ಚತ್ತೀಸಗಡ್ನಲ್ಲಿ ನಕ್ಸಲರ ಗುಂಡಿನ ದಾಳಿಗೆ ಐವರು ಯೋಧರು ಹುತಾತ್ಮ: ಇಬ್ಬರನ್ನು ಹೊಡೆದುರುಳಿಸಿದ ರಕ್ಷಣಾ ಪಡೆ
ಮಾರ್ಚ್ 23ರಂದು ಇಲ್ಲಿನ ನಾರಾಯಣಪುರ ಜಿಲ್ಲೆಯಲ್ಲಿ ರಕ್ಷಣಾ ಸಿಬ್ಬಂದಿಯನ್ನು ಹೊತ್ತು ಪ್ರಯಾಣಿಸುತ್ತಿದ್ದ ವಾಹನದ ಮೇಲೆ ನಕ್ಸಲರು ಐಇಡಿ ದಾಳಿ ನಡೆಸಿದ್ದ ಪರಿಣಾಮ ಐವರು ಡಿಆರ್ಜಿ ಸಿಬ್ಬಂದಿ ಮೃತಪಟ್ಟಿದ್ದರು.
ಚತ್ತೀಸಗಡ್: ಇಲ್ಲಿನ ಬಿಜಾಪುರ ಜಿಲ್ಲೆಯಲ್ಲಿ ನಕ್ಸಲರ ಅಟ್ಟಹಾಸಕ್ಕೆ 5 ಮಂದಿ ಸೈನಿಕರು ಹುತಾತ್ಮರಾಗಿದ್ದು, 20ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಇಂದು ಬೆಳಗ್ಗೆಯಿಂದಲೂ ರಕ್ಷಣಾ ಸಿಬ್ಬಂದಿ ಮತ್ತು ನಕ್ಸಲರ ನಡುವೆ ಎನ್ಕೌಂಟರ್ ನಡೆದಿತ್ತು. ಭದ್ರತಾ ಪಡೆಗಳ ದಾಳಿಗೆ ಇಬ್ಬರು ನಕ್ಸಲರು ಬಲಿಯಾಗಿದ್ದು, ಅದರಲ್ಲಿ ಮಹಿಳೆಯೂ ಒಬ್ಬಳಿದ್ದಾಳೆ. ಹುತಾತ್ಮರಾದ ಯೋಧರಲ್ಲಿ ಇಬ್ಬರು ಕೇಂದ್ರೀಯ ಮೀಸಲು ಪಡೆ(CRPF)ಗೆ ಸೇರಿದವರು. ಮತ್ತೆ ಮೂವರು ಜಿಲ್ಲಾ ರಿಸರ್ವ್ ಗಾರ್ಡ್ (DRG)ನವರಾಗಿದ್ದಾರೆ.
ಬಿಜಾಪುರದ ತಾರೆಮ್ನ ಸಿಲ್ಗರ್ ಅರಣ್ಯದಲ್ಲಿ ಅಡಗಿದ್ದ ನಕ್ಸಲರ ವಿರುದ್ಧ ಸಿಆರ್ಪಿಎಫ್, ಡಿಆರ್ಜಿ, ಎಸ್ಟಿಎಫ್ಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸುತ್ತಿದ್ದರು. ಸುಮಾರು 400 ಸಿಬ್ಬಂದಿ ಇದ್ದ ಭದ್ರತಾ ಪಡೆಗಳ ಮೇಲೆ ನಕ್ಸಲರು ಗುಂಡಿನ ದಾಳಿ ನಡೆಸಿದ ಪರಿಣಾಮ ಐವರ ಜೀವ ಹೋಗಿದೆ ಎಂದು ಚತ್ತೀಸ್ಗಡ ಡಿಜಿಪಿ ಡಿಎಂ ಅಶ್ವಥಿ ತಿಳಿಸಿದ್ದಾರೆ. ಘಟನೆ ನಡೆಯುತ್ತಿದ್ದಂತೆ ತಾರೆಮ್ಗೆ 9 ಆಂಬುಲೆನ್ಸ್ಗಳು, ಎರಡು ಎಂಐ-17 ಹೆಲಿಕಾಪ್ಟರ್ಗಳು ತೆರಳಿವೆ.
ಮಾರ್ಚ್ 23ರಂದು ಇಲ್ಲಿನ ನಾರಾಯಣಪುರ ಜಿಲ್ಲೆಯಲ್ಲಿ ರಕ್ಷಣಾ ಸಿಬ್ಬಂದಿಯನ್ನು ಹೊತ್ತು ಪ್ರಯಾಣಿಸುತ್ತಿದ್ದ ವಾಹನದ ಮೇಲೆ ನಕ್ಸಲರು ಐಇಡಿ ದಾಳಿ ನಡೆಸಿದ್ದ ಪರಿಣಾಮ ಐವರು ಡಿಆರ್ಜಿ ಸಿಬ್ಬಂದಿ ಮೃತಪಟ್ಟಿದ್ದರು. ಒಟ್ಟಾರೆ ಈ ಭಾಗದಲ್ಲಿ ನಕ್ಸಲರ ಕ್ರೌರ್ಯಕ್ಕೆ ಪೊಲೀಸರು, ಯೋಧರು ಪದೇಪದೆ ಬಲಿಯಾಗುತ್ತಿರುವುದು ದುರಂತವೇ ಆಗಿದೆ.
Published On - 6:50 pm, Sat, 3 April 21