ಪಾದರಾಯನಪುರದಲ್ಲಿ ಪುಂಡಾಟ: ಹೈಕೋರ್ಟ್ ಕಳವಳ, ವರದಿಗೆ ಸೂಚನೆ

ಬೆಂಗಳೂರು: ಪಾದರಾಯನಪುರದಲ್ಲಿ ದುಷ್ಕರ್ಮಿಗಳಿಂದ ಗಲಭೆ ಪ್ರಕರಣ, ಹೆಲ್ತ್ ವರ್ಕರ್ಸ್​ ಮೇಲಿನ ದಾಳಿಯಿಂದ ಹೈಕೋರ್ಟ್ ಕಳವಳಗೊಂಡಿದೆ. ಈ ಪ್ರಕರಣಗಳಲ್ಲಿ ರಾಜ್ಯ ಸರ್ಕಾರ ಏನು ಕ್ರಮ ಕೈಗೊಂಡಿದೆ ಎಂಬುದರ ಬಗ್ಗೆ ವರದಿ ನೀಡಲು ಸಹ ಹೈಕೋರ್ಟ್ ಸೂಚನೆ ನೀಡಿದೆ. ಇಂತಹ ಘಟನೆ ಮರುಕಳಿಸದಂತೆ ರಾಜ್ಯ ಸರ್ಕಾರ ಕೈಗೊಂಡ ಕ್ರಮಗಳೇನು? ಎಂದು ರಾಜ್ಯ ಸರ್ಕಾರಕ್ಕೆ ಮುಖ್ಯ ನ್ಯಾಯಮೂರ್ತಿ ಅಭಯ್ ಎಸ್.ಒಕಾ ಪ್ರಶ್ನೆ ಹಾಕಿದ್ದಾರೆ. ಆಶಾ ಕಾರ್ಯಕರ್ತೆಯರಿಗೆ ಭದ್ರತೆ ನೀಡಲು ಸಾಧ್ಯವೇ? ಸಶಸ್ತ್ರ ಸಿಬ್ಬಂದಿ ಭದ್ರತೆ ನೀಡಲು ಸಾಧ್ಯವೇ ಎಂಬುದನ್ನೂ ಕೋರ್ಟ್ ತಿಳಿಯಬಯಸುತ್ತದೆ […]

ಪಾದರಾಯನಪುರದಲ್ಲಿ ಪುಂಡಾಟ: ಹೈಕೋರ್ಟ್ ಕಳವಳ, ವರದಿಗೆ ಸೂಚನೆ
ಕರ್ನಾಟಕ ಹೈಕೋರ್ಟ್​

Updated on: Apr 21, 2020 | 5:50 PM

ಬೆಂಗಳೂರು: ಪಾದರಾಯನಪುರದಲ್ಲಿ ದುಷ್ಕರ್ಮಿಗಳಿಂದ ಗಲಭೆ ಪ್ರಕರಣ, ಹೆಲ್ತ್ ವರ್ಕರ್ಸ್​ ಮೇಲಿನ ದಾಳಿಯಿಂದ ಹೈಕೋರ್ಟ್ ಕಳವಳಗೊಂಡಿದೆ. ಈ ಪ್ರಕರಣಗಳಲ್ಲಿ ರಾಜ್ಯ ಸರ್ಕಾರ ಏನು ಕ್ರಮ ಕೈಗೊಂಡಿದೆ ಎಂಬುದರ ಬಗ್ಗೆ ವರದಿ ನೀಡಲು ಸಹ ಹೈಕೋರ್ಟ್ ಸೂಚನೆ ನೀಡಿದೆ.

ಇಂತಹ ಘಟನೆ ಮರುಕಳಿಸದಂತೆ ರಾಜ್ಯ ಸರ್ಕಾರ ಕೈಗೊಂಡ ಕ್ರಮಗಳೇನು? ಎಂದು ರಾಜ್ಯ ಸರ್ಕಾರಕ್ಕೆ ಮುಖ್ಯ ನ್ಯಾಯಮೂರ್ತಿ ಅಭಯ್ ಎಸ್.ಒಕಾ ಪ್ರಶ್ನೆ ಹಾಕಿದ್ದಾರೆ. ಆಶಾ ಕಾರ್ಯಕರ್ತೆಯರಿಗೆ ಭದ್ರತೆ ನೀಡಲು ಸಾಧ್ಯವೇ? ಸಶಸ್ತ್ರ ಸಿಬ್ಬಂದಿ ಭದ್ರತೆ ನೀಡಲು ಸಾಧ್ಯವೇ ಎಂಬುದನ್ನೂ ಕೋರ್ಟ್ ತಿಳಿಯಬಯಸುತ್ತದೆ ಎಂದು ಸಿಜೆ ಹೇಳಿದ್ದಾರೆ. ರಾಜ್ಯ ಸರ್ಕಾರದ ನಿಲುವು ತಿಳಿಸಲು ಹೈಕೋರ್ಟ್ ಸೂಚನೆ ನೀಡಿದೆ.
ಜಿ.ಆರ್.ಮೋಹನ್ ಎಂಬುವವರು ಈ ಬಗ್ಗೆ ಅರ್ಜಿ ಸಲ್ಲಿಸಿದ್ದರು.