Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ: ನನನ್ನು ಯಾರೂ ಅಪಹರಿಸಿರಲಿಲ್ಲ, ಸ್ನೇಹಿತನೊಂದಿಗೆ ನಾನೇ ಗೋವಾ ಹೋಗಿದ್ದೆ ಎಂದ ಸಂತ್ರಸ್ತೆ

ಟೆಕ್ನಿಕಲ್​ ಸೆಲ್​ನ್ಲಲಿ ಶನಿವಾರದಂದು ಮುಂದುವರೆಸಿ ಸುಮಾರು ನಾಲ್ಕೂವರೆ ಗಂಟೆಗಳ ಕಾಲ ಹಲವಾರು ಪ್ರಶ್ನೆಗಳನ್ನು ಸಂತ್ತಸ್ತೆಗೆ ಕೇಳಿದರು. ಅಧಿಕಾರಿಗಳು ಕೇಳಿದ ಪ್ರಶ್ನೆ ಮತ್ತು ಯುವತಿ ಕೊಟ್ಟ ಉತ್ತರಗಳ ವಿವರ ಕೆಳಗಿನಂತಿದೆ.

ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ: ನನನ್ನು ಯಾರೂ ಅಪಹರಿಸಿರಲಿಲ್ಲ, ಸ್ನೇಹಿತನೊಂದಿಗೆ ನಾನೇ ಗೋವಾ ಹೋಗಿದ್ದೆ ಎಂದ ಸಂತ್ರಸ್ತೆ
ಸಂತ್ರಸ್ತ ಯುವತಿ
Follow us
ಅರುಣ್​ ಕುಮಾರ್​ ಬೆಳ್ಳಿ
|

Updated on:Apr 03, 2021 | 5:25 PM

ಬೆಂಗಳೂರು: ರಮೇಶ್ ಜಾರಕಿಹೊಳಿ‌ ಸಿಡಿ‌ ಬಹಿರಂಗ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡದ (ಎಸ್​ಐಟಿ) ಅಧಿಕಾರಿಗಳು ಸಂತ್ರಸ್ತೆ ಯುವತಿ ವಿಚಾರಣೆಯನ್ನು ಆಡುಗೋಡಿಯ ಟೆಕ್ನಿಕಲ್​ ಸೆಲ್​ನ್ಲಲಿ ಶನಿವಾರದಂದು ಮುಂದುವರೆಸಿ ಸುಮಾರು ನಾಲ್ಕೂವರೆ ಗಂಟೆಗಳ ಕಾಲ ಹಲವಾರು ಪ್ರಶ್ನೆಗಳನ್ನು ಆಕೆಗೆ ಕೇಳಿದರು. ಅಧಿಕಾರಿಗಳು ಕೇಳಿದ ಪ್ರಶ್ನೆ ಮತ್ತು ಯುವತಿ ಕೊಟ್ಟ ಉತ್ತರಗಳ ವಿವರ ಕೆಳಗಿನಂತಿದೆ.

ಎಸ್ಐಟಿ: ನೀವು ಕಿಡ್ನಾಪ್ ಆಗಿದ್ದು ನಿಜವೇ? ನಿಮ್ಮನ್ನು ಕಿಡ್ನಾಪ್ ಮಾಡಲಾಗಿತ್ತಾ? ಸಂತ್ರಸ್ತೆ: ಇಲ್ಲ, ನನ್ನನ್ನು ಯಾರು ಕಿಡ್ನಾಪ್ ಮಾಡಿಲ್ಲ, ನಾನಾಗಿಯೇ ಹೋಗಿದ್ದೆ

ಎಸ್ಐಟಿ: ನಿಮ್ಮ ಪೋಷಕರು ನಿಮ್ಮನ್ನು ಕಿಡ್ನಾಪ್ ಮಾಡಿದ್ದಾರೆ ಎಂದು ದೂರು ನೀಡಿದ್ದಾರಲ್ಲ? ಸಂತ್ರಸ್ತೆ: ಅವರು ಯಾರದ್ದೋ ಒತ್ತಡದ ಮೇಲೆ ಹಾಗೆ ದೂರು ನೀಡಿದ್ದಾರೆ

ಎಸ್ಐಟಿ: ನೀವು ಇಲ್ಲಿಂದ ಹೋದ ಮೇಲೆ ನಿಮ್ಮ ಕುಟುಂಬದ ಸದಸ್ಯರೊಂದಿಗೆ ಸಂಪರ್ಕ ಇಟ್ಟುಕೊಂಡಿದ್ದಿರೇ? ಸಂತ್ರಸ್ತೆ: ಹೌದು ನನ್ನ ಗೆಳೆಯ ಆಕಾಶ್ ಫೋನ್​ನಿಂದ ಕೆಲವು ಸಲ ಕರೆ ಮಾಡಿದ್ದೆ, ಆಮೇಲೆ ಅವರ ಸಂಪರ್ಕವನ್ನು ನಾನು ಮಾಡಿಲ್ಲ. ಸಿಡಿ ಬಿಡುಗಡೆ ನಂತರ ಒಂದೆರಡು ದಿನ ಕರೆ ಮಾಡಿ ಮಾತಾಡಿದ್ದೆ, ನಂತರ ನಾನು ಕರೆ ಮಾಡಲಿಲ್ಲ, ಸ್ವಲ್ಪ ದಿನದ ಬಳಿಕ ಅವರ ಮೇಲೆ ಯಾರೊ ಒತ್ತಡ ಹಾಕಿ ದೂರು ಕೊಡಿಸಿದ್ದಾರೆ.

ಎಸ್ಐಟಿ : ಕುಟುಂಬದವರಿಗೂ ಗಮನಕ್ಕೆ ತಾರದೆ ಇದ್ದಕ್ಕಿದ್ದಂತೆ ನೀವು ಹೊರಟು ಹೋಗಿದ್ದು ಯಾಕೆ? ಸಂತ್ರಸ್ತೆ: ನನ್ನ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಲಾರಂಭಿಸಿತ್ತು. ಹಾಗಾಗಿ ನನಗೆ ಭಯ ಆಯ್ತು. ಸಿಡಿ ಬಿಡುಗಡೆಯಿಂದ ಮನಸ್ಸಿಗೆ ತುಂಬಾನೇ ನೋವಾಯ್ತು ಹಾಗಾಗಿ ಯಾರ ಕಣ್ಣಿಗೂ ನಾನು ಬೀಳಲಿಲ್ಲ. ಇಲ್ಲಿ ಇರೋದು ಬೇಡ ಎಂದು ನಿರ್ಧರಿಸಿ ಸ್ನೇಹಿತ ಆಕಾಶ್ ಜೊತೆ ಗೋವಾ ಹೋಗಿದ್ದೆ. ಅಲ್ಲಿಂದ ಬೇರೆ ರಾಜ್ಯಗಳಿಗೂ ತೆರಳಿದ್ದೆ

ಎಸ್ಐಟಿ: ಗೋವಾದಲ್ಲಿ ಹೋಗಿ ಎಲ್ಲಿ ಉಳಿದುಕೊಂಡಿದ್ರಿ? ಸಂತ್ರಸ್ತೆ: ಗೋವಾದಲ್ಲಿ ನನ್ನ ಸ್ನೇಹಿತೆ ಮನೆ ಇದೆ, ಆಕೆಯ ಮನೆಯಲ್ಲೇ ಉಳಿದುಕೊಂಡಿದ್ದೆ

ಎಸ್ಐಟಿ: ಮತ್ತೆ ಅಲ್ಲಿಂದ ನಿಮ್ಮ ಊರಿಗಾದರೂ ಬರಬಹುದಿತ್ತಲ್ವಾ? ಸಂತ್ರಸ್ತೆ: ವಿಡಿಯೋ ವೈರಲ್ ಆದ ಬಳಿಕ ನಾನು ಊರಿಗೆ ಹೋಗುವ ಸ್ಥಿತಿಯಲ್ಲಿ ಇರಲಿಲ್ಲ

ಎಸ್ಐಟಿ: ನೀವು ಯಾರದಾದ್ರು ಬಂಧನದಲ್ಲಿ ಇದ್ರಾ? ನಿಮ್ಮ ತಂದೆ ತಾಯಿ, ಮಗಳು ಬಂಧನದಲ್ಲಿದ್ದಾಳೆ ಎಂದಿದ್ದಾರೆ ಸಂತ್ರಸ್ತೆ : ಇಲ್ಲ ಸರ್ ನನ್ನನ್ನು ಯಾರು ಬಂಧಿಸಿಟ್ಟಿರಲಿಲ್ಲ. ನಾನೇ ಕೆಲವರ ಸಹಾಯ ಕೇಳಿದ್ದೆ

ಎಸ್ಐಟಿ: ವಿಡಿಯೋ ಮಾಡುವಂತೆ ನಿಮ್ಮ ಮೇಲೆ ಯಾರದಾದ್ರೂ ಒತ್ತಡವಿತ್ತಾ? ಸಂತ್ರಸ್ತೆ: ಇಲ್ಲ,ನಾನೇ ವಿಡಿಯೋ ಮಾಡಿದ್ದ್ದು, ಯಾರದ್ದೇ ಒತ್ತಡ ನನ್ನ ಮೇಲಿರಲಿಲ್ಲ

ಎಸ್ಐಟಿ: ಅಜ್ಞಾತ ಸ್ಥಳದಿಂದ ವಿಡಿಯೋ ಮಾಡಿದ್ದು ಯಾಕೆ? ನೀವೇ ನೇರವಾಗಿ ಬರಬಹುದಿತ್ತಲ್ವಾ? ಸಂತ್ರಸ್ತೆ: ರಮೇಶ್ ಜಾರಕಿಹೊಳಿ ದೂರು ದಾಖಲು ಮಾಡಿದ್ರಲ್ವಾ, ಅದರಲ್ಲಿ ನನ್ನನ್ನೂ ಅಪರಾಧಿ ಎಂಬಂತೆ ಬಿಂಬಿಸುವ ಯತ್ನ ಮಾಡಲಾಗಿತ್ತು, ಹಾಗಾಗಿ ವಿಡಿಯೊ ಮೂಲಕ ಸ್ಪಷ್ಟನೆ ಕೊಡಬೇಕಾಯಿತು

ಎಸ್ಐಟಿ: ನೀವು ಬೆಂಗಳೂರಿನಿಂದ ತೆರಳಿದಾಗ ನಿಮ್ಮ ಜೊತೆಯಿದ್ದವರು ಯಾರು? ಸಂತ್ರಸ್ತೆ: ನನ್ನ ಸ್ನೇಹಿತ ಆಕಾಶ್ ಬಿಟ್ಟರೆ ಬೇರೆ ಯಾರೂ ನನ್ನ ಜೊತೆ ಯಾರು ಇರಲಿಲ್ಲ

ಎಸ್ಐಟಿ: ಇಷ್ಟು ದಿನಗಳ ನಿಮ್ಮ ಖರ್ಚು-ವೆಚ್ಚವನ್ನೆಲ್ಲ ಯಾರು ನೋಡಿಕೊಂಡರು? ಸಂತ್ರಸ್ತೆ: ನನ್ನಲ್ಲಿದ್ದ ದುಡ್ಡನ್ನೇ ತೆಗೆದುಕೊಂಡು ಹೋಗಿದ್ದೆ

ಎಸ್ಐಟಿ: ಇಷ್ಟು ದಿನ ಯಾಕೆ ನೀವು ಎಲ್ಲಿಯೂ‌ ಕಾಣಿಸಿಕೊಂಡಿಲ್ಲ? ಸಂತ್ರಸ್ತೆ: ನನ್ನ ವಿಡಿಯೋ ವೈರಲ್ ಆಗಿತ್ತು. ರಮೇಶ್ ಜಾರಕಿಹೊಳಿ ಅವರಿಂದ ಭಯ ಕೂಡ ಇತ್ತು ಹಾಗಾಗಿ ನಾನು ಅಜ್ಙಾತ ಸ್ಥಳದಲ್ಲಿ ಇರುವ ಅನಿವಾರ್ಯತೆ ಎದುರಾಗಿತ್ತು.

ಎಸ್ಐಟಿ: ವಿಡಿಯೋ ಮಾತ್ರ ರೆಕಾರ್ಡ್ ಮಾಡ್ತಾ ಇದ್ರಿ, ರೆಕಾರ್ಡ್ ಮಾಡಿದ್ದು ಯಾರು? ಸಂತ್ರಸ್ತೆ: ನನ್ನ ಸ್ನೇಹಿತರ ಮೂಲಕ ರೆಕಾರ್ಡ್ ಮಾಡಿಸ್ತಿದ್ದೆ. ಅವರು ಯಾರು ಅನ್ನೋದು ಬೇಡ. ಅವರಿಗೆ ತೊಂದರೆ ಆಗೋದು ಬೇಡ

ಎಸ್ಐಟಿ: ಹಾಗಾದ್ರೆ ನಿಮ್ಮನ್ನ ಯಾರೂ ಕಿಡ್ನಾಪ್ ಮಾಡಿಲ್ವಾ? ಸಂತ್ರಸ್ತೆ: ಇಲ್ಲ ನಾನಾಗಿಯೇ ಹೋಗಿದ್ದು ಯಾರು ಕಿಡ್ನಾಪ್ ಮಾಡಿಲ್ಲ

ಎಸ್ಐಟಿ: ಸರಿ ಈಗ ನೀವಿನ್ನು ಹೋಗಬಹದು. ಅಗತ್ಯ ಬಿದ್ದರೆ ವಿಚಾರಣೆಗೆ ಕರೆಯುತ್ತೇವೆ, ನೀವು ಬರಬೇಕಾಗುತ್ತದೆ. ಸಂತ್ರಸ್ತೆ: ಸರಿ, ಯಾವಾಗ ಕರೆದರು ವಿಚಾರಣೆಗೆ ಬರುತ್ತೇನೆ. ಆದರೆ ನನಗೆ ನ್ಯಾಯ ಕೊಡಿಸಿ ಪ್ಲೀಸ್……… ಇದು ಎಸ್​ಐಟಿ ಮತ್ತು ಸಂತ್ರಸ್ತೆ ನಡೆದ ಪ್ರಶ್ನೋತ್ತರಗಳ ಸರಮಾಲೆ. ವಿಛಾರನೆ ಬೆಳಗ್ಗೆ ಸರಿಯಾಗಿ 10-30 ಕ್ಕೆ ಆರಂಭವಾಗಿ ಸತತ ನಾಲ್ಕೂವರೆ ಗಂಟೆಗಳ ಕಾಳ ನಡೆಯಿತು. ವಿಚಾರಣೆ ನಂತರ ಗುವತಿಯನ್ನು ಬಿಗಿ ಭದ್ರತೆಯಲ್ಲಿ ಗೌಪ್ಯ ಸ್ಥಳಕ್ಕೆ ರವಾನಿಸಲಾಯಿತು

ಇದನ್ನೂ ಓದಿ: Ramesh Jarkiholi Press Meet: ನಾನು ಅಪರಾಧಿಯಲ್ಲ, ಇಂತಹವು 10 ಬಂದರೂ ನಾನು ಎದುರಿಸಲು ಸಿದ್ಧ -ರಮೇಶ್ ಜಾರಕಿಹೊಳಿ

Published On - 5:21 pm, Sat, 3 April 21

Daily Devotional: ದೇವಾಲಯದ ಹೊಸ್ತಿಲು ಮುಟ್ಟಿ ನಮಸ್ಕರಿಸುವುದರ ಹಿಂದಿನ ಫಲ
Daily Devotional: ದೇವಾಲಯದ ಹೊಸ್ತಿಲು ಮುಟ್ಟಿ ನಮಸ್ಕರಿಸುವುದರ ಹಿಂದಿನ ಫಲ
ಸೂರ್ಯ ಮೀನ ರಾಶಿಯಲ್ಲಿ ಸಂಚಾರ ಮಾಡುವ ಈ ದಿನದ ರಾಶಿ ಭವಿಷ್ಯ
ಸೂರ್ಯ ಮೀನ ರಾಶಿಯಲ್ಲಿ ಸಂಚಾರ ಮಾಡುವ ಈ ದಿನದ ರಾಶಿ ಭವಿಷ್ಯ
ನಮ್ಮ ಫ್ಯಾನ್ಸ್ ’ಬೊಂಬಾಟ್’ ಎಂದ ಕಿಂಗ್ ಕೊಹ್ಲಿ; ವಿಡಿಯೋ
ನಮ್ಮ ಫ್ಯಾನ್ಸ್ ’ಬೊಂಬಾಟ್’ ಎಂದ ಕಿಂಗ್ ಕೊಹ್ಲಿ; ವಿಡಿಯೋ
ಪುನೀತ್​ ರಾಜ್​ಕುಮಾರ್​ಗೆ ವಿಶೇಷ ಗೌರವ ಸಲ್ಲಿಸಿದ ಆರ್​ಸಿಬಿ
ಪುನೀತ್​ ರಾಜ್​ಕುಮಾರ್​ಗೆ ವಿಶೇಷ ಗೌರವ ಸಲ್ಲಿಸಿದ ಆರ್​ಸಿಬಿ
ಗುರುದ್ವಾರ ರಕಬ್‌ಗಂಜ್‌ನಲ್ಲಿ ಪೂಜೆ ಸಲ್ಲಿಸಿದ ಮೋದಿ, ನ್ಯೂಜಿಲೆಂಡ್ ಪಿಎಂ
ಗುರುದ್ವಾರ ರಕಬ್‌ಗಂಜ್‌ನಲ್ಲಿ ಪೂಜೆ ಸಲ್ಲಿಸಿದ ಮೋದಿ, ನ್ಯೂಜಿಲೆಂಡ್ ಪಿಎಂ
ನೂತನ ನಾಯಕನಿಗಾಗಿ ಫ್ಯಾನ್ಸ್ ಬಳಿ ಕಿಂಗ್ ಕೊಹ್ಲಿ ಮನವಿ
ನೂತನ ನಾಯಕನಿಗಾಗಿ ಫ್ಯಾನ್ಸ್ ಬಳಿ ಕಿಂಗ್ ಕೊಹ್ಲಿ ಮನವಿ
ಬೇರೆಯವರನ್ನು ನಿಂದಿಸುವ ಹಕ್ಕು ಪ್ರದೀಪ್ ಈಶ್ವರ್​ಗಿಲ್ಲ: ಮುನಿಸ್ವಾಮಿ
ಬೇರೆಯವರನ್ನು ನಿಂದಿಸುವ ಹಕ್ಕು ಪ್ರದೀಪ್ ಈಶ್ವರ್​ಗಿಲ್ಲ: ಮುನಿಸ್ವಾಮಿ
ಇಫ್ತಾರ್ ಕೂಟದಲ್ಲಿ ಭಾಗವಹಿಸಿದ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ
ಇಫ್ತಾರ್ ಕೂಟದಲ್ಲಿ ಭಾಗವಹಿಸಿದ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ
ಅಮೆರಿಕದ ಗುಪ್ತಚರ ನಿರ್ದೇಶಕಿ ತುಳಸಿ ಗಬ್ಬಾರ್ಡ್​ಗೆ ಗಂಗಾಜಲ ನೀಡಿದ ಮೋದಿ
ಅಮೆರಿಕದ ಗುಪ್ತಚರ ನಿರ್ದೇಶಕಿ ತುಳಸಿ ಗಬ್ಬಾರ್ಡ್​ಗೆ ಗಂಗಾಜಲ ನೀಡಿದ ಮೋದಿ
ಹಂಗಾಮಿ ಸಭಾಧ್ಯಕ್ಷ ಶಿವಲಿಂಗೇಗೌಡರ ಮಾತು ಬೋರ್ಗಲ್ಲ ಮೇಲೆ ಮಳೆ ಸುರಿದಂತೆ!
ಹಂಗಾಮಿ ಸಭಾಧ್ಯಕ್ಷ ಶಿವಲಿಂಗೇಗೌಡರ ಮಾತು ಬೋರ್ಗಲ್ಲ ಮೇಲೆ ಮಳೆ ಸುರಿದಂತೆ!