ತೋಟಗಾರಿಕೆ ಸಚಿವ ಆರ್ ಶಂಕರ್ ವಿರುದ್ಧ ಏಕವಚನದಲ್ಲಿ ತೀವ್ರ ಆಕ್ರೋಶ ಹೊರಹಾಕಿದ ರೈತ; ಸಿಟ್ಟಿಗೆದ್ದ ಸಚಿವ
ಯಾದಗಿರಿ: ರೈತರೊಬ್ಬರು ತೋಟಗಾರಿಕೆ ಹಾಗೂ ರೇಷ್ಮೆ ಇಲಾಖೆ ಸಚಿವ ಆರ್. ಶಂಕರ್ ವಿರುದ್ಧ ಏಕವಚನದಲ್ಲಿ ತೀವ್ರ ಆಕ್ರೋಶ ಹೊರಹಾಕಿದ ಪ್ರಸಂಗ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಕೊಳ್ಳೂರು ಗ್ರಾಮ ಸಮೀಪದ ಸೇತುವೆ ಬಳಿ ನಡೆದಿದೆ. ಕಳೆದ 2 ವರ್ಷದ ಪರಿಹಾರದ ಹಣವೇ ಇನ್ನೂ ಬಂದಿಲ್ಲ. ಬೆಳೆ ವಿಮೆ ಕೂಡ ಇದುವರೆಗೆ ಕೊಟ್ಟಿಲ್ಲವೆಂದು ಆತ ತನ್ನ ಅಸಮಾಧಾನ ಹೊರಹಾಕಿದ್ದಾನೆ. ಕಳೆದ 2 ವರ್ಷದ ಪರಿಹಾರದ ಹಣವೇ ಇನ್ನೂ ಬಂದಿಲ್ಲ. ಈಗ ಯಾವ ಕಾರಣಕ್ಕೆ ಇಲ್ಲಿಗೆ ಬಂದಿದ್ದೀರಿ ಎಂದು ಕೊಳ್ಳೂರು […]
ಯಾದಗಿರಿ: ರೈತರೊಬ್ಬರು ತೋಟಗಾರಿಕೆ ಹಾಗೂ ರೇಷ್ಮೆ ಇಲಾಖೆ ಸಚಿವ ಆರ್. ಶಂಕರ್ ವಿರುದ್ಧ ಏಕವಚನದಲ್ಲಿ ತೀವ್ರ ಆಕ್ರೋಶ ಹೊರಹಾಕಿದ ಪ್ರಸಂಗ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಕೊಳ್ಳೂರು ಗ್ರಾಮ ಸಮೀಪದ ಸೇತುವೆ ಬಳಿ ನಡೆದಿದೆ. ಕಳೆದ 2 ವರ್ಷದ ಪರಿಹಾರದ ಹಣವೇ ಇನ್ನೂ ಬಂದಿಲ್ಲ. ಬೆಳೆ ವಿಮೆ ಕೂಡ ಇದುವರೆಗೆ ಕೊಟ್ಟಿಲ್ಲವೆಂದು ಆತ ತನ್ನ ಅಸಮಾಧಾನ ಹೊರಹಾಕಿದ್ದಾನೆ.
ಕಳೆದ 2 ವರ್ಷದ ಪರಿಹಾರದ ಹಣವೇ ಇನ್ನೂ ಬಂದಿಲ್ಲ. ಈಗ ಯಾವ ಕಾರಣಕ್ಕೆ ಇಲ್ಲಿಗೆ ಬಂದಿದ್ದೀರಿ ಎಂದು ಕೊಳ್ಳೂರು ಗ್ರಾಮದ ರೈತ ಬಸಪ್ಪ ತೀವ್ರ ಕಿಡಿಕಾರಿದ್ದಾರೆ. ರೈತ ಹೀಗೆ ಬಹಿರಂಗವಾಗಿ ಆಕ್ರೋಶ ಹೊರಹಾಕಿದ್ದಕ್ಕೆ ವಿಧಾನ ಪರಿಷದ್ ಸದಸ್ಯರೂ ಆದ ಸಚಿವ ಶಂಕರ್ ಅಸಮಾಧಾನಗೊಂಡರು; ಸಮಸ್ಯೆ ಇದ್ದರೆ ನೇರವಾಗಿ ಹೇಳಿ, ಹೀಗೆ ಮಾತಾಡಬೇಡಿ ಎಂದು ಕೊಳ್ಳೂರು ಬಳಿ ರೈತನಿಗೆ ತಿಳಿ ಹೇಳಿದರು.
(kollur village criticizes Horticulture and Sericulture Minister MLC R Shankar)