ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಯಿಂದ ಸ್ಮಾರ್ಟ್ ಯೋಜನೆ; ನಗರದಲ್ಲಿ ಹೆಚ್ಡಿಪಿಇ ಮೂತ್ರಿ ಅಳವಡಿಸಲು ನಿರ್ಧಾರ
ಆಂಧ್ರ ಪ್ರದೇಶದ ವಿಯವಾಡ ನಗರದಲ್ಲಿ ಈ ಹೆಚ್ಡಿಪಿಇ ಮೂತ್ರಿ ಹೆಚ್ಚು ಬಳಕೆಯಲ್ಲಿದೆ. ಏಕಕಾಲಕ್ಕೆ ನಾಲ್ಕು ಜನ ಬಳಸುವಂತಾಗಿದ್ದು, ಚರ್ತುಮುಖವಾಗಿದೆ. ಕೆಳಗಡೆ ಗಟ್ಡಿ ಸಿಮೇಂಟ್ ಫೌಂಡೆಶನ್ ಬಿಟ್ಟರೆ ಮತ್ಯಾವ ಕೆಲಸವೂ ಈ ಹೊಸ ವಿನ್ಯಾಸಕ್ಮೆ ಅವಶ್ಯಕತೆ ಇಲ್ಲ.
ಹುಬ್ಬಳ್ಳಿ: ಸಾರ್ವಜನಿಕರ ಅನುಕೂಲಕ್ಕಾಗಿ ಅವಳಿ ನಗರದ ವಿವಿಧ ಸ್ಥಳಗಳಲ್ಲಿ ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ಹೆಚ್ಡಿಪಿಇ (ಹೈ ಡೆನ್ಸಿಟಿ ಪಾಲಿ ಎಥಿಲಿನ್) ವಸ್ತುವಿನಿಂದ ತಯಾರಿಸಿದ ಯುರಿನಲ್ಸ್ ಅಳವಡಿಸಲು ಮುಂದಾಗಿದೆ. ಮೊದಲು ಪ್ರಾಯೋಗಿಕ ಹೆಚ್ಡಿಪಿಇ ಮೂತ್ರಿಯನ್ನ ಅಳವಡಿಸಲು ಪಾಲಿಕೆ ಹುಬ್ಬಳ್ಳಿಯ ನಿಲಿಜನ್ ರಸ್ತೆಯನ್ನು ಆಯ್ಕೆ ಮಾಡಿಕೊಂಡಿದೆ.
ಈಗಾಗಲೇ ಹೆಚ್ಡಿಪಿಇ ಮೂತ್ರಿಯನ್ನ ಪಾಲಿಕೆಯ ಆವರಣದಲ್ಲಿ ತಂದು ಇಳಿಸಾಗಿದ್ದು, ಇದನ್ನ ಅಳವಡಿಸುವ ಸ್ಥಳದಲ್ಲಿ ಸಿಮೇಂಟ್ ಪೌಂಡೆಶನ್ ಹಾಕಲು ಸಿದ್ಧತೆ ನಡೆಸಲಾಗಿದೆ. ಇನ್ನು ಮೂರ್ನಾಲ್ಕು ದಿನದಲ್ಲು ಹೊಸ ವಿನ್ಯಾಸದ ಮೂತ್ರಿಗೆ ನೀರು ಹಾಗೂ ಒಳ ಚರಂಡಿ ವ್ಯವಸ್ಥೆ ಕಲ್ಪಿಸಿ ಸಾರ್ವಜನಿಕ ಬಳಕೆ ಅರ್ಪಣೆ ಮಾಡಲು ಪಾಲಿಕೆ ಅಣಿಯಾಗಿದೆ.
ಇನ್ನು ಆಂಧ್ರ ಪ್ರದೇಶದ ವಿಯವಾಡ ನಗರದಲ್ಲಿ ಈ ಹೆಚ್ಡಿಪಿಇ ಮೂತ್ರಿ ಹೆಚ್ಚು ಬಳಕೆಯಲ್ಲಿದೆ. ಏಕಕಾಲಕ್ಕೆ ನಾಲ್ಕು ಜನ ಬಳಸುವಂತಾಗಿದ್ದು, ಚರ್ತುಮುಖವಾಗಿದೆ. ಕೆಳಗಡೆ ಗಟ್ಡಿ ಸಿಮೇಂಟ್ ಫೌಂಡೆಶನ್ ಬಿಟ್ಟರೆ ಮತ್ಯಾವ ಕೆಲಸವೂ ಈ ಹೊಸ ವಿನ್ಯಾಸಕ್ಮೆ ಅವಶ್ಯಕತೆ ಇಲ್ಲ. ಒಂದು ಸಂರ್ಪೂಣ ಆಯಾಕಟ್ಟನ್ನು ತಂದರೆ ಸಾಕು ಇದನ್ನು ಸುಲಭವಾಗಿ ನಿರ್ಮಿಸಬಹುದು. ಇನ್ನು ಇದನ್ನು ಬೇರೆಡೆಗೆ ಸ್ಥಳಾಂತರಿಸಲು ಅವಕಾಶವಿದೆ. ಇದು 250 ಲೀಟರ್ ನೀರಿನ ತೊಟ್ಟಿ ಹೊಂದಿದೆ.
ರಾಜ್ಯದ ಪ್ರಮುಖ ವಾಣಿಜ್ಯ ಕೇಂದ್ರವಾಗಿರುವ ಹುಬ್ಬಳ್ಳಿಗೆ ಪ್ರತಿನಿತ್ಯ ಶಿಕ್ಷಣ ಕೇಂದ್ರ, ಕೋಟ್೯ ಮಾರುಕುಟ್ಟೆ, ಹಾಗೂ ಇನ್ನಿತರೇ ಕೆಲಸಕ್ಕೆ ಅಂದಾಜು 70 ರಿಂದ 80 ಸಾವಿರ ಜನ ಬಂದು ಹೋಗುತ್ತಾರೆ. ಬಸ್ ನಿಲ್ದಾಣ ಹೊರತುಪಡಿಸಿದರೆ ಸಾರ್ವಜನಿಕ ಶೌಚಾಲಯ ಮೂತ್ರಿಗಳಿಲ್ಲ. ಹುಬ್ಬಳ್ಳಿಯ ಚೆನ್ನಮ್ಮ ವೃತ್ತ, ಕೊಪ್ಪಿಕರ್ ರಸ್ತೆ ಪಾಲಿಕೆ, ಕೇಶ್ವಪುರ, ಹಳೆ ಹುಬ್ಬಳ್ಳಿ ಇವೆಲ್ಲಾ ಜನದಟ್ಟಣೆ ಇರುವ ಪ್ರದೇಶಗಳು. ಅಲ್ಲದೇ ಪಾಲಿಕೆ ನಡೆಸಿರುವ ಸಮೀಕ್ಷೆ ಪ್ರಕಾರ ವಾಣಿಜ್ಯ ನಗರಿಯಲ್ಲಿ 70 ರಿಂದ 80 ಕಡೆಗಳಲ್ಲಿ ಈ ಹೆಚ್ಡಿಪಿಇಯ ಅಗತ್ಯವಿದೆ.
ಅಲ್ಲದೇ ಜನದಟ್ಟೆಯ ಪ್ರದೇಶದಲ್ಲಿ ಮೂತ್ರಿ ನಿರ್ಮಿಸುವುದು ಅಸಾಧ್ಯ ಹಿಗಾಗೇ ಪಾಲಿಕೆ ಈ ನಿರ್ಧಾರಕ್ಕೆ ಬಂದಿದೆ. ಇನ್ನು ಈ ಹೊಸ ಯೊಜನೆಗೆ ಎಲ್ಲಾ ಖರ್ಚು ವೆಚ್ಚ ಸೇರಿ 1 ಲಕ್ಷ ರೂಪಾಯಿ ಆಗತ್ತದೆ. ಹೀಗಾಗಿ ಕಡಿಮೆ ಖರ್ಚು ಹಾಗೂ ಸುಲಭ ಮಾದರಿಯಲ್ಲಿ ನಿರ್ಮಿಸಬಹುದಾದ ಈ ಹೆಚ್ಡಿಪಿಇ ಮೂತ್ರಿಗಳನ್ನ ನಿರ್ಮಿಸಿ ಇನ್ನಷ್ಟು ಸ್ಮಾಟ್೯ ಅಗಲು ಪಾಲಿಕೆ ಬಯಸಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ಆಯುಕ್ತರಾದ ಸುರೇಶ್ ಇಟ್ನಾಳ್ ಮೊದಲ ಹಂತದಲ್ಲಿ ಪ್ರಾಯೊಗಿಕವಾಗಿ ನಿಲಿಜನ್ ರಸ್ತೆಯಲ್ಲು ನಿರ್ಮಾಣ ಮಾಡಲು ಮುಂದಾಗಿದಾಗಿದ್ದು, ಮುಂದೆ ಸಾರ್ವಜನಿಕರ ಸ್ಪಂದನೆಯನ್ನ ಗಮನಿಸಿ ಉಳಿದ ಕಡೆಗಳಲ್ಲಿ ಅಳವಡಿಸಲಾಗುತ್ತದೆ. ಕಡಿಮೆ ಖರ್ಚು ಮತ್ತು ಸ್ವಚ್ಚ ಹಾಗೂ ಸುಂದರ ಸಿಟಿ ನಿರ್ಮಾಣ ಮಾಡುವುದಕ್ಕೆ ಈ ಹೊಸ ಯೋಚನೆಯನ್ನ ಮಾಡಿದ್ದೇವೆ ಎಂದು ಹೇಳಿದ್ದಾರೆ.
ಒಟ್ಟಿನಲ್ಲಿ ಹುಬ್ಬಳ್ಳಿ- ಧಾರವಾಡ ಅವಳಿ ನಗರ ಸ್ಮಾಟ್೯ ಸಿಟಿಯಾಗಿ ಆಯ್ಕೆಯಾಗಿದೆ. ಆ ನಿಟ್ಟಿನಲ್ಲಿ ಪಾಲಿಕೆ ಕೂಡ ಸ್ಮಾಟ್೯ ಆಗಿ ಕೆಲಸ ಮಾಡಿ, ನಗರವನ್ನ ಮತ್ತಷ್ಟು ಸ್ಮಾಟ್೯ ಮಾಡಲು ನಿರ್ಧರಿಸಿದೆ.
(ವರದಿ: ದತ್ತಾತ್ರೇಯ ಪಾಟೀಲ್ -9980914136)
ಇದನ್ನೂ ಓದಿ:
(Hubli-Dharwad Municipal Corporation Decided to incorporate HDPE urinal in the city)