ಎದೆ ತನಕ ನದಿ ನೀರು ನುಗ್ಗಿ ಬರುತ್ತಿದ್ದರೂ ಜೀವದ ಹಂಗು ತೊರೆದು ಪಂಪ್ ಸೆಟ್​ ರಕ್ಷಣೆ ಮಾಡಿಕೊಂಡ ರೈತ; ಟಿವಿ 9 ಕ್ಯಾಮರಾದಲ್ಲಿ ಸೆರೆ

ಜೀವದ ಹಂಗು ತೋರೆದು ನೀರೊಳಗೆ ಇಳಿದ ರೈತ ಎದೆ ತನಕ ನೀರು ನುಗ್ಗಿ ಬರುತ್ತಿದ್ದರೂ ಜೀವದ ಹಂಗು ತೊರೆದು ಪಂಪ್ ರಕ್ಷಣೆ ಮಾಡಿಕೊಂಡಿದ್ದಾನೆ. ಪಂಪ್‌ ಸೆಟ್ ಹಾಗೂ ಪೈಪ್ ಗಳನ್ನ ರೈತ ಹೊರ ತೆಗೆದಿದ್ದಾನೆ. ರೈತನ ಹರ ಸಾಹಸ ದೃಶ್ಯ ಟಿವಿ 9 ಕ್ಯಾಮರಾದಲ್ಲಿ ಸೆರೆಯಾಗಿದೆ.

ಎದೆ ತನಕ ನದಿ ನೀರು ನುಗ್ಗಿ ಬರುತ್ತಿದ್ದರೂ ಜೀವದ ಹಂಗು ತೊರೆದು ಪಂಪ್ ಸೆಟ್​ ರಕ್ಷಣೆ ಮಾಡಿಕೊಂಡ ರೈತ; ಟಿವಿ 9 ಕ್ಯಾಮರಾದಲ್ಲಿ ಸೆರೆ
ಎದೆ ತನಕ ನದಿ ನೀರು ನುಗ್ಗಿ ಬರುತ್ತಿದ್ದರೂ ಜೀವದ ಹಂಗು ತೊರೆದು ಪಂಪ್ ರಕ್ಷಣೆ ಮಾಡಿಕೊಂಡ ರೈತ; ಟಿವಿ 9 ಕ್ಯಾಮರಾದಲ್ಲಿ ರೈತನ ಸಾಹಸ ಸೆರೆ
Follow us
TV9 Web
| Updated By: ಸಾಧು ಶ್ರೀನಾಥ್​

Updated on:Jul 24, 2021 | 1:07 PM

ಯಾದಗಿರಿ: ಕೃಷ್ಣಾ ‌ನದಿಗೆ ಭಾರಿ ಪ್ರಮಾಣದಲ್ಲಿ ನೀರು ಬಿಡುಗಡೆ ಮಾಡಿರುವ ಹಿನ್ನೆಲೆಯಲ್ಲಿ ಜಮೀನುಗಳಿಗೆ ಅಪಾರ‌ ಪ್ರಮಾಣದಲ್ಲಿ ನದಿ ನೀರು ನುಗ್ಗಿದೆ. ಯಾದಗಿರಿ ಜಿಲ್ಲೆಯ ‌ಕೊಳ್ಳೂರಿನಲ್ಲಿ ಜಮೀನುಗಳು ಜಲಾವೃತಗೊಂಡಿದೆ. ಈ ಅಪಾಯದ ವೇಳೆಯಲ್ಲೂ ಜೀವದ ಹಂಗು ತೊರೆದು ರೈತನೊಬ್ಬ ಭಾರೀ ಸಾಹಸ ಮಾಡಿ, ಪಂಪ್​ಸೆಟ್​ ಹೊತ್ತು ತಂದಿದ್ದಾನೆ.

ಯಾದಗಿರಿ ಜಿಲ್ಲೆಯ ‌ಕೊಳ್ಳೂರು ಗ್ರಾಮದ‌ ಜಲಾವೃತ ಜಮೀನಿನಲ್ಲಿ ರೈತನ ಸಾಹಸ:

ಕೃಷ್ಣ ‌ನದಿಗೆ ಭಾರಿ ಪ್ರಮಾಣದಲ್ಲಿ ನೀರು ಬಿಡುಗಡೆ ಹಿನ್ನೆಲೆ ಉಕ್ಕಿ ‌ಹರಿಯುತ್ತಿರುವ ನದಿ ನೀರು ಅಪಾರ‌ ಪ್ರಮಾಣದ ಜಮೀನುಗಳಿಗೆ ನುಗ್ಗಿದೆ. ಯಾದಗಿರಿ ಜಿಲ್ಲೆಯ ‌ಕೊಳ್ಳೂರು ಗ್ರಾಮದ‌ ಜಮೀನುಗಳು ಜಲಾವೃತಗೊಂಡಿವೆ. ಕೊಚ್ಚಿ ಹೋದ ಗದ್ದೆಗಳಲ್ಲಿ ಅನೇಕ ಪಂಪ್‌ ಸೆಟ್ ಮನೆಗಳಿವೆ.

ರೈತಾಪಿ ವರ್ಗಕ್ಕೆ ಪಂಪ್‌ ಸೆಟ್ ಎಷ್ಟು ಅಮೂಲ್ಯ ಎಂಬುದನ್ನು ಸಾಧಿಸಿ, ತೋರಿಸಿದ ಯುವ ರೈತ:

ರೈತನೊಬ್ಬ ಗದ್ದೆಯಲ್ಲಿರುವ ಪಂಪ್ ಸೆಟ್ ಹೊರ ತೆಗೆಯಲು ಹರ‌ ಸಾಹಸ ಪಟ್ಟಿದ್ದಾನೆ. ಜೀವದ ಹಂಗು ತೋರೆದು ನೀರೊಳಗೆ ಇಳಿದ ರೈತ ಎದೆ ತನಕ ನೀರು ನುಗ್ಗಿ ಬರುತ್ತಿದ್ದರೂ ಜೀವದ ಹಂಗು ತೊರೆದು ಪಂಪ್ ರಕ್ಷಣೆ ಮಾಡಿಕೊಂಡಿದ್ದಾನೆ. ಪಂಪ್‌ ಸೆಟ್ ಹಾಗೂ ಪೈಪ್ ಗಳನ್ನ ರೈತ ಹೊರ ತೆಗೆದಿದ್ದಾನೆ. ರೈತನ ಹರ ಸಾಹಸ ದೃಶ್ಯ ಟಿವಿ 9 ಕ್ಯಾಮರಾದಲ್ಲಿ ಸೆರೆಯಾಗಿದೆ.

Karnataka Dams Water Level: ಕರ್ನಾಟಕ ಬಹುತೇಕ ಮಳೆನಾಡು; 12 ಪ್ರಮುಖ ಜಲಾಶಯಗಳಲ್ಲಿ ನೀರಿನ ಮಟ್ಟ ಹೀಗಿದೆ

(yadgir rain farmer takes away pump set from inundated agriculture field in kollur village yadgir district krishna river)

Published On - 12:38 pm, Sat, 24 July 21