ಬೆಂಗಳೂರಿನಲ್ಲಿ ಪ್ರೇಯಸಿಯನ್ನು ಕೊಲೆ ಮಾಡಿ ಆತ್ಮಹತ್ಯೆಗೆ ಯತ್ನಿಸಿದ ಪ್ರಿಯತಮ.. ನಿಮ್ಹಾನ್ಸ್ ಪಾಲು

| Updated By: ಸಾಧು ಶ್ರೀನಾಥ್​

Updated on: Apr 05, 2021 | 1:32 PM

ಯುವತಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿ ನಂತರ ಚಲಿಸುವ ರೈಲಿನಿಂದ ಜಿಗಿದು ರಾಜು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಜೊಮ್ಯಾಟೋದಲ್ಲಿ ಡೆಲವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ರಾಜು ನಿಮಾನ್ಸ್ ಆಸ್ಪತ್ರೆಯಲ್ಲಿ ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾನೆ.

ಬೆಂಗಳೂರಿನಲ್ಲಿ ಪ್ರೇಯಸಿಯನ್ನು ಕೊಲೆ ಮಾಡಿ ಆತ್ಮಹತ್ಯೆಗೆ ಯತ್ನಿಸಿದ ಪ್ರಿಯತಮ.. ನಿಮ್ಹಾನ್ಸ್  ಪಾಲು
ಪ್ರಿಯತಮ ರಾಜು
Follow us on

ಬೆಂಗಳೂರು: ಪ್ರೇಯಸಿಯನ್ನು ಕೊಲೆ ಮಾಡಿ ಪ್ರಿಯತಮ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬಂಡೆಪಾಳ್ಯ ಬಳಿಯ ಸೋಮಸುಂದರ ಪಾಳ್ಯದಲ್ಲಿ ನಡೆದಿದೆ. ರಾಜು ಎಂಬಾತ ನಿನ್ನೆ ರಾತ್ರಿ ಚಾಕುವಿನಿಂದು ಇರಿದು ತನ್ನ ಪ್ರೇಯಸಿಯನ್ನು ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ. ಪ್ರಿಯಕರ ರಾಜು ಮನೆಯಲ್ಲಿಯೇ ಯುವತಿ ಮೃತದೇಹ ಪತ್ತೆಯಾಗಿದ್ದು, ಕೊಲೆಗೆ ಕಾರಣ ಇನ್ನೂ ನಿಗೂಢವಾಗಿದೆ.

ಜೊಮ್ಯಾಟೋದಲ್ಲಿ ಡೆಲಿವರಿ ಬಾಯ್…
ಅದಾದ ಬಳಿಕ, ಯುವತಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿ ನಂತರ ಚಲಿಸುವ ರೈಲಿನಿಂದ ಜಿಗಿದು ಪ್ರೊಯಕರ ರಾಜು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಜೊಮ್ಯಾಟೋದಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ರಾಜು ಇದೀಗ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಹಣ ನೀಡದ ಹೆತ್ತ ತಾಯಿಯನ್ನು ಕೊಂದ ಮಾತು ಬಾರದ ಪುತ್ರ

ಮದ್ಯ ಸೇವನೆಗೆ ಹಣ ನೀಡದ ಹಿನ್ನೆಲೆ ತನ್ನ ತಾಯಿಯನ್ನು ಕೊಲೆ ಮಾಡಿರುವ ಘಟನೆ ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲೂಕಿನ ಕುರುಬಾಳನಹುಂಡಿ ಗ್ರಾಮದಲ್ಲಿ ನಡೆದಿದೆ. ತಾಯಿ ಗೌರಮ್ಮ (55) ಎಂಬುವವರ ತಲೆಯ ಮೇಲೆ ಮಗ ಶಾಂತರಾಜು (26) ಎಂಬಾತ ಕಲ್ಲನ್ನು ಎತ್ತಿಹಾಕಿ ಕೊಲೆ ಮಾಡಿದ್ದಾನೆ. ಈ ಪ್ರಕರಣ ತಲಕಾಡು ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಆರೋಪಿಯಾದ ಶಾಂತರಾಜುನನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಶಾಂತರಾಜುಗೆ ಮಾತು ಬರುವುದಿಲ್ಲ. ಆದರೆ ಈತ ಕುಡಿತದ ದಾಸನಾಗಿದ್ದನು. ಕುಡಿತಕ್ಕೆ ಹಣ ಕೊಡುವಂತೆ ತನ್ನ ತಾಯಿಯನ್ನು ಪದೇ ಪದೇ ಪೀಡಿಸುತ್ತಿದ್ದನಂತೆ. ಆದರೆ ತಾಯಿ ಗೌರಮ್ಮ ಹಣ ನೀಡಲು ನಿರಾಕರಿಸಿದ್ದಾರೆ. ಹಣ ನೀಡದ ಕಾರಣ ಸಿಟ್ಟಿನಿಂದ ಶಾಂತರಾಜು ತಾಯಿಯ ಮೇಲೆ ಕಲ್ಲನ್ನು ಎತ್ತಿಹಾಕಿ ಹತ್ಯೆ ಮಾಡಿದ್ದಾನೆ.

ಆರೋಪಿ ಶಾಂತರಾಜು

ಕಲಬುರ್ಗಿ: ಮೀನು ಹಿಡಿಯಲು ನದಿಗಿಳಿದಿದ್ದ ತಂದೆ ಮತ್ತು ಮಗ ನೀರುಪಾಲು

ಮೀನು ಹಿಡಿಯುವುದಕ್ಕೆ ನದಿಗೆ ಇಳಿದಿದ್ದ ತಂದೆ ಮತ್ತು ಮಗ ನೀರು ಪಾಲಾಗಿರುವ ಘಟನೆ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಕಟ್ಟಿ ಸಂಗಾವಿ ಬಳಿಯ ಭೀಮಾ ನದಿಯಲ್ಲಿ ನಡೆದಿದೆ. ನಿನ್ನೆ ಸಂಜೆ ನಡೆದಿರುವ ಘಟನೆ ಇದಾಗಿದ್ದು, ಮೆಹಬೂಬ್ ಪಟೇಲ್(60) ಮತ್ತು ಜಾವಿದ್ ಪಟೇಲ್(19) ಮೃತ ದುರ್ದೈವಿಗಳಾಗಿದ್ದಾರೆ. ಈ ಪ್ರಕರಣ ಜೇವರ್ಗಿ ಪೋಲಿಸ್ ಠಾಣೆಯಲ್ಲಿ ದಾಖಲಾಗಿದೆ.

ನೀರು ಪಾಲಾದ ಮಗ ಮತ್ತು ತಂದೆ

(son murdered his mother for not given money to drink a Alcohol in mysore)

ಇದನ್ನೂ ಓದಿ: 

ಬೆಂಗಳೂರಿನಲ್ಲಿ ವಿಕ್ರಮ್ ಎಂಬುವವರ ಬರ್ಬರ ಕೊಲೆ; ರಿಯಲ್ ಎಸ್ಟೇಟ್ ವ್ಯವಹಾರದ ವೈಷಮ್ಯ ಶಂಕೆ

ಅತ್ಯಾಚಾರ ಆರೋಪಿಗೆ ನಿಜಕ್ಕೂ ಅನಾರೋಗ್ಯವೋ ಅಥವಾ ತಲೆಮರೆಸಿಕೊಳ್ಳುವ ತಂತ್ರವೋ? ಟ್ವಿಟರ್​ನಲ್ಲಿ ಕಾಂಗ್ರೆಸ್ ಪ್ರಶ್ನೆ