ಮಾವನಿಂದಲೇ ಸೊಸೆ ಮೇಲೆ ಅತ್ಯಾಚಾರ ಆರೋಪ: ಮನನೊಂದು ವಿಷ ಕುಡಿದ ಮಹಿಳೆ ಆಸ್ಪತ್ರೆಯಲ್ಲಿ ಸಾವು

| Updated By: ಸಾಧು ಶ್ರೀನಾಥ್​

Updated on: Feb 09, 2021 | 11:02 AM

ಮಾವನಿಂದಲೇ ಸೊಸೆ ಮೇಲೆ ಅತ್ಯಾಚಾರವಾಗಿರುವ ಆರೋಪ ಜಿಲ್ಲೆಯ ಬೇಲೂರು ತಾಲೂಕಿನ ಸಿ.ಹೊಸಳ್ಳಿಯಲ್ಲಿ ಕೇಳಿಬಂದಿದೆ. ಈ ನಡುವೆ, ಪ್ರಕರಣದಿಂದ ಮನನೊಂದು ವಿಷ ಸೇವಿಸಿದ್ದ 30 ವರ್ಷದ ಮಹಿಳೆ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಇಂದು ಅಸುನೀಗಿದ್ದಾರೆ. Rape

ಮಾವನಿಂದಲೇ ಸೊಸೆ ಮೇಲೆ ಅತ್ಯಾಚಾರ ಆರೋಪ: ಮನನೊಂದು ವಿಷ ಕುಡಿದ ಮಹಿಳೆ ಆಸ್ಪತ್ರೆಯಲ್ಲಿ ಸಾವು
ಮೃತ ಮಹಿಳೆಯ ಅಂತ್ಯಸಂಸ್ಕಾರದ ವೇಳೆ ಕುಟುಂಬಸ್ಥರ ವಾಗ್ವಾದ
Follow us on

ಹಾಸನ: ಮಾವನಿಂದಲೇ ಸೊಸೆ ಮೇಲೆ ಅತ್ಯಾಚಾರವಾಗಿರುವ ಆರೋಪ ಜಿಲ್ಲೆಯ ಬೇಲೂರು ತಾಲೂಕಿನ ಸಿ.ಹೊಸಳ್ಳಿಯಲ್ಲಿ ಕೇಳಿಬಂದಿದೆ. ಈ ನಡುವೆ, ಪ್ರಕರಣದಿಂದ ಮನನೊಂದು ವಿಷ ಸೇವಿಸಿದ್ದ 30 ವರ್ಷದ ಮಹಿಳೆ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಇಂದು ಅಸುನೀಗಿದ್ದಾರೆ. Rape

ಏನಿದು ಪ್ರಕರಣ?
6 ವರ್ಷಗಳ ಹಿಂದೆ ಪುಟ್ಟರಾಜು ಎಂಬಾತನ ಜೊತೆ ಮಹಿಳೆ ವಿವಾಹವಾಗಿದ್ದರು. ಕಳೆದ ಡಿಸೆಂಬರ್ 21 ರಂದು ಮಹಿಳೆಯ ಮಾವ ವೆಂಕಟೇಶ್ ಜೋಗಿ ಆಕೆ ಮೇಲೆ ಅತ್ಯಾಚಾರ ಎಸಗಿದ್ದನಂತೆ. ಇದರಿಂದ, ಮನನೊಂದ ಮಹಿಳೆ ಜ.15ರಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಜನವರಿ 17 ರಂದು ತನ್ನ ಮೇಲೆ ನಡೆದಿದ್ದ ದೌರ್ಜನ್ಯದ ಬಗ್ಗೆ ಮಹಿಳೆ ಪೊಲೀಸರಿಗೆ ಹೇಳಿಕೆ ಕೊಟ್ಟಿದ್ದರಂತೆ. ಹಾಗಾಗಿ, ಪೊಲೀಸರು ಆರೋಪಿ ವೆಂಕಟೇಶ್ ಜೋಗಿಯನ್ನು ಬಂಧಿಸಿದ್ದರು.

ಈ ನಡುವೆ, ಕಳೆದ 20 ದಿನಗಳಿಂದ ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆ ಇಂದು ಕೊನೆಯುಸಿರೆಳೆದಿದ್ದಾರೆ. ಹಾಗಾಗಿ, ಪತಿಯ ಮನೆ ಮುಂದೆಯೇ ಅಂತ್ಯಸಂಸ್ಕಾರ ನೆರವೇರಿಸಬೇಕೆಂದು ಮೃತ ಮಹಿಳೆಯ ಪೋಷಕರ ಪಟ್ಟುಹಿಡಿದರು. ಹೀಗಾಗಿ, ಎರಡು ಕುಟುಂಬಗಳ ನಡುವೆ ವಾಗ್ವಾದ ನಡೆಯಿತು.

Rape ಪುತ್ತೂರು: ನೌಕಾಪಡೆ ಅಧಿಕಾರಿಯ ಬೀಳ್ಕೊಡುಗೆ ಪಾರ್ಟಿಗೆ ಬಂದಿದ್ದ ಯುವತಿ ಮೇಲೆ ಅತ್ಯಾಚಾರ

Published On - 10:08 pm, Mon, 8 February 21