ಬೆಂಗಳೂರಿನಲ್ಲಿ ವಿಕ್ರಮ್ ಎಂಬುವವರ ಬರ್ಬರ ಕೊಲೆ; ರಿಯಲ್ ಎಸ್ಟೇಟ್ ವ್ಯವಹಾರದ ವೈಷಮ್ಯ ಶಂಕೆ
ಸುರೇಶ್, ವಿಕ್ರಮ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಲಾಗಿದ್ದು, ವಿಕ್ರಮ್ ಸಾವನ್ನಪ್ಪಿದ್ದಾರೆ. ಗಂಭೀರ ಗಾಯಗೊಂಡಿರುವ ಸುರೇಶ್ಗೆ ಅಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಬೆಂಗಳೂರು: ನಗರದಲ್ಲಿ ಚಾಕುವಿನಿಂದ ಇರಿದು ವ್ಯಕ್ತಿಯ ಬರ್ಬರ ಹತ್ಯೆ ನಡೆಸಿದ ಘಟನೆ ಸಂಭವಿಸಿದೆ. ಇನೋವಾ ಕಾರಿನಲ್ಲಿ ಬಂದಿದ್ದ 6 ಜನರ ತಂಡ ಉದ್ಯಮಿ ಸುರೇಶ್ ಸಂಬಂಧಿ ವಿಕ್ರಮ್ ಎಂಬುವವರ ಕೊಲೆ ನಡೆಸಿದೆ. ಸಹಕಾರನಗರದ ಕಚೇರಿಗೆ ನುಗ್ಗಿ ಚಾಕುವಿನಿಂದ ಇರಿದು ವಿಕ್ರಮ್ ಎಂಬವರನ್ನು ಹತ್ಯೆ ಮಾಡಲಾಗಿದೆ.
ಸುರೇಶ್, ವಿಕ್ರಮ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಲಾಗಿದ್ದು, ವಿಕ್ರಮ್ ಸಾವನ್ನಪ್ಪಿದ್ದಾರೆ. ಗಂಭೀರ ಗಾಯಗೊಂಡಿರುವ ಸುರೇಶ್ಗೆ ಅಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಆರೋಪಿಗಳು ವಿಕ್ರಮ್ರನ್ನು ಹತ್ಯೆಗೈದು ಕಾರು ಸ್ಥಳದಲ್ಲೇ ಬಿಟ್ಟುಹೋಗಿದ್ದಾರೆ. ರಿಯಲ್ ಎಸ್ಟೇಟ್ ವ್ಯವಹಾರದ ವೈಷಮ್ಯ ಹಿನ್ನೆಲೆ ಕೊಲೆ ಎಂಬ ಶಂಕೆ ವ್ಯಕ್ತವಾಗಿದೆ. ಕೊಡಿಗೇಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಹಳೆ ದ್ವೇಷ, ನಾಲ್ವರ ಮೇಲೆ ಮಾರಣಾಂತಿಕ ಹಲ್ಲೆ ಹಳೆ ದ್ವೇಷದ ಹಿನ್ನೆಲೆ ನಾಲ್ವರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ಮಗದೊಂದು ದುಷ್ಕೃತ್ಯ, ಬೆಂಗಳೂರು ಉತ್ತರ ತಾಲೂಕಿನ ಪಿಳ್ಳಹಳ್ಳಿಯಲ್ಲಿ ನಡೆದಿದೆ. ಹನುಮಂತರಾಜು, ಗಗನ್, ಲಕ್ಕಣ್ಣ, ಲಕ್ಷ್ಮೀದೇವಿ ಮೇಲೆ ಹಲ್ಲೆ ಮಾಡಲಾಗಿದೆ. ರೌಡಿಶೀಟರ್ ಸಿದ್ದಪ್ಪ, ಲಿಂಗಪ್ಪ, ಮಹೇಶ್, ಶಿವಕುಮಾರ್, ಲಕ್ಷ್ಮೀಪತಿ, ಶಿವು ಗ್ಯಾಂಗ್ನಿಂದ ಮಾರಣಾಂತಿಕ ಹಲ್ಲೆ ನಡೆದಿದೆ ಎಂದು ತಿಳಿದುಬಂದಿದೆ. ಗಾಯಾಳುಗಳಿಗೆ ನೆಲಮಂಗಲ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದ್ದು, ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಜೂಜು ಅಡ್ಡೆ ಮೇಲೆ ದಾಳಿ ಅಡಕಮಾರನಹಳ್ಳಿ ಬಳಿ ಜೂಜುಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಮಾದನಾಯಕನಹಳ್ಳಿ ಪೊಲೀಸರಿಂದ 7 ಜೂಜುಕೋರರ ಸೆರೆಯಾಗಿದೆ. ಬೆಂಗಳೂರು ಉತ್ತರ ತಾಲೂಕಿನ ಮಾದನಾಯಕನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜೂಜುಕೋರರು ಪಣಕ್ಕಿಟ್ಟಿದ್ದ 20 ಸಾವಿರ ನಗದು ಜಪ್ತಿ ಮಾಡಲಾಗಿದೆ.
ಇದನ್ನೂ ಓದಿ: ಮಂಗಳೂರು ಬಾಲಕನ ಕೊಲೆಗೆ ಕಾರಣವಾಯ್ತು ಪಬ್ ಜೀ ಗೇಮ್
ಇದನ್ನೂ ಓದಿ: ಹಾಸನ: ಸ್ಫೋಟಕ ಸಂಗ್ರಹಿಸಿದ್ದ ಗೋದಾಮಿನಲ್ಲಿ ಸ್ಪೋಟ, ಓರ್ವ ಸಾವು
Published On - 11:37 pm, Sun, 4 April 21