಡಿಬಿಲಿಟಿ, ಎಕ್ಸೆಪ್ಟಿಬಿಲಿಟಿ ಮೂಲಕ ಪತ್ರಿಕೋದ್ಯಮ ಉಳಿಸಿಕೊಳ್ಳಬೇಕಿದೆ. ಗ್ರಾಮೀಣ ಪತ್ರಕರ್ತರಿಗೂ ಉಚಿತ ಬಸ್ ಪಾಸ್ ಕೊಡಬೇಕು ಎಂಬುದು ಕೇಳಿದ್ದೀರಿ. ಖಂಡಿತವಾಗಿ ನಾನು ಒಪ್ಪಿಕೊಳ್ಳುವೆ. ಸಂಘದಿಂದ ಸರ್ಟಿಫೈಡ್ ಮಾಡಿ ಸರಿಯಾದ ರೀತಿಯಲ್ಲಿ ಕೊಟ್ಟರೆ ನಾನು ಬಜೆಟ್​ನಲ್ಲಿ ಅನುದಾನ ನೀಡಿ ಅನುಕೂಲ ಕಲ್ಪಿಸಲಾಗುವುದು ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.

ಇದನ್ನೂ ಓದಿ: ಡಿಕೆಶಿಗೆ ಟಾಂಗ್ ಕೊಟ್ಟ ಸಹೋದರಿ ಪತಿ: ತವರು ಜಿಲ್ಲೆಯಲ್ಲೇ ಡಿಕೆ ಶಿವಕುಮಾರ್​ಗೆ ಮುಜುಗರ

ವಿಜಯಪುರ ಅಭಿವೃದ್ಧಿಯತ್ತ ಸಾಗಿದೆ

ವಿಜಯಪುರದ ಜನ ಜೋಳದಷ್ಟೆ ಗಟ್ಟಿಯಾಗಿದ್ದಾರೆ. ಜಿಲ್ಲೆ ಅಭಿವೃದ್ಧಿಯತ್ತ ಸಾಗಿದೆ. ಸರ್ವಸ್ವವನ್ನೂ ತ್ಯಾಗ ಮಾಡಿದ ಜನ ಇಲ್ಲಿದ್ದಾರೆ. ಮೂರನೇ ಪೀಳಿಗೆಯ ಕನಸು ನನಸಾಗುವ ದೃಡಸಂಕಲ್ಪದಿಂದ ಕೆಲಸ ಮಾಡಬೇಕಿದೆ. ನಾನು ನೀರಾವರಿ ಸಚಿವನಾಗಿದ್ದಾಗ ಗುತ್ತಿ ಬಸವಣ್ಣ ಯೋಜನೆ ಅಧಿಕಾರಿಗಳು ಯೋಜನೆ ಮಾಡೋದು ಬೇಡ ಎಂದಿದ್ದರು. ಸ್ಕೀಂ ಒಂದೇ ಇದೆ, ಎ & ಬಿ ಎಂದು ಸ್ಕೀಂ ಇಲ್ಲಾ. ನೀರಿನ ವಿಚಾರ ಬಂದಾಗ ಟ್ರ್ಯೂಬಿನಲ್ ಆದೇಶ ಪಾಲನೆ ಮಾಡಬೇಕು. 2009 ರಲ್ಲಿ 9 ಯೋಜನೆಗಳನ್ನು ನಾನು ಆರಂಭಿಸಿದ್ದೆ. ಆಡಳಿತ ಮಾಡುವವರಲ್ಲಿ ಸ್ಪಷ್ಟತೆ ಇರಬೇಕು ಎಂದು ಹೇಳಿದರು.

ರಾಜ್ಯ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.