ನನ್ನ ವಿರುದ್ಧ ವೃಥಾ ಸುಳ್ಳು ಸುದ್ದಿಗಳನ್ನು ಹಬ್ಬಿಸಲಾಗುತ್ತಿದೆ, ಬಿಜೆಪಿಗೆ ವಾಪಸ್ಸು ಹೋಗುವ ಪ್ರಶ್ನೆಯೇ ಉದ್ಭವಿಸದು: ಜಗದೀಶ್ ಶೆಟ್ಟರ್

|

Updated on: Nov 28, 2023 | 2:38 PM

ಸಹೋದರ ಪ್ರದೀಪ್ ಶೆಟ್ಟರ್ ಲೋಕ ಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಗಾಗಿ ತಾನು ಲಾಬಿ ಮಾಡುತ್ತಿರುವೆನೆಂದು ಹರಡಿರುವ ಸುದ್ದಿಯೂ ಶುದ್ಧ ಸುಳ್ಳು ಎಂದು ಜಗದೀಶ್ ಶೆಟ್ಟರ್ ಹೇಳಿದರು. 2023 ರ ವಿಧಾನಸಭಾ ಚುನಾವಣೆಯಲ್ಲಿ ಅನುಭವಿಸಿದ ಹೀನಾಯ ಸೋಲಿನಿಂದ ಚೇತರಿಸಿಕೊಳ್ಳುವುದು ಬಿಜೆಪಿ ನಾಯಕರಿಗೆ ಸಾಧ್ಯವಾಗುತ್ತಿಲ್ಲ ಎಂದು ಶೆಟ್ಟರ್ ಹೇಳಿದರು.

ಹುಬ್ಬಳ್ಳಿ: ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಜಗದೀಶ್ ಶೆಟ್ಟರ್ (Jagadish Shettar), ಬಿಜೆಪಿಯ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ತಮ್ಮನ್ನು ಭೇಟಿಯಾಗಿಲ್ಲ ಮತ್ತು ಭೇಟಿಯಾದರೂ ಬಿಜೆಪಿ ವಾಪಸ್ಸು ಹೋಗುವ ಪ್ರಶ್ನೆಯೇ ಉದ್ಭವಿಸಲ್ಲ ಎಂದು ಹೇಳಿದರು. ಅದೆಲ್ಲ ಸುಳ್ಳು ವದಂತಿ, ಉದ್ದೇಶಪೂರ್ವಕವಾಗಿಯೇ ತಮ್ಮನ್ನು ಕುರಿತು ಸುಳ್ಳುಗಳನ್ನು ಹರಡುವ ಕೆಲಸ ಬಿಜೆಪಿ ನಾಯಕರು (BJP leaders) ಮಾಡುತ್ತಿದ್ದಾರೆ. ಕೆಲ ಬಿಜೆಪಿ ನಾಯಕರು ತಮ್ಮ ಸಂಪರ್ಕದಲ್ಲಿರೋದು ಅವರಿಗೆ ಗೊತ್ತಿದೆ, ಅವರನ್ನು ಅಧೀರರನ್ನಾಗಿಸಲು, ಅಂದರೆ ಕಾಂಗ್ರೆಸ್ ಸೇರುವುದನ್ನು ತಡೆಯಲು ಸುಳ್ಳು ವದಂತಿಗಳನ್ನು ಹರಿಬಿಡಲಾಗುತ್ತಿದೆ ಎಂದು ಶೆಟ್ಟರ್ ಹೇಳಿದರು. ಯಾರೆಲ್ಲ ತಮ್ಮ ಸಂಪರ್ಕದಲ್ಲಿದ್ದಾರೆ ಮತ್ತು ಕಾಂಗ್ರೆಸ್ ಸೇರುವ ಪ್ರಯತ್ನದಲ್ಲಿದ್ದಾರೆ ಅಂತ ಕೇಳಿದರೆ, ಅವರ ಹೆಸರುಗಳನ್ನು ಬಹಿರಂಗ ಮಾಡಲಾಗಲ್ಲ ಎಂದು ಶೆಟ್ಟರ್ ಹೇಳಿದರು. ಕೆಲವು ಬಿಜೆಪಿ ನಾಯಕರು ಕಾಂಟ್ಯಾಕ್ಟ್ ನಲ್ಲಿದ್ದಾರೆ ಅಂತ ಬಹಳ ದಿನಗಳಿಂದ ಶೆಟ್ಟರ್ ಹೇಳುತ್ತಿದ್ದಾರೆ. ಅದು ನಿಜವೇ ಆಗಿದ್ದರೆ, ಕಾಂಗ್ರೆಸ್ ಸೇರಲು ಇಷ್ಟೆಲ್ಲ ದಿನಗಳಿಂದ ಯಾಕೆ ಕಾಯತ್ತಿದ್ದಾರೆ ಅನ್ನೋ ಪ್ರಶ್ನೆ ಉದ್ಭವಿಸುತ್ತದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on