ಯುವತಿ ಪರ ವಕೀಲರಿಂದ ಎಸ್​ಐಟಿ ತನಿಖಾದಿಕಾರಿಗಳ ಮೇಲೆ ಒತ್ತಡ ಹೇರುವ ಯತ್ನ: ರಮೇಶ್ ಜಾರಕಿಹೊಳಿ ಪರ ವಕೀಲ ಶ್ಯಾಮ್ ಸುಂದರ್

ನನ್ನ ಕಕ್ಷಿದಾರ ರಮೇಶ್ ವಿರುದ್ಧದ ಆರೋಪಗಳು ಸುಳ್ಳು. ಯುವತಿ ಹಾಗೂ ಆಕೆಯ ಪರ ವಕೀಲರು ಹಸ್ತಕ್ಷೇಪ ಮಾಡುವುದು, ಸುಳ್ಳು ಹಾಗೂ ಆಧಾರರಹಿತ ಹೇಳಿಕೆಗಳನ್ನ ನೀಡುತ್ತಿದ್ದಾರೆ. ಈ ಮೂಲಕ ತನಿಖೆಗೆ ಅಡ್ಡಿಪಡಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಯುವತಿ ಪರ ವಕೀಲರಿಂದ ಎಸ್​ಐಟಿ ತನಿಖಾದಿಕಾರಿಗಳ ಮೇಲೆ ಒತ್ತಡ ಹೇರುವ ಯತ್ನ: ರಮೇಶ್ ಜಾರಕಿಹೊಳಿ ಪರ ವಕೀಲ ಶ್ಯಾಮ್ ಸುಂದರ್
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ganapathi bhat

Updated on:Apr 05, 2022 | 12:51 PM

ಬೆಂಗಳೂರು: ಬಿಜೆಪಿ ಶಾಸಕ ಹಾಗೂ ಮಾಜಿ ಸಚಿವ ರಮೇಶ್​ ಜಾರಕಿಹೊಳಿ ಸಿಡಿ ಬಹಿರಂಗ ಪ್ರಕರಣಕ್ಕೆ ಸಂಬಂಧಿಸಿ ರಮೇಶ್ ಜಾರಕಿಹೊಳಿ ಪರ ವಕೀಲ ಶ್ಯಾಮ್‌ ಸುಂದರ್ ಮಾಧ್ಯಮ ಪ್ರಕಟಣೆ ನೀಡಿದ್ದಾರೆ. ಯುವತಿಯ ಪರ ವಕೀಲರು ಆಧಾರರಹಿತ ಸುಳ್ಳು ಆರೋಪ ಮಾಡುತ್ತಿದ್ದಾರೆ. ಈ ಮೂಲಕ, ಎಸ್​​ಐಟಿ, ತನಿಖಾಧಿಕಾರಿಗಳ ಮೇಲೆ ಒತ್ತಡ ಹೇರುವ ಯತ್ನ ಮಾಡಲಾಗುತ್ತಿದೆ. ತನಿಖೆಯ ದಾರಿ ತಪ್ಪಿಸುವ ಉದ್ದೇಶದಿಂದ ಸುಳ್ಳು ಆರೋಪ ಮಾಡಲಾಗುತ್ತಿದೆ ಎಂದು ರಮೇಶ್ ಪರ ವಕೀಲ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಎಸ್​ಐಟಿ ತನಿಖೆ ಮೇಲೆ ಯುವತಿ ಪರ ವಕೀಲರಿಂದ ಹಸ್ತಕ್ಷೇಪವಾಗುತ್ತಿದೆ. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಕ್ಕೆ ಅಡ್ಡಿ ಮಾಡುವ ಯತ್ನ ನಡೆಯುತ್ತಿದೆ. ರಾಜಕಾರಣಿಗಳ ವಿರುದ್ಧ ಸಂಘಟಿತ ಅಪರಾಧ ನಡೆಯುತ್ತಿದೆ. ಅಂತಹವರ ವಿರುದ್ಧ ಕ್ರಮ ತಪ್ಪಿಸಲು ಯತ್ನವಾಗುತ್ತಿದೆ ಎಂದು ಶ್ಯಾಮ್ ಸುಂದರ್ ಆರೋಪಿಸಿದ್ದಾರೆ.

ನನ್ನ ಕಕ್ಷಿದಾರ ರಮೇಶ್ ವಿರುದ್ಧದ ಆರೋಪಗಳು ಸುಳ್ಳು. ಯುವತಿ ಹಾಗೂ ಆಕೆಯ ಪರ ವಕೀಲರು ಹಸ್ತಕ್ಷೇಪ ಮಾಡುವುದು, ಸುಳ್ಳು ಹಾಗೂ ಆಧಾರರಹಿತ ಹೇಳಿಕೆಗಳನ್ನ ನೀಡುತ್ತಿದ್ದಾರೆ. ಈ ಮೂಲಕ ತನಿಖೆಗೆ ಅಡ್ಡಿಪಡಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಎಸ್​ಐಟಿ ಮೇಲೆ ಸರ್ಕಾರದ ಒತ್ತಡವಿದೆ ಎಂದು ಆರೋಪಿಸಿದ್ದರು ಬಿಜೆಪಿ ಶಾಸಕ ಹಾಗೂ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಬಹಿರಂಗ ಪ್ರಕರಣಕ್ಕೆ ಸಂಬಂಧಿಸಿ ನಗರ ಪೊಲೀಸ್​ ಆಯುಕ್ತರಿಗೆ ಸಂತ್ರಸ್ತೆ ದೂರು ನೀಡುತ್ತಿದ್ದಾರೆ ಎಂದು ಟಿವಿ9ಗೆ ವಕೀಲ ಸೂರ್ಯ ಮುಕುಂದ​ರಾಜ್​ ಪ್ರತಿಕ್ರಿಯೆ ನೀಡಿದ್ದರು. ಸಂತ್ರಸ್ತೆ ಎಸ್​ಐಟಿ ತನಿಖೆಯನ್ನು ವಿರೋಧ ಮಾಡುತ್ತಿಲ್ಲ. ಎಸ್​ಐಟಿ ಮೇಲೆ ಒತ್ತಡವಿದೆ ಎಂದು ಉಲ್ಲೇಖಿಸಿರುತ್ತಾರೆ ಅಷ್ಟೆ. ತನ್ನ ಗಮನಕ್ಕೆ ತರದೆ ಎಸ್​ಪಿಪಿ ನೇಮಕ ಬಗ್ಗೆ ಪ್ರಶ್ನಿಸುತ್ತಿದ್ದಾರೆ. ಎಸ್​ಐಟಿ ತನಿಖೆಯ ಎಲ್ಲಾ ಮಾಹಿತಿ ಸೋರಿಕೆ ಆಗುತ್ತಿದೆ. ಆರೋಪಿ ತನ್ನನ್ನು ತಾನು ರಕ್ಷಿಸಿಕೊಳ್ಳಲು ಸಹಕರಿಸುತ್ತಿದ್ದಾರೆ ಎಂದು ಕೆಪಿಸಿಸಿ ಕಾನೂನು ಘಟಕದ ಪ್ರಧಾನ ಕಾರ್ಯದರ್ಶಿ ಸೂರ್ಯ ಮುಕುಂದರಾಜ್ ಹೇಳಿದ್ದರು.

ಎಲ್ಲಕ್ಕಿಂತ ಮಿಗಿಲಾಗಿ ಆರೋಪಿಯ ದೂರಿನಲ್ಲಿ ಸಂತ್ರಸ್ತೆ ಹೆಸರಿಲ್ಲ. ರಮೇಶ್ ಜಾರಕಿಹೊಳಿ ದೂರಿನಲ್ಲಿ ಸಂತ್ರಸ್ತೆ ಬಗ್ಗೆ ಉಲ್ಲೇಖಿಸಿಲ್ಲ. ಆದರೂ ಎಸ್​ಐಟಿ ಅಧಿಕಾರಿಗಳು ಸಂತ್ರಸ್ತೆ ಪಿಜಿ ಮೇಲೆ ದಾಳಿ ಮಾಡಿದ್ದಾರೆ ಎಂದು ಅವರು ಆರೋಪಿಸಿದ್ದರು.

ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಸಿಡಿ ಬಹಿರಂಗ ಪ್ರಕರಣಕ್ಕೆ ಸಂಬಂಧಿಸಿ ನಗರ ಪೊಲೀಸ್​ ಆಯುಕ್ತರ​ ಕಚೇರಿ ಬಳಿ ಸಂತ್ರಸ್ತ ಯುವತಿ ಪರ ವಕೀಲ ಕೆ.ಎನ್. ಜಗದೀಶ್ ಮಾತನಾಡಿದ್ದರು. ಎಸ್ಐಟಿ ತನಿಖೆ ಹಾದಿ ಸರಿ ಇಲ್ಲ, ಹಾದಿ ತಪ್ಪಿಸಲಾಗುತ್ತಿದೆ. ನನಗೆ ಎಸ್​ಐಟಿ ತನಿಖೆ ಮೇಲೆ ನಂಬಿಕೆ ಕಾಣಿಸುತ್ತಿಲ್ಲ ಎಂದಿದ್ದಾರೆ. ಸಿಡಿ ಪ್ರಕರಣದ ಸಂತ್ರಸ್ತ ಯುವತಿ ನಂಬಿಕೆ ಇಲ್ಲವೆಂದಿದ್ದಾಳೆ. ಸಂತ್ರಸ್ತೆಯನ್ನೇ ಆರೋಪಿ ಎಂಬಂತೆ ಬಿಂಬಿಸಲಾಗುತ್ತಿದೆ. ಆರೋಪಿ ರಮೇಶ್​ರನ್ನ ಹೊರಗೆ ಓಡಾಡಲು ಬಿಟ್ಟಿದ್ದಾರೆ. ಸ್ವತಃ ಸಿಎಂ ಅವರೇ ಆರೋಪಿಯ ಪರವಾಗಿ ನಿಂತಂತಿದೆ. ರಮೇಶ್​ ಕುರಿತು ಸಿಎಂ ಬಿಎಸ್​ವೈ ಹೇಳಿಕೆ ಕೊಡುತ್ತಾರೆ. ರಮೇಶ್ ಜಾರಕಿಹೊಳಿ ಆರೋಪ ಮುಕ್ತರಾಗಿ ಹೊರಬರ್ತಾರೆ ಎನ್ನುತ್ತಾರೆ. ಸಿಎಂ ಯಡಿಯೂರಪ್ಪ ಹೇಳಿಕೆಯಿಂದಲೇ ಎಸ್​ಐಟಿ ಮೇಲೆ ಸರ್ಕಾರದ ಒತ್ತಡವಿರುವುದು ಗೊತ್ತಾಗುತ್ತದೆ. ತನಿಖೆ ಸ್ವತಂತ್ರವಾಗಿ ನಡೆಯುತ್ತಿಲ್ಲ, ಅತಂತ್ರವಾಗಿ ನಡೀತಿದೆ ಎಂದು ಜಗದೀಶ್ ಹೇಳಿದ್ದರು.

ಇದನ್ನೂ ಓದಿ: ಎಸ್​ಐಟಿ ಮೇಲೆ ಸರ್ಕಾರದ ಒತ್ತಡವಿದೆ: ವಕೀಲರಾದ ಕೆ.ಎನ್. ಜಗದೀಶ್, ಸೂರ್ಯ ಮುಕುಂದರಾಜ್ ಆರೋಪ

ಇದನ್ನೂ ಓದಿ: ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ: ನನನ್ನು ಯಾರೂ ಅಪಹರಿಸಿರಲಿಲ್ಲ, ಸ್ನೇಹಿತನೊಂದಿಗೆ ನಾನೇ ಗೋವಾ ಹೋಗಿದ್ದೆ ಎಂದ ಸಂತ್ರಸ್ತೆ

Published On - 10:09 pm, Sun, 4 April 21

ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?