15 ದಿನದ ನಂತರ ಕರ್ತವ್ಯಕ್ಕೆ ಹಾಜರಾದ ಕೋವಿಡ್ ವಾರಿಯರ್, ಅಂದು ASPಗೆ ಆಗಿದ್ದೇನು?

| Updated By:

Updated on: Jun 09, 2020 | 7:06 AM

ವಿಜಯಪುರ: ಇಡೀ ಪ್ರಪಂಚವನ್ನೇ ನಡುಗಿಸಿ ಅಲುಗಾಡಿಸಿ ಕೇಕೆ ಹಾಕಿ ಕುಣಿದ ವೈರಸ್ ಕೊರೊನಾ. ಇಲ್ಲಿಯವರೆಗೂ ಕೊರೊನಾಗೆ ಔಷಧಿ ಕಂಡು ಹಿಡಿಯಲಾಗಿಲ್ಲ ಎಂಬುದು ವಿಜ್ಞಾನಕ್ಕೆ ಸವಾಲಾದಂತಾಗಿದೆ. ಇಲ್ಲಿ ಕೊರೊನಾದ ವಿರುದ್ಧ ಹೋರಾಡಿದವರನ್ನು, ಎಮರ್ಜೆನ್ಸಿ ಕಾಲದಲ್ಲಿ ಜನರ ಸೇವೆ ಮಾಡಿದವರನ್ನು ನಾವೆಲ್ಲ ಕೊವಿಡ್ ವಾರಿಯರ್ಸ್ ಎಂದು ಕರೆಯುತ್ತೇವೆ. ಇದೇ ಕೊವಿಡ್ ವಾರಿಯರ್ ಆಗಿದ್ದ ಓರ್ವ ಪೊಲೀಸ್ ಆಧಿಕಾರಿ ದಿಢೀರನೆ ಆಸ್ಪತ್ರೆ ಸೇರುವಂತಾಗಿತ್ತು. ಮೇ 4 ರ ಬೆಳಗ್ಗೆ 6 ಗಂಟೆ ವೇಳೆ ಕರ್ತವ್ಯದ ಮೇಲಿದ್ದ ವಿಜಯಪುರ ಎಎಸ್​ಪಿ ಡಾ.ರಾಮ್ ಅರಸಿದ್ದಿ […]

15 ದಿನದ ನಂತರ ಕರ್ತವ್ಯಕ್ಕೆ ಹಾಜರಾದ ಕೋವಿಡ್ ವಾರಿಯರ್, ಅಂದು ASPಗೆ ಆಗಿದ್ದೇನು?
Follow us on

ವಿಜಯಪುರ: ಇಡೀ ಪ್ರಪಂಚವನ್ನೇ ನಡುಗಿಸಿ ಅಲುಗಾಡಿಸಿ ಕೇಕೆ ಹಾಕಿ ಕುಣಿದ ವೈರಸ್ ಕೊರೊನಾ. ಇಲ್ಲಿಯವರೆಗೂ ಕೊರೊನಾಗೆ ಔಷಧಿ ಕಂಡು ಹಿಡಿಯಲಾಗಿಲ್ಲ ಎಂಬುದು ವಿಜ್ಞಾನಕ್ಕೆ ಸವಾಲಾದಂತಾಗಿದೆ. ಇಲ್ಲಿ ಕೊರೊನಾದ ವಿರುದ್ಧ ಹೋರಾಡಿದವರನ್ನು, ಎಮರ್ಜೆನ್ಸಿ ಕಾಲದಲ್ಲಿ ಜನರ ಸೇವೆ ಮಾಡಿದವರನ್ನು ನಾವೆಲ್ಲ ಕೊವಿಡ್ ವಾರಿಯರ್ಸ್ ಎಂದು ಕರೆಯುತ್ತೇವೆ.

ಇದೇ ಕೊವಿಡ್ ವಾರಿಯರ್ ಆಗಿದ್ದ ಓರ್ವ ಪೊಲೀಸ್ ಆಧಿಕಾರಿ ದಿಢೀರನೆ ಆಸ್ಪತ್ರೆ ಸೇರುವಂತಾಗಿತ್ತು. ಮೇ 4 ರ ಬೆಳಗ್ಗೆ 6 ಗಂಟೆ ವೇಳೆ ಕರ್ತವ್ಯದ ಮೇಲಿದ್ದ ವಿಜಯಪುರ ಎಎಸ್​ಪಿ ಡಾ.ರಾಮ್ ಅರಸಿದ್ದಿ ಅವರನ್ನು ಆಸ್ಪತ್ರೆಗೆ ದಾಖಲು ಮಾಡಿದ್ದರು. ಏಕೆಂದರೆ ಕಂಟೇನ್ಮೆಂಟ್​ ಏರಿಯಾದ ಬಳಿ ರಸ್ತೆ ಮೇಲೆ ಬ್ಯಾರಿಕೇಡ್ ಸರಿಪಡಿಸುವ ವೇಳೆ ವೇಗವಾಗಿ ಬಂದ ಬೈಕ್ ಸವಾರ ಎಎಸ್​ಪಿಗೆ ಡಿಕ್ಕಿಯೊಡೆದಿತ್ತು.

ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಡಾ.ರಾಮ್ ಅರಸಿದ್ದಿಯನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಸತತ 15 ದಿನಗಳ ಕಾಲ ಚಿಕಿತ್ಸೆ ನೀಡಿದ ಬಳಿಕ ರಾಮ್ ಸ್ವಲ್ಪ ಚೇತರಿಕೆ ಕಂಡಿದ್ದರು. ನಂತರ ಕ್ರಮೇಣ ಆರೋಗ್ಯ ಸುಧಾರಿಸಿ ಅಪಾಯದಿಂದ ಪಾರಾದರು. ಇಂದು ಅದೇ ಡಾ.ರಾಮ್ ಕರ್ತವ್ಯಕ್ಕೆ ಹಾಜರಾಗಿದ್ದಾರೆ.

ಗುಣಮುಖರಾದ ಕೂಡಲೇ ಕರ್ತವ್ಯಕ್ಕೆ ಹಾಜರಾಗಲು ಆಗಮಿಸಿದ ಎಎಸ್​ಪಿ ಡಾ.ರಾಮ್ ಅರಸಿದ್ದಿಯವರನ್ನು ರೆಡ್ ಕಾರ್ಪೆಟ್ ಹಾಕಿ, ಸ್ವಾಗತಿಸಲಾಯಿತು. ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ ಅಗ್ರವಾಲ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.