Karnataka Covid-19 Update: ಕರ್ನಾಟಕದಲ್ಲಿ ಇಂದು 4,373 ಮಂದಿಗೆ ಕೊರೊನಾ ದೃಢ, 19 ಸಾವು

ದಾವಣಗೆರೆ ಜಿಲ್ಲೆಯಲ್ಲಿ 2 ದಿನಗಳಲ್ಲಿ 12 ಮಕ್ಕಳಿಗೆ ಕೊರೊನಾ ಕಂಡುಬಂದಿದೆ. 132 ವಿದ್ಯಾರ್ಥಿಗಳು ಸೋಂಕಿತ ವಿದ್ಯಾರ್ಥಿಗಳ ಸಂಪರ್ಕಕ್ಕೆ ಬಂದಿದ್ದಾರೆ ಎಂದೂ ಮಾಹಿತಿ ಲಭ್ಯವಾಗಿದೆ.

Karnataka Covid-19 Update: ಕರ್ನಾಟಕದಲ್ಲಿ ಇಂದು 4,373 ಮಂದಿಗೆ ಕೊರೊನಾ ದೃಢ, 19 ಸಾವು
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ganapathi bhat

Updated on:Apr 05, 2022 | 12:53 PM

ಬೆಂಗಳೂರು: ರಾಜ್ಯದಲ್ಲಿಂದು ಹೊಸದಾಗಿ 4,373 ಜನರಿಗೆ ಕೊರೊನಾ ದೃಢಪಟ್ಟಿದೆ. ಈ ಮೂಲಕ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 10,10,602ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿಂದು ಕೊರೊನಾ ಸೋಂಕಿನಿಂದ 19 ಜನರ ಸಾವು ಸಂಭವಿಸಿದ್ದು, ಇದುವರೆಗೆ ಕೊರೊನಾಗೆ 12,610 ಜನರು ಬಲಿಯಾಗಿದ್ದಾರೆ. ಸೋಂಕಿತರ ಪೈಕಿ 9,61,359 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. 36,614 ಸೋಂಕಿತರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಬಗ್ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ಕರ್ನಾಟಕ ಜಿಲ್ಲಾವಾರು ಕೊರೊನಾ ವರದಿ ಬೆಂಗಳೂರು ನಗರ 3002, ಬೀದರ್ 172, ಮೈಸೂರು 171, ತುಮಕೂರು 167, ಕಲಬುರಗಿ 151, ದಕ್ಷಿಣ ಕನ್ನಡ 83, ಹಾಸನ 59, ಬೆಂಗಳೂರು ಗ್ರಾಮಾಂತರ 54, ಉಡುಪಿ 53, ಧಾರವಾಡ 39, ಕೋಲಾರ 37, ಮಂಡ್ಯ 36, ಶಿವಮೊಗ್ಗ 36, ಚಿಕ್ಕಮಗಳೂರು 36, ಕೊಪ್ಪಳ 32, ಬೆಳಗಾವಿ 30, ದಾವಣಗೆರೆ 29, ಉತ್ತರ ಕನ್ನಡ 29, ಬಳ್ಳಾರಿ 23, ರಾಯಚೂರು 19, ವಿಜಯಪುರ 18, ಚಾಮರಾಜನಗರ 18, ಚಿತ್ರದುರ್ಗ 14, ಚಿಕ್ಕಬಳ್ಳಾಪುರ 13, ಯಾದಗಿರಿ 13, ಕೊಡಗು 11, ಗದಗ 9, ಬಾಗಲಕೋಟೆ 8, ರಾಮನಗರ 7 ಹಾಗೂ ಹಾವೇರಿ ಜಿಲ್ಲೆಯಲ್ಲಿ 4 ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದೆ.

12 ವಿದ್ಯಾರ್ಥಿಗಳಿಗೆ ಕೊರೊನಾ ದಾವಣಗೆರೆ ಜಿಲ್ಲೆಯಲ್ಲಿ 2 ದಿನಗಳಲ್ಲಿ 12 ಮಕ್ಕಳಿಗೆ ಕೊರೊನಾ ಕಂಡುಬಂದಿದೆ. ಪ್ರೌಢಶಾಲೆಯ 12 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ದೃಢವಾಗಿದೆ. ಹರಿಹರ ತಾಲೂಕು 4, ದಾವಣಗೆರೆ ತಾಲೂಕು 3, ಚನ್ನಗಿರಿ 2, ಹೊನ್ನಾಳಿಯ 2, ಜಗಳೂರಿನ ಓರ್ವ ವಿದ್ಯಾರ್ಥಿಗೆ ಕೊರೊನಾ ತಗುಲಿದೆ. 132 ವಿದ್ಯಾರ್ಥಿಗಳು ಸೋಂಕಿತ ವಿದ್ಯಾರ್ಥಿಗಳ ಸಂಪರ್ಕಕ್ಕೆ ಬಂದಿದ್ದಾರೆ ಎಂದೂ ಮಾಹಿತಿ ಲಭ್ಯವಾಗಿದೆ. 36 ಶಿಕ್ಷಕರು, 24 ಬೋಧಕೇತರ ಸಿಬ್ಬಂದಿ, ಕುಟುಂಬಸ್ಥರಿಗೆ ಟೆಸ್ಟ್ ಮಾಡಲಾಗಿದೆ. 224 ಜನರ ಗಂಟಲು ದ್ರವ ಸಂಗ್ರಹಿಸಿ ಕೊವಿಡ್ ಟೆಸ್ಟ್​ಗೆ ರವಾನೆ ಮಾಡಲಾಗಿದೆ. ವರದಿ ಬರುವವರೆಗೆ ಪ್ರತ್ಯೇಕವಾಗಿರುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ. ದ್ವಿತೀಯ ಸಂಪರ್ಕಕ್ಕೆ ಬಂದವರ ಪತ್ತೆಗೆ ದಾವಣಗೆರೆ ಡಿಸಿ ಸೂಚನೆ ನೀಡಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನಲ್ಲಿಂದು 21 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. 12 ಪುರುಷರು, 9 ಮಹಿಳೆಯರಿಗೆ ಕೊರೊನಾ ಪಾಸಿಟಿವ್ ಆಗಿದೆ. ಸೋಂಕಿತರಿಗೆ ನೆಲಮಂಗಲ ಕೊವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ನೆಲಮಂಗಲ ತಹಶೀಲ್ದಾರ್ ಕೆ.ಮಂಜುನಾಥ್ ಮಾಹಿತಿ ನೀಡಿದ್ದಾರೆ.

ಉಡುಪಿ ಜಿಲ್ಲೆಯಲ್ಲಿ ಇಂದು 53 ಜನರಿಗೆ ಕೊರೊನಾ ದೃಢವಾಗಿದೆ. ಈ ಮೂಲಕ, ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 25,442ಕ್ಕೆ ಏರಿಕೆಯಾಗಿದೆ. ಮಣಿಪಾಲ MIT ಕ್ಯಾಂಪಸ್​ನಲ್ಲಿ ಇಂದು ಐವರಿಗೆ ಕೊರೊನಾ ಸೋಂಕು ಕಂಡುಬಂದಿದೆ. ಎಂಐಟಿ ಕ್ಯಾಂಪಸ್​ನಲ್ಲಿ ಸೋಂಕಿತರ ಸಂಖ್ಯೆ 1,033ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ ಈವರೆಗೆ ಕೊರೊನಾ ಸೋಂಕಿಗೆ 192 ಜನ ಬಲಿಯಾಗಿದ್ದಾರೆ. ಈ ಬಗ್ಗೆ, ಉಡುಪಿ ಡಿಹೆಚ್​​ಒ ಡಾ.ಸುಧೀರ್ ಚಂದ್ರಸೂಡ ಮಾಹಿತಿ ನೀಡಿದ್ದಾರೆ.

ಮೈಸೂರು ಜಿಲ್ಲೆಯಲ್ಲಿಂದು 171 ಜನರಿಗೆ ಕೊರೊನಾ ದೃಢಪಟ್ಟಿದೆ. ಈ ಮೂಲಕ ಮೈಸೂರು ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 56,264ಕ್ಕೆ ಏರಿಕೆಯಾಗಿದೆ. 56,264 ಸೋಂಕಿತರ ಪೈಕಿ 54,331 ಜನರು ಗುಣಮುಖ ಹೊಂದಿದ್ದಾರೆ. ಮೈಸೂರು ಜಿಲ್ಲೆಯಲ್ಲಿ ಇಂದು ಕೊರೊನಾಗೆ 6 ಜನರು ಬಲಿಯಾಗಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ ಕೊರೊನಾದಿಂದ 1,061 ಜನರ ಸಾವು ಸಂಭವಿಸಿದೆ.

ಸೋಂಕಿತರ ಸಂಪರ್ಕದಿಂದ 139 ಜನರಿಗೆ ಕೊರೊನಾ ದೃಢವಾಗಿದ್ದು, ನೆಗಡಿ, ಕೆಮ್ಮು, ಜ್ವರದಿಂದ ಬಳಲ್ತಿದ್ದ 21 ಜನರಿಗೆ ಸೋಂಕು ತಗುಲಿದೆ. ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ 11 ಜನರಿಗೆ ಸೋಂಕು ದೃಢವಾಗಿದೆ. 872 ಸೋಂಕಿತರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಕೊಪ್ಪಳ ಜಿಲ್ಲೆಯಲ್ಲಿ ಇಂದು 34 ಜನರಿಗೆ ಕೊರೊನಾ ದೃಢಪಟ್ಟಿದೆ. ತನ್ಮೂಲಕ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 14,103ಕ್ಕೆ ಏರಿಕೆಯಾಗಿದೆ. ಗಂಗಾವತಿ ತಾಲೂಕು 7, ಕೊಪ್ಪಳ ತಾಲೂಕು 10, ಕುಷ್ಟಗಿ ತಾಲೂಕು 13, ಯಲಬುರ್ಗಾ ತಾಲೂಕು 4 ಕೇಸ್ ದಾಖಲಾಗಿದೆ. ಜಿಲ್ಲೆಯಲ್ಲಿ ಇದುವರೆಗೆ ಕೊರೊನಾಗೆ 286 ಜನರು ಬಲಿಯಾಗಿದ್ದಾರೆ.

ಸಾರ್ವಜನಿಕ ಶಿಕ್ಷಣ ಇಲಾಖೆ ಸಭೆ 1ರಿಂದ 9ನೇ ತರಗತಿ ಮೌಲ್ಯಾಂಕನ ಪರೀಕ್ಷಾ ವೇಳಾಪಟ್ಟಿ, ಶೈಕ್ಷಣಿಕ ಅವಧಿ ನಿಗದಿಪಡಿಸುವ ಬಗ್ಗೆ ಏಪ್ರಿಲ್​​ 5ರಂದು ಸಭೆ ನಡೆಸಲು ಶಿಕ್ಷಣ ಇಲಾಖೆ ತೀರ್ಮಾನಿಸಿದೆ. ತಜ್ಞರು, ಖಾಸಗಿ ಶಾಲೆಗಳ ಒಕ್ಕೂಟಗಳ ಪ್ರತಿನಿಧಿಗಳ ಸಭೆ ಕರೆದ ಸಾರ್ವಜನಿಕ ಶಿಕ್ಷಣ ಇಲಾಖೆ, ಖಾಸಗಿ ಶಾಲೆಗಳ ಒಕ್ಕೂಟ ರುಪ್ಸಾ, ಕ್ಯಾಮ್ಸ್​ಗೆ ಆಹ್ವಾನ ನೀಡಿದೆ.

ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಮಕ್ಕಳನ್ನು ಮನೆಗೆ ಕಳಿಸಬೇಕು ಕೊರೊನಾದಿಂದ 6ರಿಂದ 9ನೇ ತರಗತಿಗಳು ಸ್ಥಗಿತವಾಗಿರುವ ಹಿನ್ನೆಲೆಯಲ್ಲಿ, ಸರ್ಕಾರಿ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯಗಳಲ್ಲಿರುವ 6ರಿಂದ 9ನೇ ತರಗತಿ ವಿದ್ಯಾರ್ಥಿಗಳನ್ನು ಮನೆಗೆ ಕಳಿಸಬೇಕು. ಪೋಷಕರನ್ನು ಕರೆಸಿಕೊಂಡು ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಮಕ್ಕಳನ್ನು ಮನೆಗೆ ಕಳಿಸಬೇಕು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಸುತ್ತೋಲೆ ಹೊರಡಿಸಿದೆ.

ಖಾಸಗಿ ಆಸ್ಪತ್ರೆ ಮುಖ್ಯಸ್ಥರೊಂದಿಗೆ ಸಭೆ ಬೆಂಗಳೂರಿನಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರೊಂದಿಗೆ ಬಿಬಿಎಂಪಿ ಆಯುಕ್ತ ಗೌರವ್‌ ಗುಪ್ತಾ ತುರ್ತು ಸಭೆ ನಡೆಸಿದ್ದಾರೆ. ದರ ನಿಗದಿ, ಬೆಡ್‌ಗಳ ವ್ಯವಸ್ಥೆ, ಸರ್ಕಾರದ ಮಾರ್ಗಸೂಚಿ ಪಾಲಿಸುವಂತೆ ಖಾಸಗಿ ಆಸ್ಪತ್ರೆಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಕೊರೊನಾ ತಡೆಗೆ ದೆಹಲಿಯಲ್ಲಿ ನಡೆಯಿತು ಧನ್ವಂತರಿ ಮಹಾಯಾಗ!

ಇದನ್ನೂ ಓದಿ: IPL 2021: ಕೊರೊನಾ ಕಪಿಮುಷ್ಠಿಯಲ್ಲಿ ಐಪಿಎಲ್​.. ಕೊಲ್ಕತ್ತಾ, ಡೆಲ್ಲಿ ನಂತರ ಚೆನ್ನೈ ಮೇಲೆ ದಾಳಿ ನಡೆಸಿದ ಮಹಾಮಾರಿ!

Published On - 10:17 pm, Sat, 3 April 21

ಪಾರ್ಕ್​ನಲ್ಲಿ ಹಾಡಿನ ಶೂಟಿಂಗ್ ಮಾಡಿದ್ರೆ ನೋಡ್ತೀರಾ? ಉಪೇಂದ್ರ ಪ್ರಶ್ನೆ
ಪಾರ್ಕ್​ನಲ್ಲಿ ಹಾಡಿನ ಶೂಟಿಂಗ್ ಮಾಡಿದ್ರೆ ನೋಡ್ತೀರಾ? ಉಪೇಂದ್ರ ಪ್ರಶ್ನೆ
ಹಿಂದಿ ಹಾಡಿಗೆ ಸಖತ್ತಾಗಿ ಅಭಿನಯ ಮಾಡಿದ 5 ವರ್ಷದ ಪುಟ್ಟ ಬಾಲಕಿ
ಹಿಂದಿ ಹಾಡಿಗೆ ಸಖತ್ತಾಗಿ ಅಭಿನಯ ಮಾಡಿದ 5 ವರ್ಷದ ಪುಟ್ಟ ಬಾಲಕಿ
ಸುಳ್ಳು ಕೇಸಲ್ಲಿ ರೇವಣ್ಣನನ್ನು ಸಿಕ್ಕಿಸುವ ಪ್ರಯತ್ನ ಮಾಡಲಾಗಿತ್ತು:ಹೆಚ್ಡಿಕೆ
ಸುಳ್ಳು ಕೇಸಲ್ಲಿ ರೇವಣ್ಣನನ್ನು ಸಿಕ್ಕಿಸುವ ಪ್ರಯತ್ನ ಮಾಡಲಾಗಿತ್ತು:ಹೆಚ್ಡಿಕೆ
ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲು ನಾವು ನೀಡಿದ ವರದಿ ನೆರವಾಗಲಿದೆ:ಬಂಗಾರಪ್ಪ
ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲು ನಾವು ನೀಡಿದ ವರದಿ ನೆರವಾಗಲಿದೆ:ಬಂಗಾರಪ್ಪ
‘ಪುಷ್ಪ 2’ ಸಿನಿಮಾ ಮೊದಲ ದಿನ ಎಷ್ಟು ಗಳಿಸಲಿದೆ: ವಿತರಕರ ನಿರೀಕ್ಷೆ ಏನು?
‘ಪುಷ್ಪ 2’ ಸಿನಿಮಾ ಮೊದಲ ದಿನ ಎಷ್ಟು ಗಳಿಸಲಿದೆ: ವಿತರಕರ ನಿರೀಕ್ಷೆ ಏನು?
‘ಹೆಣ್ಮಕ್ಕಳ ಹಿಂದೆ ತಿರುಗುವ ಜೊಲ್ಲ’: ಶಿಶಿರ್ ಬಗ್ಗೆ ಚೈತ್ರಾ ಗಂಭೀರ ಆರೋಪ
‘ಹೆಣ್ಮಕ್ಕಳ ಹಿಂದೆ ತಿರುಗುವ ಜೊಲ್ಲ’: ಶಿಶಿರ್ ಬಗ್ಗೆ ಚೈತ್ರಾ ಗಂಭೀರ ಆರೋಪ
ಆಂತರಿಕ ವಿಷಯಗಳ ಬಗ್ಗೆ ಮಾತಾಡಬಾರದೆಂದು ಸಮಿತಿ ಹೇಳಿದೆ: ಬಸನಗೌಡ ಯತ್ನಾಳ್
ಆಂತರಿಕ ವಿಷಯಗಳ ಬಗ್ಗೆ ಮಾತಾಡಬಾರದೆಂದು ಸಮಿತಿ ಹೇಳಿದೆ: ಬಸನಗೌಡ ಯತ್ನಾಳ್
ಶಿವಕುಮಾರ್ ಧೋರಣೆ ಬೇರೆ ಪಕ್ಷಗಳ ನಾಯಕರಿಗೆ ಮಾದರಿಯಾಗಬಹುದು!
ಶಿವಕುಮಾರ್ ಧೋರಣೆ ಬೇರೆ ಪಕ್ಷಗಳ ನಾಯಕರಿಗೆ ಮಾದರಿಯಾಗಬಹುದು!
ಹಾಸನದಲ್ಲಿ ಜೆಡಿಎಸ್ ಪ್ರಭಾವ ಸಂಪೂರ್ಣವಾಗಿ ತಗ್ಗಿಸಲು ಕಾಂಗ್ರೆಸ್ ಹುನ್ನಾರ
ಹಾಸನದಲ್ಲಿ ಜೆಡಿಎಸ್ ಪ್ರಭಾವ ಸಂಪೂರ್ಣವಾಗಿ ತಗ್ಗಿಸಲು ಕಾಂಗ್ರೆಸ್ ಹುನ್ನಾರ
ವಿಜಯೇಂದ್ರ ತಂಡದಿಂದ ಕಲ್ಯಾಣ ಕರ್ನಾಟಕದಲ್ಲಿ ರೈತರ ಪರ ಹೋರಾಟ ಬೇಕಿತ್ತಾ?
ವಿಜಯೇಂದ್ರ ತಂಡದಿಂದ ಕಲ್ಯಾಣ ಕರ್ನಾಟಕದಲ್ಲಿ ರೈತರ ಪರ ಹೋರಾಟ ಬೇಕಿತ್ತಾ?