ವಿಷ್ಣುವರ್ಧನ್​ 11ನೇ ವರ್ಷದ ಪುಣ್ಯತಿಥಿ: ಅಭಿಮಾನ್ ಸ್ಟುಡಿಯೋದಲ್ಲಿ ವಿಷ್ಣು ಸ್ಮಾರಕಕ್ಕೆ ಪೂಜೆ

ಕಾಮನ್ ಡಿಪಿ ಟ್ರೆಂಡ್​ ಅನ್ನು ಅಭಿಮಾನಿಗಳು ಆರಂಭಿಸಿದ್ದಾರೆ. ಇತ್ತೀಚೆಗಷ್ಟೇ ವಿಷ್ಣು ಪ್ರತಿಮೆ ಧ್ವಂಸ ಪ್ರಕರಣ ಬೇಸರ ತರಿಸಿತ್ತು. ಹೀಗಾಗಿ ಪುಣ್ಯತಿಥಿ ದಿನ ಕಾಮನ್​ ಡಿಪಿ ಅಭಿಯಾನಕ್ಕೆ ನಿರ್ಧಾರ ಮಾಡಲಾಗಿದೆ.

ವಿಷ್ಣುವರ್ಧನ್​ 11ನೇ ವರ್ಷದ ಪುಣ್ಯತಿಥಿ: ಅಭಿಮಾನ್ ಸ್ಟುಡಿಯೋದಲ್ಲಿ ವಿಷ್ಣು ಸ್ಮಾರಕಕ್ಕೆ ಪೂಜೆ
ವಿಷ್ಣುವರ್ಧನ್
Edited By:

Updated on: Dec 29, 2020 | 10:11 PM

ಬೆಂಗಳೂರು: ಸಾಹಸಸಿಂಹ ಡಾ. ವಿಷ್ಣುವರ್ಧನ್​ 11ನೇ ವರ್ಷದ ಪುಣ್ಯತಿಥಿ ಹಿನ್ನೆಲೆಯಲ್ಲಿ ನಗರದ ಅಭಿಮಾನ್ ಸ್ಟುಡಿಯೋದಲ್ಲಿ ಬುಧವಾರ (ಡಿ.30) ಅಭಿಮಾನಿಗಳು ಪೂಜೆ ನೆರವೇರಿಸಲಿದ್ದಾರೆ. ವಿಷ್ಣುವರ್ಧನ್​ ಪತ್ನಿ ಭಾರತಿ ಮೈಸೂರಿನಲ್ಲಿರುವ ವಿಷ್ಣು ಸ್ಮಾರಕಕ್ಕೆ ಪೂಜೆ ಸಲ್ಲಿಸಲಿದ್ದಾರೆ. ಇವರ ಜೊತೆಗೆ ಅಭಿಮಾನಿಗಳು ಕೂಡ ಪಾಲ್ಗೊಳ್ಳಲಿದ್ದಾರೆ.

ಇನ್ನು, ಕಾಮನ್ ಡಿಪಿ ಟ್ರೆಂಡ್​ ಅನ್ನು ಅಭಿಮಾನಿಗಳು ಆರಂಭಿಸಿದ್ದಾರೆ. ಇತ್ತೀಚೆಗಷ್ಟೇ ವಿಷ್ಣು ಪ್ರತಿಮೆ ಧ್ವಂಸ ಪ್ರಕರಣ ಬೇಸರ ತರಿಸಿತ್ತು. ಹೀಗಾಗಿ ಪುಣ್ಯತಿಥಿ ದಿನ ಕಾಮನ್​ ಡಿಪಿ ಅಭಿಯಾನಕ್ಕೆ ನಿರ್ಧಾರ ಮಾಡಲಾಗಿದೆ.

ಸೋಮವಾರ ವಿಷ್ಣು​​ ಪ್ರತಿಮೆ ಮರುಸ್ಥಾಪನೆಗೆ ಭೂಮಿಪೂಜೆ ನಡೆದಿತ್ತು. ಡಿಸೆಂಬರ್ 30ಕ್ಕೆ ವಿಷ್ಣುವರ್ಧನ್​​ ಪ್ರತಿಮೆಯನ್ನು ಮರುಸ್ಥಾಪನೆ ಮಾಡಲಾಗುವುದು ಎಂದು ಅವರ ಅಭಿಮಾನಿಗಳು ಹೇಳಿದ್ದರು. ಈ ಕಾರ್ಯಕ್ರಮ ಕೂಡ ನಾಳೆ ನೆರವೇರುವ ಸಾಧ್ಯತೆ ಇದೆ. ಬೆಂಗಳೂರಿನ ಮಾಗಡಿ ರಸ್ತೆಯ ಟೋಲ್ ಗೇಟ್ ಬಳಿ ನಟ ಡಾ.ವಿಷ್ಣುವರ್ಧನ್ ಪ್ರತಿಮೆ ಧ್ವಂಸ ಮಾಡಿದ ಪ್ರಕರಣ ಭಾರೀ ಸಂಚಲನ ಸೃಷ್ಟಿಸಿದೆ. ಅಲ್ಲದೆ, ಈ ವಿಚಾರಕ್ಕೆ ಸಂಬಂಧಿಸಿ ಬಹಳಷ್ಟು ಜನರು ಆಕ್ರೋಶ ಕೂಡ ಹೊರ ಹಾಕಿದ್ದರು.

ಡಾ.ವಿಷ್ಣು ಅಭಿಮಾನಿಗಳಿಗೆ ಸಿಹಿ ಸುದ್ದಿ: ಧ್ವಂಸವಾದ ಜಾಗದಲ್ಲೇ ಮತ್ತೆ ತಲೆ ಎತ್ತಲಿದೆ ಸಾಹಸಸಿಂಹನ ಪ್ರತಿಮೆ

 

ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us