ಮೀನು ಹಿಡಿಯಲು ಹೋಗಿ ನಾಪತ್ತೆಯಾಗಿದ್ದವರು ಶವವಾಗಿ ಪತ್ತೆ

| Updated By: ಆಯೇಷಾ ಬಾನು

Updated on: Jun 13, 2020 | 3:59 PM

ವಿಜಯಪುರ: ಎಲ್ಲೆಡೆ ಲಾಕ್‌ಡೌನ್‌ ಇತ್ತು. ಮನೆಯಲ್ಲೇ ಇದ್ದು ಬೇಜಾರಗಿತ್ತು ಅಂತಾ ಕಾಣುತ್ತೆ. ಹೀಗಾಗಿ ಮೀನು ಹಿಡಿಯೋಣ ಅಂತಾ ಹೋದವರು ಮೂವರು ಜನ. ಆದ್ರೆ ಹಿಂದಿರುಗಿ ಬಂದದ್ದು ಮಾತ್ರ ಒಬ್ಬೇ ಒಬ್ಬ. ಇನ್ನುಳಿದ ಇಬ್ಬರು ಸಿಕ್ಕಿದ್ದು ಶವವಾಗಿ. ಹೌದು ಈ ದುರ್ಘಟನೆ ನಡೆದಿರೋದು ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲೂಕಿನಲ್ಲಿ. ಕೃಷ್ಣಾ ನದಿಗೆ ಹೊಂದಿಕೊಂಡಿರುವ ಸಿದ್ದನಾಥ ಗ್ರಾಮದ ಮೂವರು ಗುರುವಾರ ನದಿಯಲ್ಲಿ ಮೀನು ಹಿಡಿಯೋಕೆ ಅಂತಾ ಹೋಗಿದ್ರು. ಆದ್ರೆ ಇವರ ದುರಾದೃಷ್ಟಕ್ಕೆ ಮಳೆ ಮತ್ತು ಜೋರಾಗಿ ಬೀಸುತ್ತಿದ್ದ ಗಾಳಿಗೆ ಇವರಿದ್ದ […]

ಮೀನು ಹಿಡಿಯಲು ಹೋಗಿ ನಾಪತ್ತೆಯಾಗಿದ್ದವರು ಶವವಾಗಿ ಪತ್ತೆ
Follow us on

ವಿಜಯಪುರ: ಎಲ್ಲೆಡೆ ಲಾಕ್‌ಡೌನ್‌ ಇತ್ತು. ಮನೆಯಲ್ಲೇ ಇದ್ದು ಬೇಜಾರಗಿತ್ತು ಅಂತಾ ಕಾಣುತ್ತೆ. ಹೀಗಾಗಿ ಮೀನು ಹಿಡಿಯೋಣ ಅಂತಾ ಹೋದವರು ಮೂವರು ಜನ. ಆದ್ರೆ ಹಿಂದಿರುಗಿ ಬಂದದ್ದು ಮಾತ್ರ ಒಬ್ಬೇ ಒಬ್ಬ. ಇನ್ನುಳಿದ ಇಬ್ಬರು ಸಿಕ್ಕಿದ್ದು ಶವವಾಗಿ.

ಹೌದು ಈ ದುರ್ಘಟನೆ ನಡೆದಿರೋದು ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲೂಕಿನಲ್ಲಿ. ಕೃಷ್ಣಾ ನದಿಗೆ ಹೊಂದಿಕೊಂಡಿರುವ ಸಿದ್ದನಾಥ ಗ್ರಾಮದ ಮೂವರು ಗುರುವಾರ ನದಿಯಲ್ಲಿ ಮೀನು ಹಿಡಿಯೋಕೆ ಅಂತಾ ಹೋಗಿದ್ರು. ಆದ್ರೆ ಇವರ ದುರಾದೃಷ್ಟಕ್ಕೆ ಮಳೆ ಮತ್ತು ಜೋರಾಗಿ ಬೀಸುತ್ತಿದ್ದ ಗಾಳಿಗೆ ಇವರಿದ್ದ ತೆಪ್ಪ ಮುಗುಚಿ ಬಿದ್ದಿತ್ತು.

ಈ ಮೂವರ ಪೈಕಿ ಅಕ್ಷಯ ಲಮಾಣಿ ಈಜಿ ದಡ ಸೇರಿದ್ದ. ಆದ್ರೆ ಇನ್ನೂಳಿದ ಇಬ್ಬರಾದ 36 ವರ್ಷದ ಪರಶುರಾಮ್‌ ಮತ್ತು 38 ವರ್ಷದ ರಮೇಶ್‌ ಲಮಾಣಿ ಈಜಲು ಸಾಧ್ಯವಾಗದೇ ನದಿಯಲ್ಲಿ ಕಾಣೆಯಾಗಿದ್ರು. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯರು ಮತ್ತು ಪೊಲೀಸರು ಕಾಣೆಯಾದವರಿಗಾಗಿ ಶೋಧ ಕಾರ್ಯ ಆರಂಭಿಸಿದ್ರು. ಸತತ ಎರಡು ದಿನಗಳ ಕಾರ್ಯಚರಣೆ ನಂತರ ಈಗ ಈ ಇಬ್ಬರ ಶವಗಳು ನದಿಯಲ್ಲಿ ಪತ್ತೆಯಾಗಿವೆ. ಈ ಸಂಬಂಧ ಕೊಲ್ಹಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Published On - 2:15 pm, Sat, 13 June 20