AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಬ್ಬಿನ ಗದ್ದೆಯಲ್ಲಿ ಕಲ್ಲಂಗಡಿ ಬೆಳೆದ ಅನ್ನದಾತರು; ಭರ್ಜರಿ ಫಸಲು ಪಡೆದು ಇತರರಿಗೆ ಮಾದರಿ

ಸಾಮಾನ್ಯವಾಗಿ ಒಂದೇ ಬೆಳೆಯಾಗಿ ಕಲ್ಲಂಗಡಿ ಬೆಳೆದರೆ ಎಕರೆಗೆ ನಾಲ್ಕೈದು ಕ್ವಿಂಟಲ್ ಕಲ್ಲಂಗಡಿ ಬರುತ್ತದೆ. ಆದರೆ ಕಬ್ಬಿನ‌ ಗದ್ದೆಯಲ್ಲಿ ಇಬ್ಬರು ರೈತರು ಬೆಳೆದ ಕಲ್ಲಂಗಡಿ ಹೆಚ್ಚು ಫಸಲು ತಂದುಕೊಟ್ಟಿದೆ.

ಕಬ್ಬಿನ ಗದ್ದೆಯಲ್ಲಿ ಕಲ್ಲಂಗಡಿ ಬೆಳೆದ ಅನ್ನದಾತರು; ಭರ್ಜರಿ ಫಸಲು ಪಡೆದು ಇತರರಿಗೆ ಮಾದರಿ
ಕಬ್ಬಿನ ಗದ್ದೆಯಲ್ಲಿ ಕಲ್ಲಂಗಡಿ ಬೆಳೆದ ಅನ್ನದಾತರು
preethi shettigar
| Edited By: |

Updated on: Apr 05, 2021 | 8:19 AM

Share

ಹಾವೇರಿ : ಒಂದೇ ಬೆಳೆ ಬೆಳೆದು ಭರ್ಜರಿ ಬೆಳೆ ತೆಗೆಯುವವರ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಕಡಿಮೆ ಆಗುತ್ತಿದೆ. ಅದರಲ್ಲೂ ಅನೇಕರು ಕೃಷಿ ಕ್ಷೇತ್ರದಿಂದಲೇ ವಿಮುಖರಾಗುತ್ತಿದ್ದಾರೆ. ಇಂತಹ ಸಮಯದಲ್ಲಿ ಕಬ್ಬಿನ ಗದ್ದೆಯಲ್ಲಿ ಮಿಶ್ರ ಬೆಳೆಯಾಗಿ ಕಲ್ಲಂಗಡಿ ಬೆಳೆದು ಹಾವೇರಿ ಜಿಲ್ಲೆಯ ಇಬ್ಬರು ರೈತರು ಭರ್ಜರಿ ಫಸಲು ತೆಗೆದಿದ್ದಾರೆ.

ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಡಂಬರಮತ್ತೂರು ಗ್ರಾಮದ ರೈತ ನಾಗನಗೌಡ ಹಿರೇಗೌಡ್ರ ಮತ್ತು ಚಿಕ್ಕಮರಳಿಹಳ್ಳಿ ಗ್ರಾಮದ ಬಸಣ್ಣ ಕಲಗುಡಿಮಠ ಎಂಬ ಇಬ್ಬರು ರೈತರು ತಮ್ಮ ಕಬ್ಬಿನ ಗದ್ದೆಯಲ್ಲಿ ಮಿಶ್ರ ಬೆಳೆಯಾಗಿ ಐಸ್ ಬಾಕ್ಸ್ ಕರಿ ಕಲ್ಲಂಗಡಿ ಹಾಕಿದ್ದರು. ಕಬ್ಬಿನ ಗದ್ದೆಯಲ್ಲಿ ಹಾಕಿದ್ದ ಕಲ್ಲಂಗಡಿ ನಿರೀಕ್ಷೆಗೂ ಮೀರಿ ಭರಪೂರ ಫಸಲು ಬಂದಿದೆ.

ಬಸಣ್ಣ ಕಲಗುಡಿಮಠ ಮತ್ತು ನಾಗನಗೌಡ ಹಿರೇಗೌಡ್ರ ತಮ್ಮ ಕಬ್ಬಿನ ಗದ್ದೆಯಲ್ಲಿ ತಲಾ ಎರಡು ಎಕರೆಯಲ್ಲಿ ಐಸ್ ಬಾಕ್ಸ್ ಕರಿ ಕಲ್ಲಂಗಡಿ ಹಾಕಿದ್ದರು. ಸಾಮಾನ್ಯವಾಗಿ ಒಂದೇ ಬೆಳೆಯಾಗಿ ಕಲ್ಲಂಗಡಿ ಬೆಳೆದರೆ ಎಕರೆಗೆ ನಾಲ್ಕೈದು ಕ್ವಿಂಟಲ್ ಕಲ್ಲಂಗಡಿ ಬರುತ್ತದೆ. ಆದರೆ ಕಬ್ಬಿನ‌ ಗದ್ದೆಯಲ್ಲಿ ಇಬ್ಬರು ರೈತರು ಬೆಳೆದ ಕಲ್ಲಂಗಡಿ ಹೆಚ್ಚು ಫಸಲು ತಂದುಕೊಟ್ಟಿದೆ. ಎಕರೆಗೆ ಐದರಿಂದ ಆರು ಕ್ವಿಂಟಲ್ ಕಲ್ಲಂಗಡಿ ಫಸಲು ಬಂದಿದ್ದು, ಮೊದಲು ಕ್ವಿಂಟಲ್​ಗೆ ಮೂರ್ನಾಲ್ಕು ಸಾವಿರ ರೂಪಾಯಿ ಬೆಲೆ ಇತ್ತು. ಈಗ ಕ್ವಿಂಟಲ್​ಗೆ ಒಂಬತ್ತು ಸಾವಿರ ರೂಪಾಯಿ ಬೆಲೆ ಬಂದಿದೆ.

ಸಿಹಿಯಾದ ಕಲ್ಲಂಗಡಿ : ದೀರ್ಘಾವಧಿ ಬೆಳೆಯಾದ‌ ಕಬ್ಬಿನ‌ ಬೆಳೆಗೆ ಔಷಧೋಪಚಾರ ಅದು ಇದು ಎಂದು ಸಾಕಷ್ಟು ಖರ್ಚಾಗುತ್ತಿತ್ತು. ಮಿಶ್ರ ಬೆಳೆ ಬೆಳೆಯುವ ಮೂಲಕ ಖರ್ಚು ವೆಚ್ಚವನ್ನು ಸರಿದೂಗಿಸಲು ನಿರ್ಧರಿಸಿದ ಇಬ್ಬರು ರೈತರು ಕಬ್ಬಿನ‌ ಗದ್ದೆಯಲ್ಲಿ ಐಸ್ ಬಾಕ್ಸ್ ಕರಿ ಕಲ್ಲಂಗಡಿ ಬೆಳೆಯುವ ಮನಸ್ಸು ಮಾಡಿದರು. ಅದರಂತೆ ಕಬ್ಬಿನ ಗದ್ದೆಯಲ್ಲಿ ಕರಿ ಕಲ್ಲಂಗಡಿ ಬೆಳೆದರು. ಬೆಳೆ ಬಂಪರ್ ಆಗಿ ಬರುವುದರ ಜೊತೆಗೆ ಉತ್ತಮ ಬೆಲೆಯೂ ಸಿಕ್ಕಿದೆ. ಇದರಿಂದ ಕಬ್ಬು, ಕಲ್ಲಂಗಡಿ ಬೆಳೆಯಲು ಮಾಡಿದ ಖರ್ಚು ವೆಚ್ಚದ ನಿಭಾಯಿಸುವುದರ ಜೊತೆಗೆ ಖರ್ಚಿಗೆ ಕೈಗೆ ಹಣವೂ ಬಂದಿದೆ. ಇದು ಇಬ್ಬರು ರೈತರ ಮೊಗದಲ್ಲಿ ಸಂತಸ ಮೂಡಿಸಿದೆ.

watermelon

ಕರಿ ಕಲ್ಲಂಗಡಿ

ಅಧಿಕ‌ ತಾಪಮಾನದ ಈ ಸಮಯದಲ್ಲಿ ಒಂದೇ ಬೆಳೆ ಬೆಳೆಯಲು ಅದೆಷ್ಟೋ ರೈತರಿಗೆ ಸಾಧ್ಯವಾಗುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲೂ ಮಿಶ್ರ ಬೆಳೆಯಾಗಿ ಕಬ್ಬಿನ ಗದ್ದೆಯಲ್ಲಿ ಕರಿ ಕಲ್ಲಂಗಡಿ ಬೆಳೆದು ಉತ್ತಮ ಫಸಲಿನೊಂದಿಗೆ ಬಂಪರ್ ಆದಾಯ ಪಡೆದಿರುವುದು ವಿಶೇಷ. ಇದೇ ರೀತಿ ರೈತರು ಹಣ್ಣು, ತರಕಾರಿ, ಏಕದಳ ಮತ್ತು ದ್ವಿದಳ ಧಾನ್ಯಗಳನ್ನು ಮಿಶ್ರ ಬೆಳೆಯಾಗಿ ಬೆಳೆಯುವ ಮೂಲಕ ಭೂಮಿಯ ಫಲವತ್ತತೆ ಕಾಯ್ದುಕೊಂಡು ಅಧಿಕ ಇಳುವರಿ ತೆಗೆಯಲು ಮುಂದಾಗಬೇಕು. ಈ ಇಬ್ಬರು ರೈತರು ಮಾಡಿರುವ ಕೆಲಸ ಇತರ ರೈತರಿಗೂ ಮಾದರಿಯಾಗಲಿ ಎಂದು ಕೃಷಿ ಸಲಹೆಗಾರ ಗಂಗಯ್ಯ ಕುಲಕರ್ಣಿ ಹೇಳಿದ್ದಾರೆ.

ಕಳೆದ ಕೆಲವು ವರ್ಷಗಳಿಂದ ಕಬ್ಬು ಬೆಳೆಯುತ್ತಿದ್ದೇವೆ. ಆದರೆ ಈಗ ಕಬ್ಬಿನ ಗದ್ದೆಯಲ್ಲಿ ಮಿಶ್ರ ಬೆಳೆಯಾಗಿ ಐಸ್ ಬಾಕ್ಸ್ ಕರಿ ಕಲ್ಲಂಗಡಿ ಹಾಕಿದ್ದೆವು. ಇದು ಹೊಸ ಪದ್ಧತಿಯಾದರೂ ಉತ್ತಮ ಫಸಲು ಮತ್ತು ಉತ್ತಮ ಬೆಲೆ ದೊರೆತಿದೆ. ಇದೊಂದು ಸಂತಸದ ವಿಚಾರ ಎಂದು ಕಬ್ಬಿನ ಗದ್ದೆಯಲ್ಲಿ ಕಲ್ಲಂಗಡಿ ಬೆಳೆದ ರೈತ ಬಸಣ್ಣ ಕಲಗುಡಿಮಠ ಸಂತಸ ವ್ಯಕ್ತಪಡಿಸಿದ್ದಾರೆ.

(ಪ್ರಭುಗೌಡ.ಎನ್.ಪಾಟೀಲ: 9980914107)

ಇದನ್ನೂ ಓದಿ: 

ಕೋಲಾರದಿಂದ ವಿದೇಶಕ್ಕೆ ಸುವಾಸೆನೆಯ ದ್ರವ್ಯ ರಫ್ತು; ಧವನ ಬೆಳೆದು ಲಾಭ ಗಳಿಸುತ್ತಿರುವ ರೈತರು

ಕಠಿಣ ಕೊರೊನಾ ಮಾರ್ಗಸೂಚಿ ವಿರುದ್ಧ ಆರೋಗ್ಯ ಸಚಿವ ಸುಧಾಕರ್ ಕ್ಷೇತ್ರದಲ್ಲಿ ಹೂಬೆಳೆಗಾರರ ತೀವ್ರ ಆಕ್ರೋಶ

(Farmers who made profits by growing watermelon in a place of sugar cane in Havri)

ವೆಸ್ಟ್ ಇಂಡೀಸ್ ಸ್ಕೋರ್ 114 ರನ್: 118 ರನ್ ಬಾರಿಸಿ ಸೋತ ಸೌತ್ ಆಫ್ರಿಕಾ
ವೆಸ್ಟ್ ಇಂಡೀಸ್ ಸ್ಕೋರ್ 114 ರನ್: 118 ರನ್ ಬಾರಿಸಿ ಸೋತ ಸೌತ್ ಆಫ್ರಿಕಾ
ಚಲನಚಿತ್ರ ವಾಣಿಜ್ಯ ಮಂಡಳಿ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಜಯಮಾಲಾ
ಚಲನಚಿತ್ರ ವಾಣಿಜ್ಯ ಮಂಡಳಿ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಜಯಮಾಲಾ
ಕೇಂದ್ರ ಬಜೆಟ್‌ ಮಂಡನೆ ನೇರಪ್ರಸಾರವನ್ನು ಇಲ್ಲಿ ವೀಕ್ಷಿಸಿ
ಕೇಂದ್ರ ಬಜೆಟ್‌ ಮಂಡನೆ ನೇರಪ್ರಸಾರವನ್ನು ಇಲ್ಲಿ ವೀಕ್ಷಿಸಿ
ಒಂದೇ ಪಂದ್ಯದಲ್ಲಿ ಬರೋಬ್ಬರಿ 11 ವಿಕೆಟ್ ಕಬಳಿಸಿದ ಶಹಬಾಝ್ ಅಹ್ಮದ್
ಒಂದೇ ಪಂದ್ಯದಲ್ಲಿ ಬರೋಬ್ಬರಿ 11 ವಿಕೆಟ್ ಕಬಳಿಸಿದ ಶಹಬಾಝ್ ಅಹ್ಮದ್
ಮಾಘ ಹುಣ್ಣಿಮೆ: ಕಾವೇರಿ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನಕ್ಕೆ ಭಕ್ತಸಾಗರ
ಮಾಘ ಹುಣ್ಣಿಮೆ: ಕಾವೇರಿ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನಕ್ಕೆ ಭಕ್ತಸಾಗರ
ನಿರ್ಮಲಾ ಸೀತಾರಾಮನ್​​​​​ಗೆ ಚಾರ್ಕೋಲ್ ಸ್ಕೆಚ್ ಮೂಲಕ ಸ್ವಾಗತ
ನಿರ್ಮಲಾ ಸೀತಾರಾಮನ್​​​​​ಗೆ ಚಾರ್ಕೋಲ್ ಸ್ಕೆಚ್ ಮೂಲಕ ಸ್ವಾಗತ
5 ವಿಕೆಟ್​ ಕಬಳಿಸಿ ಅತ್ಯಂತ ಹೀನಾಯ ದಾಖಲೆ ಬರೆದ ಅರ್ಷದೀಪ್ ಸಿಂಗ್
5 ವಿಕೆಟ್​ ಕಬಳಿಸಿ ಅತ್ಯಂತ ಹೀನಾಯ ದಾಖಲೆ ಬರೆದ ಅರ್ಷದೀಪ್ ಸಿಂಗ್
‘ಕಲ್ಟ್’ ಸಿನಿಮಾ ನೋಡಿ ಕಣ್ಣೀರು ಹಾಕಿದ ಸಿಎಂ ಸಿದ್ದರಾಮಯ್ಯ
‘ಕಲ್ಟ್’ ಸಿನಿಮಾ ನೋಡಿ ಕಣ್ಣೀರು ಹಾಕಿದ ಸಿಎಂ ಸಿದ್ದರಾಮಯ್ಯ
ಇದು ಯಾವ ಸೀಮೆಯ ಬೌಲಿಂಗ್: ಪಾಕ್ ಸ್ಪಿನ್ನರ್ ಶೈಲಿಗೆ ಗ್ರೀನ್​ ಆಕ್ರೋಶ
ಇದು ಯಾವ ಸೀಮೆಯ ಬೌಲಿಂಗ್: ಪಾಕ್ ಸ್ಪಿನ್ನರ್ ಶೈಲಿಗೆ ಗ್ರೀನ್​ ಆಕ್ರೋಶ
ಬಲೂಚ್ ಬಂಡುಕೋರರು ನಡೆಸಿದ ದಾಳಿಯಲ್ಲಿ 80ಕ್ಕೂ ಹೆಚ್ಚು ಪಾಕ್ ಸೈನಿಕರು ಸಾವು
ಬಲೂಚ್ ಬಂಡುಕೋರರು ನಡೆಸಿದ ದಾಳಿಯಲ್ಲಿ 80ಕ್ಕೂ ಹೆಚ್ಚು ಪಾಕ್ ಸೈನಿಕರು ಸಾವು