Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಿವರಾತ್ರಿ ದಿನದಂದು ಹುಟ್ಟಿದ ಕರುವಿಗೆ ನಾಮಕರಣ; ಶಾಸ್ತ್ರೋಕ್ತವಾಗಿ ಹೆಸರಿಟ್ಟು ಸಂಭ್ರಮಿಸಿದ ಸಿಲಿಕಾನ್ ಸಿಟಿ ಮಂದಿ

ಹಿಂದೂ ಸಂಪ್ರದಾಯದಂತೆ ಶಾಸ್ತ್ರೋಕ್ತ ವಿಧಿವಿಧಾನಗಳೊಂದಿಗೆ ಆರತಿ ಬೆಳಗಿ, ಕರುವಿನ ಕಿವಿಯಲ್ಲಿ ‘ಸುರಭಿ.. ಸುರಭಿ’ ಎಂದು ನಾಮೋಚ್ಚರಣೆ ಮಾಡಿ ಸಂಭ್ರಮಿಸಿದರು.

ಶಿವರಾತ್ರಿ ದಿನದಂದು ಹುಟ್ಟಿದ ಕರುವಿಗೆ ನಾಮಕರಣ; ಶಾಸ್ತ್ರೋಕ್ತವಾಗಿ ಹೆಸರಿಟ್ಟು ಸಂಭ್ರಮಿಸಿದ ಸಿಲಿಕಾನ್ ಸಿಟಿ ಮಂದಿ
ಹಸುವಿಗೆ ನಾಮಕರಣ ಮಾಡುತ್ತಿರುವ ದೃಶ್ಯ
Follow us
preethi shettigar
| Updated By: Skanda

Updated on: Apr 05, 2021 | 7:13 AM

ಬೆಂಗಳೂರು: ನಗರದ ಹೇಸರಘಟ್ಟ ರಸ್ತೆಯ ಕುಂಬಾರಹಳ್ಳಿಯ ಶ್ರೀ ಸದ್ಗುರು ಗೋಶಾಲೆಯಲ್ಲಿ ಶಿವರಾತ್ರಿ ದಿನ ಹುಟ್ಟಿದ ಕರುವಿಗೆ ನಿನ್ನೆ (ಏಪ್ರಿಲ್​ 4) ನಾಮಕರಣ ಮಾಡಲಾಯಿತು. ರೈತಾಪಿ ವರ್ಗದ ಜನರಿಗೆ ಕೃಷಿ ಭೂಮಿ, ಸಾಕು ಪ್ರಾಣಿಗಳೆಂದರೆ ಒಂದು ಬಾಂಧವ್ಯ. ಅದರಲ್ಲೂ ಹಸು, ಕರುಗಳೆಂದರೆ ಅಚ್ಚುಮೆಚ್ಚು, ಅವುಗಳನ್ನ ಮನೆ ಸದಸ್ಯರಂತೆ ಕಾಣುತ್ತಾ, ಅವುಗಳಿಗೆ ಹೆಸರಿಡಿದು ಕರೆಯುವುದು ಸರ್ವೇ ಸಾಮಾನ್ಯ. ಇದೇ ರೀತಿ ಶಿವರಾತ್ರಿ ದಿನದಂದು ಜನಿಸಿದ ಕರುವಿಗೆ ಹೆಸರಿಟ್ಟು ಶಾಸ್ತ್ರೋಕ್ತವಾಗಿ ನಾಮಕರಣ ಮಾಡಿ ಕುಟುಂಬ ವರ್ಗದ ಜೊತೆಗೆ ಊರಿನವರು ಸಂಭ್ರಮಿಸಿದ್ದಾರೆ.

ಕುಂಬಾರಹಳ್ಳಿಯ ಸದಾನಂದ ಹೆಗ್ಡೆಯವರು ತಮ್ಮ ಗೋಶಾಲೆಗೆ ಗುಜರಾತ್​ನಿಂದ ಗಿರ್ ತಳಿಯ ಕೃಷ್ಣ ,ರುಕ್ಮಿಣಿ ಎಂಬ ಜೋಡಿ ಹಸುಗಳನ್ನು ತಂದಿದ್ದರು. ಅವುಗಳಿಗೆ ಶಿವರಾತ್ರಿ ದಿನದಂದು ಹುಟ್ಟಿದ ಮೂರನೇ ಕರುವಿಗೆ ಇದೀಗ ನಾಮಕರಣ ನೇರವೇರಿದೆ.

ತಾಯಿ ಮಡಿಲಲ್ಲಿ ಹಾಲು ಕುಡಿಯುತ್ತಾ, ಹಣ್ಣು ತಿನ್ನುತ್ತಾ ಸಂಭ್ರಮಿಸುತ್ತಿದ್ದ ಕರುವಿಗೆ ಲಗು ಬಗೆಯಿಂದ ಮುತ್ತೈದೆಯರು ತಿಲಕ ಇಟ್ಟು ಸಿಂಗರಿಸಿದ್ದರು. ಹಿಂದೂ ಸಂಪ್ರದಾಯದಂತೆ ಶಾಸ್ತ್ರೋಕ್ತ ವಿಧಿವಿಧಾನಗಳೊಂದಿಗೆ ಆರತಿ ಬೆಳಗಿ, ಕರುವಿನ ಕಿವಿಯಲ್ಲಿ ‘ಸುರಭಿ..ಸುರಭಿ’ ಎಂದು ನಾಮೋಚ್ಚರಣೆ ಮಾಡಿ ಸಂಭ್ರಮಿಸಿದರು.

calf naming

ಶಿವರಾತ್ರಿ ದಿನದಂದು ಜನಿಸಿದ ಕರುವಿಗೆ ಹೆಸರಿಡುತ್ತಿರುವ ದೃಶ್ಯ

ಒಟ್ಟಾರೆ ಮೂಕ ಪ್ರಾಣಿಯೊಂದಕ್ಕೆ ತಮ್ಮ ಮಕ್ಕಳಂತೆ ನಾಮಕರಣ ಮಾಡಿದ ಪಶುಪಾಲಕರು ಊರಿನ ಜನರದೊಂದಿಗೆ ಸಂಭ್ರಮಿಸಿದರು, ಅಲ್ಲದೆ ನಾಮಕರಣ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರು ಈ ಮುದ್ದಾದ ಕರುವಿಗೆ ಹಾರೈಸುವುದರೊಂದಿಗೆ ಗೋವಿನ ಆಶಿರ್ವಾದ ಪಡೆದು ಹರ್ಷಿತರಾದರು.

(ವರದಿ: ಮೂರ್ತಿ. ಬಿ)

ಇದನ್ನೂ ಓದಿ: ಸೌಂಡ್ ಸರಿಯಾಗಿ ಕೇಳಿಸಲ್ಲ ಎಂದು ಗಲಾಟೆ ಮಾಡಿದ ‘ಯುವರತ್ನ’ ಪ್ರೇಕ್ಷಕರು; ಹಣ ಮರಳಿಸಿದ ಊರ್ವಶಿ ಥಿಯೇಟರ್ ಮಾಲೀಕರು

ಲೈಟ್​ಮನ್​ಗಳಿಗೆ 1 ಕೋಟಿ ಹೆಚ್ಚು ಕೊಟ್ರೂ ಸರಿ.. ಹಸುವಿನ ಕತೆ ಹೇಳಿ ನಿರ್ಮಾಪಕರಿಗೆ ಕಂಡೀಷನ್ ಹಾಕಿದ ಡಿ ಬಾಸ್ ದರ್ಶನ್!

ಕೇವಲ ಕಳ್ಳತನಕ್ಕಾಗಿ ನಡೆದ ಕೊಲೆ ಅಲ್ಲ ಇದು, ಬೇರೆ ಕಾರಣವೂ ಇದೆ: ಡಿಸಿಪಿ
ಕೇವಲ ಕಳ್ಳತನಕ್ಕಾಗಿ ನಡೆದ ಕೊಲೆ ಅಲ್ಲ ಇದು, ಬೇರೆ ಕಾರಣವೂ ಇದೆ: ಡಿಸಿಪಿ
ದರ್ಶನ್ ಜಾಮೀನು ರದ್ದು ಅರ್ಜಿ: ಸುಪ್ರೀಂಕೋರ್ಟ್​ನಲ್ಲಿ ಇಂದು ನಡೆದ ವಾದವೇನು?
ದರ್ಶನ್ ಜಾಮೀನು ರದ್ದು ಅರ್ಜಿ: ಸುಪ್ರೀಂಕೋರ್ಟ್​ನಲ್ಲಿ ಇಂದು ನಡೆದ ವಾದವೇನು?
ದರ್ಶನ್, ಪವಿತ್ರಾ ಗೌಡ ಸಂಬಂಧದ ಬಗ್ಗೆ ಸುಪ್ರೀಂಕೋರ್ಟ್ ಕೇಳಿದ ಪ್ರಶ್ನೆ ಏನು?
ದರ್ಶನ್, ಪವಿತ್ರಾ ಗೌಡ ಸಂಬಂಧದ ಬಗ್ಗೆ ಸುಪ್ರೀಂಕೋರ್ಟ್ ಕೇಳಿದ ಪ್ರಶ್ನೆ ಏನು?
ನಾವು ಇದುವರೆಗೆ ಯಾರನ್ನೂ ಅಪರಾಧಿಗಳು ಅಂತ ಹೇಳಿಲ್ಲ: ರಿಕ್ಕಿ ರೈ ವಕೀಲ
ನಾವು ಇದುವರೆಗೆ ಯಾರನ್ನೂ ಅಪರಾಧಿಗಳು ಅಂತ ಹೇಳಿಲ್ಲ: ರಿಕ್ಕಿ ರೈ ವಕೀಲ
ವಿಜಯಪುರದಲ್ಲಿ ವಿಜಯೇಂದ್ರ ಭಾಷಣ ಮಾಡುವಾಗ ಸ್ವಲ್ಪ ಜನರಿದ್ದರು: ಯತ್ನಾಳ್
ವಿಜಯಪುರದಲ್ಲಿ ವಿಜಯೇಂದ್ರ ಭಾಷಣ ಮಾಡುವಾಗ ಸ್ವಲ್ಪ ಜನರಿದ್ದರು: ಯತ್ನಾಳ್
ಸೌದಿ ಅರೇಬಿಯಾಗೆ ಬಂದಿಳಿದ ಪ್ರಧಾನಿ ಮೋದಿಗೆ 21 ಗನ್ ಸಲ್ಯೂಟ್ ಸ್ವಾಗತ
ಸೌದಿ ಅರೇಬಿಯಾಗೆ ಬಂದಿಳಿದ ಪ್ರಧಾನಿ ಮೋದಿಗೆ 21 ಗನ್ ಸಲ್ಯೂಟ್ ಸ್ವಾಗತ
ಶಿಲಾದಿತ್ಯ ಬೋಸ್ ಇಡೀ ಪ್ರಕರಣವನ್ನೇ ತಿರುಚುವ ಯತ್ನ ಮಾಡಿದ್ದಾನೆ: ಪ್ರತಾಪ್
ಶಿಲಾದಿತ್ಯ ಬೋಸ್ ಇಡೀ ಪ್ರಕರಣವನ್ನೇ ತಿರುಚುವ ಯತ್ನ ಮಾಡಿದ್ದಾನೆ: ಪ್ರತಾಪ್
ಸವದತ್ತಿ: ಫುಲ್​ ಟೈಟ್ ಆಗಿ ರೋಗಿಗೆ ಚಿಕಿತ್ಸೆ ನೀಡಿದ ಸರ್ಕಾರಿ ವೈದ್ಯ
ಸವದತ್ತಿ: ಫುಲ್​ ಟೈಟ್ ಆಗಿ ರೋಗಿಗೆ ಚಿಕಿತ್ಸೆ ನೀಡಿದ ಸರ್ಕಾರಿ ವೈದ್ಯ
ಹಿಂದಿ ಹೇರಿಕೆಯನ್ನು ನಮ್ಮ ಸರ್ಕಾರ ವಿರೋಧಿಸುತ್ತದೆ: ಸಿದ್ದರಾಮಯ್ಯ
ಹಿಂದಿ ಹೇರಿಕೆಯನ್ನು ನಮ್ಮ ಸರ್ಕಾರ ವಿರೋಧಿಸುತ್ತದೆ: ಸಿದ್ದರಾಮಯ್ಯ
ಕಾಂಗ್ರೆಸ್ ಗೆದ್ದ ರಾಜ್ಯಗಳ ಬಗ್ಗೆ ಯಾಕೆ ರಾಹುಲ್ ಮಾತಾಡಲ್ಲ? ವಿಜಯೇಂದ್ರ
ಕಾಂಗ್ರೆಸ್ ಗೆದ್ದ ರಾಜ್ಯಗಳ ಬಗ್ಗೆ ಯಾಕೆ ರಾಹುಲ್ ಮಾತಾಡಲ್ಲ? ವಿಜಯೇಂದ್ರ