ಡಿ.ಕೆ. ಶಿವಕುಮಾರ್, ಯಡಿಯೂರಪ್ಪ, ವಿಜಯೇಂದ್ರ ಮೂವರೂ ಒಂದೇ ಇದ್ದಾರೆ, ಆದ್ರೆ ಪಕ್ಷ ಬೇರೆ ಬೇರೆ: ಬಸನಗೌಡ ಪಾಟೀಲ್ ಯತ್ನಾಳ್
ಯಡಿಯೂರಪ್ಪ ನಮ್ಮ ಪಕ್ಷದಿಂದ ಸಿಎಂ ಆಗಿದ್ದಾರೆ. ಈಶ್ವರಪ್ಪರಿಗೆ ಸಿಎಂಗೆ ಹೇಳುವ, ಕೇಳುವ ಅಧಿಕಾರವಿದೆ. ಈಶ್ವರಪ್ಪನವರದು-ನಮ್ಮದು ಗೊಂದಲ ಏನೇ ಇದ್ದರೂ, ಅದು ನಮ್ಮ ಪಕ್ಷದ್ದು, ನಾವೇ ಬಗೆಹರಿಸಿಕೊಳ್ಳುತ್ತೇವೆ ಎಂದು ವಾಗ್ದಾಳಿ ನಡೆಸಿದ್ದಾರೆ.
ವಿಜಯಪುರ: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ಧ ಸಚಿವ ಕೆ.ಎಸ್. ಈಶ್ವರಪ್ಪ ದೂರು ನೀಡಿರುವ ವಿಚಾರವಾಗಿ, ದೂರು ನೀಡಿದ್ದಕ್ಕೆ ಸಚಿವ ಈಶ್ವರಪ್ಪ ರಾಜೀನಾಮೆ ಪಡೆಯಿರಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿಕೆ ನೀಡಿದ್ದರು. ಶಿವಕುಮಾರ್ ಹೇಳಿಕೆಗೆ ಶಾಸಕ ಯತ್ನಾಳ್ ವಿಜಯಪುರದಲ್ಲಿ ಇಂದು (ಏಪ್ರಿಲ್ 3) ತಿರುಗೇಟು ನೀಡಿದ್ದಾರೆ.
ಡಿ.ಕೆ. ಶಿವಕುಮಾರ್ ಅವರೇ, ನಿಮ್ಮ ತಟ್ಟೆಯಲ್ಲಿ ಏನೇನೋ ಬಿದ್ದಿದೆ. ಮೊದಲು ಅದನ್ನು ತೆಗೆದುಕೊಳ್ಳಿ, ಆಮೇಲೆ ನಮ್ಮ ಪಕ್ಷದ ಬಗ್ಗೆ ಮಾತನಾಡಿ. ಡಿಕೆಶಿ, ಯಡಿಯೂರಪ್ಪ, ವಿಜಯೇಂದ್ರ ಎಲ್ಲಾ ಒಂದೇ. ಮೂವರೂ ಒಂದೇ ಇದ್ದಾರೆ, ಆದರೆ ಪಕ್ಷ ಬೇರೆ ಬೇರೆ. ಯಡಿಯೂರಪ್ಪ ನಮ್ಮ ಪಕ್ಷದಿಂದ ಸಿಎಂ ಆಗಿದ್ದಾರೆ. ಈಶ್ವರಪ್ಪರಿಗೆ ಸಿಎಂಗೆ ಹೇಳುವ, ಕೇಳುವ ಅಧಿಕಾರವಿದೆ. ಈಶ್ವರಪ್ಪನವರದು-ನಮ್ಮದು ಗೊಂದಲ ಏನೇ ಇದ್ದರೂ, ಅದು ನಮ್ಮ ಪಕ್ಷದ್ದು, ನಾವೇ ಬಗೆಹರಿಸಿಕೊಳ್ಳುತ್ತೇವೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಸಿದ್ದರಾಮಯ್ಯರನ್ನು ಮುಗಿಸಬೇಕು ಅಂದ್ರಿ. ಸಿದ್ದರಾಮಯ್ಯರನ್ನು ಮುಗಿಸಿದರೆ ಕಾಂಗ್ರೆಸ್ ಮುಗಿಯುತ್ತೆ. ಕಾಂಗ್ರೆಸ್ ಮುಗಿಯತ್ತೆ ಎಂದು ನಿಮಗೆ ಅರ್ಥವಾಯ್ತು. ಹೀಗಾಗಿ ಮತ್ತೆ ಹೋಗಿ ಸಿದ್ದರಾಮಯ್ಯರ ಕಾಲು ಹಿಡಿದ್ರಿ. ನಿಮ್ಮ ಪಕ್ಷದ್ದು ನೀವು ನೋಡಿಕೊಳ್ಳಿ ಎಂದು ವಿಜಯಪುರದಲ್ಲಿ ಡಿ.ಕೆ. ಶಿವಕುಮಾರ್ ವಿರುದ್ಧ ಯತ್ನಾಳ್ ಹರಿಹಾಯ್ದಿದ್ದಾರೆ.
ನಾಲಾಯಕ್ ಯಾರಾದರೂ ಇದ್ರೆ ಅದು ವಿಜಯಪುರದವ: ಮುರುಗೇಶ್ ನಿರಾಣಿ ವಾಗ್ದಾಳಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ಧ ಬಸನಗೌಡ ಪಾಟೀಲ್ ಯತ್ನಾಳ್ ಪದೇಪದೆ ವಾಗ್ದಾಳಿ ಮಾಡುವ ವಿಚಾರಕ್ಕೆ ಸಂಬಂಧಿಸಿ ಬೆಳಗಾವಿಯಲ್ಲಿ ಆಹಾರ ಖಾತೆ ಸಚಿವ ಉಮೇಶ್ ಕತ್ತಿ ಹೇಳಿಕೆ ನೀಡಿದ್ದಾರೆ. ಹೈಕಮಾಂಡ್ ನಾಯಕರು ಎಲ್ಲವನ್ನೂ ಗಮನಿಸುತ್ತಿದ್ದಾರೆ. ಯತ್ನಾಳ್ ಸರಿ ಮಾಡಿಕೊಂಡು ಹೋಗುತ್ತಾರೆಂಬ ವಿಶ್ವಾಸವಿದೆ. ಅವರ ಹೇಳಿಕೆ ಉಪಚುನಾವಣೆ ಮೇಲೆ ಪರಿಣಾಮ ಬೀರಲ್ಲ ಎಂದು ತಿಳಿಸಿದ್ದಾರೆ.
ಪಕ್ಷಕ್ಕೆ ಮುಜುಗರ ತರುವಂತೆ ನಡೆದುಕೊಳ್ಳುತ್ತಿರುವ ಬಸನಗೌಡ ಪಾಟೀಲ್ ವಿರುದ್ಧ ಕ್ರಮಕೈಗೊಳ್ಳಬೇಕೋ ಬೇಡ್ವೋ ಎಂಬುದು ವರಿಷ್ಠರಿಗೆ ಬಿಟ್ಟ ವಿಚಾರ. ಉಪಚುನಾವಣೆಯಲ್ಲಿ 5 ಲಕ್ಷ ಮತಗಳ ಅಂತದಿಂದ ನಾವು ಗೆಲ್ಲುತ್ತೇವೆ ಎಂದು ಸಚಿವ ಉಮೇಶ್ ಕತ್ತಿ ಭರವಸೆ ವ್ಯಕ್ತಪಡಿಸಿದ್ದಾರೆ.
ಏಪ್ರಿಲ್ 17ರಂದು ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಮಾತನಾಡಿದ ಉಮೇಶ್ ಕತ್ತಿ, ಬಿಜೆಪಿ ಉಸ್ತುವಾರಿ ಹುಬ್ಬಳ್ಳಿಯವರ ಕೈಯಲ್ಲಿದೆ ಎಂಬ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದಾರೆ. ಹುಬ್ಬಳ್ಳಿ-ಧಾರವಾಡದವರು ಏನು ಪಾಕಿಸ್ತಾನದವರಲ್ಲ. ಅಭಿವೃದ್ಧಿ ಮಾಡುವಾಗ ಅಭಿವೃದ್ಧಿ ಮಾಡೋಣ. ಎಲೆಕ್ಷನ್ ಮಾಡೋವಾಗ ಎಲೆಕ್ಷನ್ ಮಾಡೋಣ. ಜವಾಬ್ದಾರಿ ಕೊಟ್ರೆ ಉಸ್ತುವಾರಿ ಸಚಿವರಾಗಿ ಅಭಿವೃದ್ಧಿ ಮಾಡುತ್ತೇವೆ. ಈ ಚುನಾವಣೆಯಲ್ಲಿಯೂ ನನ್ನ ನೇತೃತ್ವ ಇದ್ದೇ ಇದೆ ಎಂದು ಉಮೇಶ್ ಕತ್ತಿ ಮಾತನಾಡಿದ್ದಾರೆ.
ಯಡಿಯೂರಪ್ಪ ಪುತ್ರ ಬಿ.ವೈ. ವಿಜಯೇಂದ್ರ ಮುಂದೆ ಕೈಕಟ್ಟಿಕೊಂಡು ನಿಲ್ಲುತ್ತಾರೆ ಎಂಬ ಹೇಳಿಕೆಗೆ ಯತ್ನಾಳ್ ಹೆಸರು ಹೇಳದೆ ಮುರುಗೇಶ್ ನಿರಾಣಿ ವಾಗ್ದಾಳಿ ನಡೆಸಿದ್ದಾರೆ. ಯತ್ನಾಳ್ ಯಾರಿಗೆ ಮಾತನಾಡುವುದನ್ನ ಬಿಟ್ಟಿದ್ದಾನೆ. ನಾಲಾಯಕ್ ಯಾರಾದರೂ ಇದ್ರೆ ಅದು ವಿಜಯಪುರದವ ಎಂದು ಹೇಳಿದ್ದಾರೆ. ಏಕವಚನದಲ್ಲಿ ವಾಗ್ದಾಳಿ ನಡೆಸುವಾಗ ಉಮೇಶ್ ಕತ್ತಿ ನಿರಾಣಿಯನ್ನು ತಡೆದಿದ್ದಾರೆ.
ಇದನ್ನೂ ಓದಿ: ವಿಜಯೇಂದ್ರ ಮುಂದೆ ಸಚಿವರೆಲ್ಲ ನಿಂತು ಮಾತನಾಡಬೇಕು.. ಕುಳಿತು ಕೊಳ್ಳಲು ಕುರ್ಚಿ ಇರುವುದಿಲ್ಲ: ಶಾಸಕ ಬಸನಗೌಡ ಯತ್ನಾಳ್ ಆರೋಪ
ಇದನ್ನೂ ಓದಿ: ಎಲ್ಲ ಖಾತೆಗಳಲ್ಲಿ ವಿಜಯೇಂದ್ರ ಹಸ್ತಕ್ಷೇಪ ಮಾಡುತ್ತಿರೋದಾಗಿ ಆರೋಪಿಸಿದ ಯತ್ನಾಳ್
Published On - 6:23 pm, Sat, 3 April 21