ಕೊರೊನಾ ತಡೆಗೆ ದೆಹಲಿಯಲ್ಲಿ ನಡೆಯಿತು ಧನ್ವಂತರಿ ಮಹಾಯಾಗ!

ಅಶೋಕ್ ಸಿಂಘಾಲ್​ ಫೌಂಡೇಷನ್ ಮತ್ತು ನಮೋ ಸದ್ಭಾವನಾ ಸಮಿತಿ ಇಂದು ದೆಹಲಿಯ ಛತ್ತರ್​ಪುರ್​ನಲ್ಲಿ ಕೊರೊನಾ ವಿರುದ್ಧ ಧನ್ವಂತರಿ ಮಹಾಯಾಗ ನಡೆಸಿದೆ.

ಕೊರೊನಾ ತಡೆಗೆ ದೆಹಲಿಯಲ್ಲಿ ನಡೆಯಿತು ಧನ್ವಂತರಿ ಮಹಾಯಾಗ!
ದೆಹಲಿಯಲ್ಲಿ ನಡೆದ ಧನ್ವಂತರಿ ಯಾಗ
Follow us
ರಾಜೇಶ್ ದುಗ್ಗುಮನೆ
|

Updated on:Apr 03, 2021 | 9:07 PM

ದೆಹಲಿ: ದೇಶದಲ್ಲಿ ಕೊರೊನಾ ವೈರಸ್​ ಮಿತಿಮೀರಿ ಹರಡುತ್ತಿದೆ. ಕೊರೊನಾ ನಿಯಂತ್ರಣಕ್ಕೆ ಹಲವು ರಾಜ್ಯಗಳಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ. ಈ ಮಧ್ಯೆ, ಕೊರೊನಾ ನಿಯಂತ್ರಣ ಮಾಡಲು ಯಜ್ಞ-ಯಾಗಗಳನ್ನೂ ಕೈಗೊಳ್ಳಲಾಗುತ್ತಿದೆ. ದೆಹಲಿಯ ಛತ್ತರ್​ಪುರ್​ನಲ್ಲಿ​ 350 ಅರ್ಚಕರು ಧನ್ವಂತರಿ ಮಹಾಯಾಗ ನಡೆಸಿದ್ದಾರೆ. ಅಶೋಕ್ ಸಿಂಘಾಲ್​ ಫೌಂಡೇಷನ್ ಮತ್ತು ನಮೋ ಸದ್ಭಾವನಾ ಸಮಿತಿ ಇಂದು ದೆಹಲಿಯ ಛತ್ತರ್​ಪುರ್​ನಲ್ಲಿ ಕೊರೊನಾ ವಿರುದ್ಧ ಧನ್ವಂತರಿ ಮಹಾಯಾಗ ನಡೆಸಿದೆ. 350ಕ್ಕೂ ಹೆಚ್ಚು ಅರ್ಚಕರು ಇದರಲ್ಲಿ ಭಾಗಿಯಾಗಿದ್ದರು.ಯಜ್ಞ ನಡೆಯುವ ಜಾಗದಲ್ಲಿ ನಾಲ್ಕು ವೇದದ ಹೆಸರಲ್ಲಿ ನಾಲ್ಕು ಬಾಗಿಲು ತೆರೆಯಲಾಗಿತ್ತು ಎನ್ನುವುದು ವಿಶೇಷ.

ಅಶೋಕ್ ಸಿಂಘಾಲ್​ ಫೌಂಡೇಷನ್​​ನ ಮಹೇಶ್​ ಭಗಚಂದ್​ ಮಾತನಾಡಿ, ದೇಶದಲ್ಲಿ ಕೊರೊನಾ ವೈರಸ್​ ಹೆಚ್ಚುತ್ತಿದೆ. ಇದನ್ನು ತಡೆಯಲು ನಾವು ಧನ್ವಂತರಿ ಯಜ್ಞ ನಡೆಸುತ್ತಿದ್ದೇವೆ. ನಾವು ಸ್ವಸ್ಥರಾಗಿರಲು ಈ ರೀತಿಯ ಯಜ್ಞ ಅವಶ್ಯಕತೆ ಇದೆ ಎಂದು ಅಭಿಪ್ರಾಯಪಟ್ಟರು.

ಪ್ರಧಾನ ಅರ್ಚಕ ವೆಂಕಟರಮಣ ಶಾಸ್ತ್ರಿ ಮಾತನಾಡಿ, ಆಯುರ್ವೇದದ ಪ್ರಕಾರ ತುಂಬಾ ರೋಗಗಳಿಲ್ಲ. ಆದರೆ, ಇರುವ ರೋಗಗಳಿಗೆ ಆಯುರ್ವೇದದಲ್ಲಿ ಖಂಡೀತವಾಗಿಯೂ ಮದ್ದಿದೆ. ನಾವು ಖಂಡಿತವಾಗಿಯೂ ಕೊರೊನಾ ಓಡಿಸಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

ದೇಶದಲ್ಲಿ ಕೊರೊನಾ ಎರಡನೇ ಅಲೆಯ ಅಬ್ಬರ ದಿನದಿನಕ್ಕೂ ಹೆಚ್ಚುತ್ತಿದೆ. ಒಂದು ದಿನದಲ್ಲಿ ದಾಖಲಾಗುವ ಕೊವಿಡ್​ ಸೋಂಖಿತರ ಸಂಖ್ಯೆ ಏರುತ್ತಲೇ ಇದೆ. ಕಳೆದ 24ಗಂಟೆಯಲ್ಲಿ 89,129 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, 714 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ. 44,202 ಜನರು ಚೇತರಿಸಿಕೊಂಡು ಡಿಸ್​ಚಾರ್ಜ್​ ಆಗಿದ್ದಾರೆ. ಈ ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯ ದತ್ತಾಂಶ ಬಿಡುಗಡೆ ಮಾಡಿದೆ. ಭಾರತದಲ್ಲಿ ಸದ್ಯ 6,58,909 ಸಕ್ರಿಯ ಪ್ರಕರಣಗಳು ಇವೆ.

ಇನ್ನು ದೇಶದ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 1,23,92,260ಕ್ಕೆ ಏರಿಕೆಯಾಗಿದ್ದು, ಸಾವಿನ ಸಂಖ್ಯೆ 1,64,110ಕ್ಕೆ ತಲುಪಿದೆ. ಶುಕ್ರವಾರದ ಹೊತ್ತಿಗೆ ಒಟ್ಟು 24,69,59,192ಮಾದರಿಗಳನ್ನು ತಪಾಸಣೆಗೆ ಒಳಪಡಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ತಿಳಿಸಿದೆ. ಕೊರೊನಾ ಎರಡನೇ ಅಲೆ ಕೆಲವೇ ರಾಜ್ಯಗಳಲ್ಲಿ ಅತಿಹೆಚ್ಚಾಗಿ ಬಾಧಿಸುತ್ತಿದೆ. ಅದರಲ್ಲೂ ಮಹಾರಾಷ್ಟ್ರದಲ್ಲಿ ಉತ್ತುಂಗಕ್ಕೇರಿದ್ದು, ಅಲ್ಲಿನ ಕೆಲವು ನಗರಗಳಿಗೆ ಅದಾಗಲೇ ಲಾಕ್​ಡೌನ್​ ಹೇರಲಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಮಹಾರಾಷ್ಟ್ರ ಮತ್ತೊಮ್ಮೆ ಲಾಕ್​ಡೌನ್ ಆಗುವ ಸಾಧ್ಯತೆ ಹೆಚ್ಚಾಗಿದೆ.

ಇನ್ನೊಂದೆಡೆ ಕೊರೊನಾ ಲಸಿಕೆ ವಿತರಣೆ ಅಭಿಯಾನವೂ ಭರದಿಂದ ಸಾಗುತ್ತಿದೆ. ಈವರೆಗೆ 7.3 ಕೋಟಿ ಜನರಿಗೆ ಲಸಿಕೆ ನೀಡಲಾಗಿದೆ. ಹಾಗೇ ಕಳೆದ 24 ಗಂಟೆಯಲ್ಲಿ 31 ಲಕ್ಷ ಮಂದಿ ಲಸಿಕೆ ಪಡೆದಿದ್ದಾರೆ. ದೇಶದಲ್ಲಿ ಏಪ್ರಿಲ್​ 1ರಿಂದ ಮೂರನೇ ಹಂತದ ಲಸಿಕೆ ವಿತರಣೆ ಶುರುವಾಗಿದ್ದು, ಇದರಡಿಯಲ್ಲಿ 45 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೊವಿಡ್​ ಲಸಿಕೆ ನೀಡಲಾಗುತ್ತಿದೆ.

ಇದನ್ನೂ ಓದಿ: ಬಿಗ್‌ ಬಿ ಅಮಿತಾಬ್‌ ಬಚ್ಚನ್‌ ಮತ್ತು ಅಭಿಷೇಕ್‌ ಬಚ್ಚನ್‌ಗೆ ಕೊರನಾ ಸೋಂಕು

Published On - 8:38 pm, Sat, 3 April 21