ಹೋಂ ಸ್ಟೇನಲ್ಲಿ ಯುವತಿ ಅನುಮಾನಾಸ್ಪದ ಸಾವು ಕೇಸ್​ಗೆ ಹೊಸ ಟ್ವಿಸ್ಟ್​

ಮೂಡಿಗೆರೆ ತಾಲೂಕಿನ ಹಾಂದಿ ಗ್ರಾಮದಲ್ಲಿರುವ ಖಾಸಗಿ ಹೋಂಸ್ಟೇ ಸ್ನಾನದ ಗೃಹದಲ್ಲಿ ಯುವತಿ ಅನುಮಾಸ್ಪದ ಸಾವು ಕೇಸ್​ಗೆ ಟ್ವಿಸ್ಟ್​ ಸಿಕ್ಕಿದೆ. ಹೋಂ ಸ್ಟೇನಲ್ಲಿರುವ ಸಿಸಿ ಕ್ಯಾಮರಾಗಳೂ ಕಾರ್ಯ ನಿರ್ವಹಿಸುತ್ತಿಲ್ಲ ಎಂಬ ವಿಷಯ ಗೊತ್ತಾಗಿದ್ದು, ಇಲ್ಲಿ ವಾಸ್ತವ್ಯ ಮಾಡಿದವರ ಮಾಹಿತಿ ಕೂಡ ನಿಗೂಢವಾಗಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ. ಹೀಗಾಗಿ ಯುವತಿ ಸಾವಿನ ಹಿಂದೆ ನೂರಾರು ಅನುಮಾನಗಳು ಶುರುವಾಗಿವೆ.

ಹೋಂ ಸ್ಟೇನಲ್ಲಿ ಯುವತಿ ಅನುಮಾನಾಸ್ಪದ ಸಾವು ಕೇಸ್​ಗೆ ಹೊಸ ಟ್ವಿಸ್ಟ್​
ಮೃತ ಯುವತಿ ರಂಜಿತಾ
Updated By: ಪ್ರಸನ್ನ ಹೆಗಡೆ

Updated on: Oct 26, 2025 | 10:28 AM

ಚಿಕ್ಕಮಗಳೂರು, ಅಕ್ಟೋಬರ್​ 26: ಮೂಡಿಗೆರೆ (Mudigere) ತಾಲೂಕಿನ ಹಾಂದಿ ಗ್ರಾಮದಲ್ಲಿರುವ ಖಾಸಗಿ ಹೋಂಸ್ಟೇ ಸ್ನಾನದ ಗೃಹದಲ್ಲಿ ಯುವತಿ ಅನುಮಾಸ್ಪದ ಸಾವು ಕೇಸ್​ಗೆ ಹೊಸ ಟ್ವಿಸ್ಟ್​ ಸಿಕ್ಕಿದೆ. ಹೋಂ ಸ್ಟೇಗೆ ಲೈಸೆನ್ಸ್​ ಇಲ್ಲ ಎಂಬುದು ಒಂದೆಡೆಯಾದರೆ, ಇಲ್ಲಿ ವಾಸ್ತವ್ಯ ಮಾಡಿದವರ ಮಾಹಿತಿ ಕೂಡ ನಿಗೂಢವಾಗಿರುವುದು ಪೊಲೀಸ್​ ತನಿಖೆ ವೇಳೆ ಬೆಳಕಿಗೆ ಬಂದಿದೆ. ಸ್ನೇಹಿತೆ ಎಂಗೇಜ್​ಮೆಂಟ್​ಗಾಗಿ ಬೆಂಗಳೂರಿನಿಂದ ಬಂದಿದ್ದ ರಂಜಿತಾ ಮತ್ತು ರೇಖಾ ಹಿಪ್ಲ ಹೋಂ ಸ್ಟೇನಲ್ಲಿ ರೂಂ ಪಡೆದಿದ್ದರು. ಆ ಬಳಿಕ ಸ್ನಾನದ ‌ಗೃಹದಲ್ಲಿ ರಂಜಿತಾ (27) ಅನುಮಾನಸ್ಪದ ಸಾವನ್ನಪ್ಪಿದ್ದರು.

ಮೂಲತಃ ಬೇಲೂರು ತಾಲೂಕಿನ ದೇವಲಾಪುರ ಗ್ರಾಮದ ರಂಜಿತಾ, ರೇಖಾ ಜೊತೆಗೂಡಿ ಎರಡು ದಿನಗಳವರೆಗೂ ಹೋಂಸ್ಟೇನಲ್ಲಿ ರೂಮ್‌ ಪಡೆದಿದ್ದರು. ಅಂದು ಸಂಜೆ ಫಾಸ್ಟ್​ಫುಡ್ ಅಂಗಡಿಯಲ್ಲಿ ಇಬ್ಬರೂ ಸಮಯ ಕಳೆದಿದ್ದು, ಬಳಿಕ ಸ್ಕೂಟಿಯಲ್ಲಿ ರಂಜಿತಾ ಮತ್ತು ರೇಖಾ ಹೋಂ ಸ್ಟೇಗೆ ಬಂದಿದ್ದರು ಎನ್ನಲಾಗಿದೆ. ಬೆಂಗಳೂರಿನ ಖಾಸಗಿ ಕಂಪನಿ ಉದ್ಯೋಗಿಯಾಗಿದ್ದ ರಂಜಿತಾರ ಮರಣೋತ್ತರ ಪರೀಕ್ಷೆ ಮೂಡಿಗೆರೆ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದ್ದು, ಆಕೆಯ ಪೋಷಕರು ನೀಡಿದ ದೂರಿನ ಅನ್ವಯ ಆಲ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಯುವತಿ ಸಾವಿನ ಹಿಂದೆ ನೂರಾರು ಅನುಮಾನಗಳು ಶುರುವಾಗಿದ್ದು, ಹೋಂ ಸ್ಟೇನಲ್ಲಿರುವ ಸಿಸಿ ಕ್ಯಾಮರಾಗಳೂ ಕಾರ್ಯ ನಿರ್ವಹಿಸುತ್ತಿಲ್ಲ ಎಂಬ ವಿಷಯ ಗೊತ್ತಾಗಿದೆ.

ಇದನ್ನೂ ಓದಿ: ಮರದಲ್ಲಿ ಹೊಡೆದಿದ್ದ ಹರಕೆಯ ತಗಡಿನಿಂದ ಗೃಹಿಣಿ ನಾಪತ್ತೆ ಹಿಂದಿನ ಕೊಲೆ ರಹಸ್ಯ ಬಯಲು

ಹೋಂ ಸ್ಟೇಗೆ ಇರಲಿಲ್ಲ ಪರವಾನಿಗೆ

ಇನ್ನು ಹೋಂ ಸ್ಟೇಗೆ ಪ್ರವಾಸೋದ್ಯಮ ಇಲಾಖೆ ಮತ್ತು ಜಿಲ್ಲಾಡಳಿತದಿಂದ 9ಲಒ ಇರಲಿಲ್ಲ. ಹೀಗಿದ್ದರೂ ಎಲ್ಲ ನಿಯಮಗಳನ್ನ ಗಾಳಿಗೆ ತೂರಿ ಕಳೆದ ಎರಡು ವರ್ಷಗಳಿಂದ ಮಾಲೀಕ ಇದನ್ನು ನಡೆಸಿಕೊಂಡುಬಂದಿದ್ದ. ಹೀಗಿದ್ದರೂ ಹೋಂ ಸ್ಟೇ ವಿರುದ್ಧ ಇಲ್ಲಿಯವರೆಗೆ ಯಾಕೆ ಕ್ರಮ ಆಗಿಲ್ಲ ಎಂಬ ಪ್ರಶ್ನೆಯೂ ಉದ್ಭವಿಸಿದೆ. ಪೊಲೀಸರು , ಪ್ರವಾಸೋದ್ಯಮ ಇಲಾಖೆ ವಿರುದ್ಧವೇ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 10:27 am, Sun, 26 October 25