ಬೆಂಗಳೂರು: ಕರ್ನಾಟಕ ಪೊಲೀಸ್ ಪಡೆಯ ಅತ್ಯುನ್ನತ ತಂಡವಾದ ಗರುಡಾ ಕಮಾಂಡೋ ತಂಡಕ್ಕೆ ಇದೀಗ ನಾರಿಶಕ್ತಿಯ ಬಲ ಸಿಗಲಿದೆ. ಹೌದು, ಗರುಡಾ ಕಮಾಂಡೋ ಪಡೆಗೆ ಇದೀಗ ಮಹಿಳಾ ಪೊಲೀಸ್ ಸಿಬ್ಬಂದಿ ಸಹ ಸೇರ್ಪಡೆಯಾಗಲಿದ್ದಾರೆ.
ಸದ್ಯ, ಮೊದಲ ಬ್ಯಾಚ್ನಲ್ಲಿ 16 ಮಹಿಳಾ ಪೊಲೀಸರಿಗೆ ಕಮಾಂಡೋ ತರಬೇತಿ ನೀಡಲಾಗುತ್ತಿದೆ. ಆಂತರಿಕ ಭದ್ರತಾ ವಿಭಾಗದ ಪೊಲೀಸ್ ವರಿಷ್ಠಾಧಿಕಾರಿ ಮಧುರಾ ವೀಣಾ ನೇತೃತ್ವದಲ್ಲಿ ಮಹಿಳಾ ಕಮಾಂಡೋಸ್ಗೆ ತರಬೇತಿ ನೀಡಲಾಗುತ್ತಿದೆ. ಜೊತೆಗೆ, ಆಂತರಿಕ ಭದ್ರತಾ ವಿಭಾಗದ ADGP ಭಾಸ್ಕರ್ ರಾವ್ ಅವರ ಮುಂದಾಳತ್ವದಲ್ಲಿ ಮಹಿಳಾ ಸಿಬ್ಬಂದಿಗೆ ತರಬೇತಿ ನೀಡಲಾಗುತ್ತಿದೆ. ಈ ಟ್ರೈನಿಂಗ್ಗಾಗಿ ಪೊಲೀಸ್ ಇಲಾಖೆಯಲ್ಲಿರುವ ಬೆಸ್ಟ್ ಮಹಿಳಾ ಪೊಲೀಸರನ್ನು ಆಯ್ಕೆಮಾಡಲಾಗಿದೆ.
ರಾಜ್ಯ ಸರ್ಕಾರದ ದಿವ್ಯಾಂಗ ಹಾಗೂ ವಿಶೇಷಚೇತನ ಅಧಿಕಾರಿ, ನೌಕರರಿಗೆ ಸಿಕ್ತು ‘ವರ್ಕ್ ಫ್ರಂ ಹೋಂ’ ಅವಕಾಶ