ಯಾದಗಿರಿ: ಕಷ್ಟಕಾಲದಲ್ಲಿ ಒದಗದ ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ಸಂತ್ರಸ್ತರ ತೀವ್ರ ಆಕ್ರೋಶ

| Updated By: shivaprasad.hs

Updated on: Jul 24, 2021 | 3:56 PM

Yadgiri Flood: ಜಿಲ್ಲಾ ಉಸ್ತುವಾರಿ ಸಚಿವ ಆರ್.ಶಂಕರ್ ವಿರುದ್ಧ ಜನರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೇವಲ ಖಾಸಗಿ ಕಾರ್ಯಕ್ರಮಕ್ಕಾಗಿ ಜಿಲ್ಲೆಗೆ ಬರುತ್ತೀರಿ, ಪ್ರವಾಹದ ಸಂದರ್ಭದಲ್ಲಿ ನಮ್ಮ ಕಷ್ಟಗಳನ್ನು ಕೇಳುವುದಕ್ಕೆ ಬರುವುದಿಲ್ಲವಲ್ಲ ಎಂದು ಜನರು ಕಿಡಿಕಾರಿದ್ದಾರೆ. ಈ ಕುರಿತ ಟಿವಿ9 ನೇರ ವರದಿ ಇಲ್ಲಿದೆ.

ಯಾದಗಿರಿ: ಪ್ರವಾಹಕ್ಕೆ ಸಿಲುಕಿ ಜನ ಪರದಾಡುತ್ತಿದ್ದರೂ ಜಿಲ್ಲಾ ಉಸ್ತುವಾರಿ ಸಚಿವರು ತಲೆಹಾಕದಿರುವುದು ಜನರ ಕೆಂಗಣ್ಣಿಗೆ ಗುರಿಯಾಗಿದೆ. ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಆರ್.ಶಂಕರ್ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಸಚಿವರು ಜಿಲ್ಲಾ ಕೇಂದ್ರಕ್ಕೆ ಬಂದರೂ ತಮ್ಮ ಕಷ್ಟ ಆಲಿಸುತ್ತಿಲ್ಲ. ಖಾಸಗಿ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಮರಳಿ ಹೋಗುತ್ತಾರೆ ಎಂದು ಆರೋಪಿಸಿದ್ದಾರೆ. ಇಂದು ಯಾದಗಿರಿ ಜಿಲ್ಲೆಗೆ ಸಚಿವ ಆರ್.ಶಂಕರ್ ಇಂದು ಭೇಟಿ ನೀಡಿದ್ದರೂ ಸಹ ಪ್ರವಾಹದಲ್ಲಿ ಸಂಕಷ್ಟದಲ್ಲಿರುವ ಜನರನ್ನು ಮಾತನಾಡಿಸದೇ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿ ನಂತರ ಹೈದರಾಬಾದ್‌ಗೆ ತೆರಳಲಿದ್ದಾರೆ. ತಮ್ಮ ಕಷ್ಟ ಕೇಳಲು ಸಚಿವರು ಬರುತ್ತಿಲ್ಲ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.

ಇದನ್ನೂ ಓದಿ: Shiradi Ghat: ಶಿರಾಡಿ ಘಾಟ್‌ ರಸ್ತೆ ಇಂದಿನಿಂದಲೇ ಸಂಚಾರಕ್ಕೆ ಮುಕ್ತ, ಆದರೆ ಷರತ್ತುಗಳು ಅನ್ವಯ; ವಿವರ ಓದಿರಿ

ಇದನ್ನೂ ಓದಿ: Karnataka Rain: ಬೆಳಗಾವಿಯ ಅಡಿಬಟ್ಟಿ ಗ್ರಾಮದಲ್ಲಿ ರಕ್ಷಣೆಗಾಗಿ ದಂಪತಿ, ಮಗು ಮೊರೆ

(People of Yadagiri district angry on their district incharge minister R Shankar)