ಸಾಲ ತೀರಿಸಲು 3 ತಿಂಗಳು ಕಾಲಾವಕಾಶ ನೀಡಿ, ಇಲ್ಲದಿದ್ದರೆ ಫೈನಾನ್ಸ್ ಹೆಸರು ಬರೆದು ನೇಣು ಹಾಕಿಕೊಳ್ತೀವಿ; ಮೈಸೂರು ಮಹಿಳೆಯರ ಅಳಲು

|

Updated on: May 03, 2021 | 10:31 AM

ಬೆಳ್ಳಂಬೆಳಗ್ಗೆ ಹಣ ಪಾವತಿಸುವಂತೆ ಮನೆಯ ಬಾಗಿಲಿಗೆ ಬಂದು ಖಾಸಗಿ ಫೈನಾನ್ಸ್ ಸಿಬ್ಬಂದಿಗಳು ನಿಲ್ಲುತ್ತಿದ್ದಾರೆ. ಕೊರೊನಾ ಲಾಕ್​ಡೌನ್​ ಹಿನ್ನೆಲೆ ನಮ್ಮನ್ನು ಯಾರೂ ಕೂಲಿಗೆ ಕರೆಯುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಹಣವನ್ನು ಹೇಗೆ ಕಟ್ಟುವುದು. ಸಮಯ ಕೇಳಿದರು ಖಾಸಗಿ ಫೈನಾನ್ಸ್ ಸಿಬ್ಬಂದಿಗಳು ಸ್ಪಂದಿಸುತ್ತಿಲ್ಲ ಎಂದು ಮಹಿಳೆಯರು ಹೇಳುತ್ತಿದ್ದಾರೆ.

ಸಾಲ ತೀರಿಸಲು 3 ತಿಂಗಳು ಕಾಲಾವಕಾಶ ನೀಡಿ, ಇಲ್ಲದಿದ್ದರೆ ಫೈನಾನ್ಸ್ ಹೆಸರು ಬರೆದು ನೇಣು ಹಾಕಿಕೊಳ್ತೀವಿ; ಮೈಸೂರು ಮಹಿಳೆಯರ ಅಳಲು
ಮೈಕ್ರೋ ಫೈನಾನ್ಸ್ ವಿರುದ್ಧ ಮಹಿಳೆಯರ ಆರೋಪ
Follow us on

ಮೈಸೂರು: ಸಾಲ ತೀರಿಸಲು 3 ತಿಂಗಳು ಕಾಲಾವಕಾಶ ನೀಡಿ. ಇಲ್ಲದಿದ್ದರೆ ಫೈನಾನ್ಸ್ ಹೆಸರು ಬರೆದು ನೇಣು ಹಾಕಿಕೊಳ್ತೀವಿ ಎಂದು ಮೈಕ್ರೋ ಫೈನಾನ್ಸ್​ಗಳಿಂದ ಸಾಲ ಪಡೆದ ಮಹಿಳೆಯರು ಕಣ್ಣೀರು ಹಾಕಿದ್ದಾರೆ. ಮೈಸೂರು ಜಿಲ್ಲೆಯ ನಂಜನಗೂಡಿನ ಮೈಕ್ರೋ ಫೈನಾನ್ಸ್ ದೇವನೂರು ಗ್ರಾಮದ ಸ್ತ್ರೀ ಶಕ್ತಿ ಸಂಘದ ಮಹಿಳೆಯರಿಗೆ ಸಾಲ ನೀಡಿತ್ತು. ಆದರೆ ಸಂಕಷ್ಟದ ಸ್ಥಿತಿಯಲ್ಲಿ ಸಾಲ ಮರುಪಾವತಿ ಮಾಡುವಂತೆ ಮೈಕ್ರೋ ಫೈನಾನ್ಸ್ ಕಿರುಕುಳ ನೀಡುತ್ತಿದೆ ಎಂದು ಮಹಿಳೆಯರು ಆರೋಪ ಮಾಡುತ್ತಿದ್ದಾರೆ.

ಬೆಳ್ಳಂಬೆಳಗ್ಗೆ ಹಣ ಪಾವತಿಸುವಂತೆ ಮನೆಯ ಬಾಗಿಲಿಗೆ ಬಂದು ಖಾಸಗಿ ಫೈನಾನ್ಸ್ ಸಿಬ್ಬಂದಿಗಳು ನಿಲ್ಲುತ್ತಿದ್ದಾರೆ. ಕೊರೊನಾ ಲಾಕ್​ಡೌನ್​ ಹಿನ್ನೆಲೆ ನಮ್ಮನ್ನು ಯಾರೂ ಕೂಲಿಗೆ ಕರೆಯುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಹಣವನ್ನು ಹೇಗೆ ಕಟ್ಟುವುದು. ಸಮಯ ಕೇಳಿದರು ಖಾಸಗಿ ಫೈನಾನ್ಸ್ ಸಿಬ್ಬಂದಿಗಳು ಸ್ಪಂದಿಸುತ್ತಿಲ್ಲ. ಹೀಗೆ ಕಿರುಕುಳ ನೀಡಿದರೆ ನಾವು ಸಾಯುತ್ತೇವೆ ಎಂದು ಹೇಳುತ್ತಿರುವ ಮಹಿಳೆಯರು, ಖಾಸಗಿ ಫೈನಾನ್ಸ್ ಸಿಬ್ಬಂದಿಗಳ ವಿರುದ್ಧ ತಹಶೀಲ್ದಾರ್ ಪೊಲೀಸ್ ಇಲಾಖೆಗೆ ದೂರು ನೀಡಿದ್ದಾರೆ.

ಇದನ್ನೂ ಓದಿ

ಉಸಿರಾಟ ಸಮಸ್ಯೆಯಿಂದ ಮಾಲೀಕ ಮೃತಪಡುತ್ತಿದ್ದಂತೆ ಶ್ವಾನವೂ ಸಾವು, ಬೆಂಗಳೂರಿನಲ್ಲಿ ಮನಕಲಕುವ ಘಟನೆ

ರಕ್ಷಣಾ ಇಲಾಖೆಯ ಮೊರೆ ಹೋದ ಬಿಬಿಎಂಪಿ; ತಾತ್ಕಾಲಿಕ ಫೀಲ್ಡ್ ಆಸ್ಪತ್ರೆ ನಿರ್ಮಾಣಕ್ಕೆ ಮನವಿ

(Women who have been financed by microfinance are appealing to give them 3 months to pay off their debts)