15 ದಿನಗಳವರೆಗೆ ಯಶವಂತಪುರ ರೈಲು ನಿಲ್ದಾಣದ ಈ ಪ್ಲಾಟ್​ಫಾರಂಗಳು ಕ್ಲೋಸ್​​, ರೈಲು ಸಂಚಾರ ರದ್ದು

|

Updated on: Aug 20, 2024 | 8:27 AM

ಯಶವಂತಪುರ ರೈಲು ನಿಲ್ದಾಣದ ಪುನರಾಭಿವೃದ್ಧಿ ಕಾಮಗಾರಿ ಭರದಿಂದ ಸಾಗುತ್ತಿದೆ. ಈ ಹಿನ್ನೆಲೆಯಲ್ಲಿ ರೈಲು ನಿಲ್ದಾಣದ ಪ್ಲಾಟ್​ಫಾರಂಗಳಲ್ಲಿ ಏರ್​-ಕಾನ್ಕೋರ್ಸ್ ಅಳವಡಿಕೆ ಕಾಮಗಾರಿ ಆರಂಭವಾಗಲಿದೆ. ಈ ಸಂಬಂಧ ನಿಲ್ದಾಣದ ಈ ಪ್ಲಾಟ್​ಫಾರಂಗಳನ್ನು 15 ದಿನಗಳವರೆಗೆ ಬಂದ್​ ಮಾಡಲಾಗಿದೆ. ಕೆಲ ರೈಲು ಸಂಚಾರ ರದ್ದು ಮಾಡಲಾಗಿದೆ.

15 ದಿನಗಳವರೆಗೆ ಯಶವಂತಪುರ ರೈಲು ನಿಲ್ದಾಣದ ಈ ಪ್ಲಾಟ್​ಫಾರಂಗಳು ಕ್ಲೋಸ್​​, ರೈಲು ಸಂಚಾರ ರದ್ದು
ಯಶವಂತಪುರ ರೈಲು ನಿಲ್ದಾಣ
Follow us on

ಬೆಂಗಳೂರು, ಆಗಸ್ಟ್​ 20: ಯಶವಂತಪುರ ರೈಲು ನಿಲ್ದಾಣದ (Yeshavantpur railway station) ಪ್ಲಾಟ್​ಫಾರಂಗಳಲ್ಲಿ ಏರ್​-ಕಾನ್ಕೋರ್ಸ್ ಅಳವಡಿಕೆ ಕಾಮಗಾರಿ ಆರಂಭವಾಗಲಿದೆ. ಹೀಗಾಗಿ ನಿಲ್ದಾಣದ 2, 3, 4, 5 ಪ್ಲಾಟ್​ಫಾರಂಗಳನ್ನು 15 ದಿನಗಳ ಕಾಲ ಬಂದ್​ ಮಾಡಲಾಗುತ್ತದೆ. ಹಾಗೆ ಕೆಲ ರೈಲುಗಳ ಸಂಚಾರವನ್ನು ಬಂದ್​ ಮಾಡಲಾಗಿದೆ.

ಆಗಸ್ಟ್​ 21 ರಿಂದ ಸೆಪ್ಟೆಂಬರ್​​ 4ರ ವರೆಗೆ 2 ಮತ್ತು 3ನೇ ಪ್ಲಾಟ್​ಫಾರಂ ಬಂದ್​ ಆಗಲಿದೆ. ನಂತರ ಸೆಪ್ಟೆಂಬರ್​ 5 ರಿಂದ 19ರ ವರೆಗೆ 4 ಮತ್ತು 5ನೇ ಪ್ಲಾಟ್​ಫಾರಂ ಕ್ಲೋಸ್​ ಆಗಲಿದೆ ಎಂದು ನೈಋತ್ಯ ರೈಲ್ವೆ ವಲಯ ಮಾಧ್ಯಮ ಪ್ರಕಟಣೆ ಹೊರಡಿಸಿದೆ. ರೈಲು ರದ್ದು ವಿವರ ಈ ಕೆಳಗಿನಂತಿದೆ.

ರೈಲು ರದ್ದು

06576 ತುಮಕೂರು-ಕೆಎಸ್ಆರ್ ಬೆಂಗಳೂರು ಮತ್ತು 06575 ಕೆಎಸ್ಆರ್ ಬೆಂಗಳೂರು-ತುಮಕೂರು ರೈಲು ಆಗಸ್ಟ್​​ 21 ರಿಂದ 31 ಮತ್ತು ಸೆಪ್ಟೆಂಬರ್​​ 1 ರಿಂದ 19ರವರೆಗೆ ರದ್ದುಪಡಿಸಲಾಗಿದೆ.

ಭಾಗಶಃ ರದ್ದು

ರೈಲು ಸಂಖ್ಯೆ 06574, 06580 ತುಮಕೂರು-ಯಶವಂತಪುರ ರೈಲು ಆಗಸ್ಟ್​​ 21 ರಿಂದ 31 ಮತ್ತು ಸೆಪ್ಟೆಂಬರ್​​ 1 ರಿಂದ 19ರವರೆಗೆ ಚಿಕ್ಕಬಾಣಾವರ-ಯಶವಂತಪುರ ನಡುವೆ ಭಾಗಶಃ ರದ್ದಾಗಲಿದೆ. ರೈಲು ಸಂಖ್ಯೆ 06591, 06592 ಯಶವಂತಪುರ-ಹೊಸೂರು ಮಧ್ಯೆ, ಸಂಚರಿಸುವ ರೈಲು ಆಗಸ್ಟ್​​ 21 ರಿಂದ 31 ಮತ್ತು ಸೆಪ್ಟೆಂಬರ್​​ 1 ರಿಂದ 19ರವರೆಗೆ ಯಶವಂತಪುರ-ಹೆಬ್ಬಾಳ ನಡುವೆ ಭಾಗಶಃ ರದ್ದಾಗಲಿದೆ.

ರೈಲು ಸಂಖ್ಯೆ 06593, 06594 ಯಶವಂತಪುರ-ಚಿಕ್ಕಬಳ್ಳಾಪುರ ರೈಲು ಸಂಚಾರ ಆಗಸ್ಟ್​​ 21 ರಿಂದ 31 ಮತ್ತು ಸೆಪ್ಟೆಂಬರ್​​ 1 ರಿಂದ 19ರವರೆಗೆ ಯಶವಂತಪುರ-ಯಲಹಂಕ ನಡುವೆ ಭಾಗಶಃ ರದ್ದಾಗಲಿದೆ.

ಇದನ್ನೂ ಓದಿ: ನಮ್ಮ ಮೆಟ್ರೋ ರೈಲು ಸೇವೆಯಲ್ಲಿ ವ್ಯತ್ಯಯ: ಈ ದಿನಗಳಂದು ಸಂಪೂರ್ಣ ಸ್ಥಗಿತ

ಯಶವಂತಪುರ-ಹೊಸೂರು (06393, 06393) ರೈಲು ಆಗಸ್ಟ್​​ 21 ರಿಂದ 31 ಮತ್ತು ಸೆಪ್ಟೆಂಬರ್​​ 1 ರಿಂದ 19ರವರೆಗೆ ಯಶವಂತಪುರ-ಹೆಬ್ಬಾಳ ನಡುವೆ ಭಾಗಶಃ ಸಂಚರಿಸುವುದಿಲ್ಲ. ಯಶವಂತಪುರ-ತುಮಕೂರು (06573) ರೈಲು ಆಗಸ್ಟ್​​ 21 ರಿಂದ 31 ಮತ್ತು ಸೆಪ್ಟೆಂಬರ್​​ 1 ರಿಂದ 19ರವರೆಗೆ ಯಶವಂತಪುರ-ಚಿಕ್ಕಬಾಣಾವರ ನಡುವೆ ಭಾಗಶಃ ರದ್ದಾಗಲಿದೆ.

ಚಿಕ್ಕಮಗಳೂರು-ಯಶವಂತಪುರ (16239, 16240) ರೈಲು ಆಗಸ್ಟ್​​ 21 ರಿಂದ 31 ಮತ್ತು ಸೆಪ್ಟೆಂಬರ್​​ 1 ರಿಂದ 19ರವರೆಗೆ ಚಿಕ್ಕಬಾಣಾವರ-ಯಶವಂತಪುರ ನಡುವೆ ಭಾಗಶಃ ಸಂಚರಿಸುವುದಿಲ್ಲ.
ಮೈಸೂರು-ಯಶವಂತಪುರ (16207, 16208) ಆಗಸ್ಟ್​​ 21 ರಿಂದ 31 ಮತ್ತು ಸೆಪ್ಟೆಂಬರ್​​ 1 ರಿಂದ 19ರವರೆಗೆ ಚಿಕ್ಕಬಾಣಾವರ-ಯಶವಂತಪುರ ನಡುವೆ ಭಾಗಶಃ ರದ್ದಾಗಲಿದೆ.

ಮಾರ್ಗ ಬದಲಾವಣೆ

ರೈಲು ಸಂಖ್ಯೆ 22697 ಎಸ್‌ಎಸ್‌ಎಸ್ ಹುಬ್ಬಳ್ಳಿ-ಡಾ ಎಂಜಿಆರ್ ಚೆನ್ನೈ ಸೆಂಟ್ರಲ್ ಎಕ್ಸ್‌ಪ್ರೆಸ್ ರೈಲು, ಆಗಸ್ಟ್ 24 ಮತ್ತು 31, 2024 ಮತ್ತು ಸೆಪ್ಟೆಂಬರ್ 7 ಮತ್ತು 14 ರಂದು ಹುಬ್ಬಳ್ಳಿ, ಅರಸೀಕೆರೆ, ಚಿಕ್ಕಬಾಣಾವರ, ಯಶವಂತಪುರ ‘ಎ’ ಕ್ಯಾಬಿನ್, ಲೊಟ್ಟೆಗೊಲ್ಲಹಳ್ಳಿ, ಲೊಟ್ಟೆಗೊಲ್ಲಹಳ್ಳಿ ಮೂಲಕ ಸಂಚರಿಸುತ್ತದೆ. SMVT ಬೆಂಗಳೂರು ಮತ್ತು ಕೃಷ್ಣರಾಜಪುರಂ ನಿಲ್ದಾಣಗಳಲ್ಲೂ ರೈಲು ನಿಲ್ಲುತ್ತದೆ.

ರೈಲು ಸಂಖ್ಯೆ 06511 ಬಾಣಸವಾಡಿ-ತುಮಕೂರು ಎಕ್ಸ್‌ಪ್ರೆಸ್ ವಿಶೇಷ ರೈಲು, ಆಗಸ್ಟ್ 21 ರಿಂದ ಸೆಪ್ಟೆಂಬರ್ 19ರವರೆಗೆ ಬಾಣಸವಾಡಿ, ಯಶವಂತಪುರ ‘ಎ’ ಕ್ಯಾಬಿನ್, ಚಿಕ್ಕಬಾಣಾವರ ಮತ್ತು ತುಮಕೂರು ನಿಲ್ದಾಣಗಳ ಮೂಲಕ ಸಂಚರಿಸುತ್ತದೆ.

ರೈಲು ಸಂಖ್ಯೆ. 11311, 11312 ಸೋಲಾಪುರ-ಹಾಸನ ಎಕ್ಸ್‌ಪ್ರೆಸ್ ರೈಲು, ಆಗಸ್ಟ್ 20 ರಿಂದ ಸೆಪ್ಟೆಂಬರ್ 18ರವರೆಗೆ ಯಲಹಂಕ, ಯಶವಂತಪುರ ‘ಎ’ ಕ್ಯಾಬಿನ್ ಮತ್ತು ಚಿಕ್ಕಬಾಣಾವರ ನಿಲ್ದಾಣಗಳ ಮೂಲಕ ಸಂಚರಿಸುತ್ತದೆ.
ಮಾರ್ಗ ಬದಲಾವಣೆಯ ಎಲ್ಲ ರೈಲುಗಳು ಯಶವಂತಪುರ ನಿಲ್ದಾಣದಲ್ಲಿ ನಿಲ್ಲುವುದಿಲ್ಲ.

ರೈಲುಗಳ ನಿಯಂತ್ರಣ:

ರೈಲು ನಂ.16546 ಸಿಂಧನೂರು-ಯಶವಂತಪುರ ಎಕ್ಸ್‌ಪ್ರೆಸ್, ಆಗಸ್ಟ್ 20 ರಿಂದ ಸೆಪ್ಟೆಂಬರ್ 18, ರವರೆಗೆ ಸಿಂಧನೂರು ನಿಲ್ದಾಣದಿಂದ 90 ನಿಮಿಷಗಳವರೆಗೆ ನಿಯಂತ್ರಿಸಲಾಗುತ್ತದೆ.

ರೈಲು ಸಂಖ್ಯೆ.06545 ಯಶವಂತಪುರ-ವಿಜಯಪುರ ಎಕ್ಸ್‌ಪ್ರೆಸ್ ವಿಶೇಷ ರೈಲು, ಆಗಸ್ಟ್ 21 ರಿಂದ ಸೆಪ್ಟೆಂಬರ್ 19ರವರೆಗೆ ಯಶವಂತಪುರ ನಿಲ್ದಾಣದಿಂದ 30 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ