ಕೋಲಾರದಿಂದ ವಿದೇಶಕ್ಕೆ ಸುವಾಸೆನೆಯ ದ್ರವ್ಯ ರಫ್ತು; ಧವನ ಬೆಳೆದು ಲಾಭ ಗಳಿಸುತ್ತಿರುವ ರೈತರು

ರೈತರು ಕೇವಲ ಮೂರು ತಿಂಗಳ ಬೆಳೆಯಿಂದ ಒಂದು ಎಕರೆಗೆ ಒಂದೂವರೆ ಲಕ್ಷ ರೂಪಾಯಿ ಹಣ ಗಳಿಸಬಹುದಾಗಿದೆ. ಮುಳಬಾಗಲು ತಾಲೂಕಿನಲ್ಲಿ ಈಚೆಗೆ ರೈತರು ಹೆಚ್ಚಾಗಿ ಧವನ ಬೆಳೆಯುತ್ತಿದ್ದಾರೆ.

ಕೋಲಾರದಿಂದ ವಿದೇಶಕ್ಕೆ ಸುವಾಸೆನೆಯ ದ್ರವ್ಯ ರಫ್ತು; ಧವನ ಬೆಳೆದು ಲಾಭ ಗಳಿಸುತ್ತಿರುವ ರೈತರು
ಧವನ ತೈಲ ತಯಾರಿಕಾ ಘಟಕದ ಚಿತ್ರಣ
Follow us
preethi shettigar
| Updated By: ganapathi bhat

Updated on: Apr 04, 2021 | 10:32 PM

ಕೋಲಾರ: ಬರಿ ದೇವರಿಗಷ್ಟೆ ಸೀಮಿತಿವಾಗಿದ್ದ ಬೇಸಾಯ, ಇಂದು ಸುಗಂಧ ದ್ರವ್ಯವಾಗಿ ವಿಶ್ವದ ನಾನಾ ದೇಶಗಳಿಗೆ ರಫ್ತಾಗುತ್ತಿದೆ. ಕೋಲಾರ ಜಿಲ್ಲೆ ಮುಳಬಾಗಲು ತಾಲ್ಲೂಕಿನ ಕೋಲಾರ-ತಿರುಪತಿ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತೆ ಸುಮಾರು ಹತ್ತಾರು ಧವನದ ಎಣ್ಣೆ ತೆಗೆಯುವ ಯೂನಿಟ್​ಗಳು ಇದೆ. ಇದರ ಸುತ್ತ ಸುಮಾರು 5-6 ಕಿಲೋಮೀಟರ್ ವ್ಯಾಪ್ತಿಯಲ್ಲಿ ಸುಗಂಧ ದ್ರವ್ಯ ತಯಾರಿ ಮಾಡುವ ಘಟಕಗಳು ಇರುವುದರಿಂದ ಇಡೀ ಪ್ರದೇಶ ಬೇಸಿಗೆ ಬಂದರೆ ಘಮಘಮಿಸುತ್ತಿರುತ್ತದೆ.

ನೀರಿಲ್ಲದ ಬಯಲು ಸೀಮೆ ಜಿಲ್ಲೆಯಲ್ಲಿ ಕೋಲಾರದ ರೈತರು ಟೊಮ್ಯಾಟೋ, ಸೇರಿದಂತೆ ಹಲವಾರು ತರಕಾರಿ ಬೆಳೆಗಳನ್ನು ಬೆಳೆದು ಸರಿಯಾದ ಬೆಲೆ ಸಿಗದೆ ಕಂಗಾಲಾಗುತ್ತಿದ್ದರು. ಇಂತಹ ಸಂದರ್ಭದಲ್ಲಿ ವರ್ಷದಲ್ಲಿ ಕೇವಲ ಮೂರು ತಿಂಗಳಲ್ಲಿ ಬೆಳೆಯಲಾಗುವ ಬೆಳೆ ಧವನದಿಂದ ನಿಗದಿತ ಬೆಲೆ ಬಂದಿದ್ದು, ರೈತರಿಗೂ ಕೂಡ ಲಾಭ ದೊರೆತಿದೆ. ಹಾಗಾಗಿ ಕಳೆದ ಹಲವಾರು ವರ್ಷಗಳಿಂದ ಇಲ್ಲಿನ ಹಲವಾರು ಜನ ರೈತರು ತಮ್ಮ ಜಮೀನಿನಲ್ಲಿ ಧವನವನ್ನ ಬೆಳೆದು. ಸ್ಥಳೀಯವಾಗಿ ಧವನ ತಯಾರಿಕಾ ಘಟಕಗಳಿಗೆ ಮಾರಾಟ ಮಾಡುತ್ತಾರೆ.

ಒಂದು ಟನ್​ ಧವನಕ್ಕೆ 12-14 ಸಾವಿರ ರೂಪಾಯಿ ಸಿಗುತ್ತದೆ. ಅಷ್ಟೇ ಅಲ್ಲದೆ ವರ್ಷದಲ್ಲಿ ಕೇವಲ ಮೂರ್ನಾಲ್ಕು ತಿಂಗಳು ಕಾರ್ಯನಿರ್ವಹಿಸುವ ಧವನ ತೈಲ ತಯಾರಿಕಾ ಘಟಕಗಳು ಕೋಟ್ಯಾಂತರ ರೂಪಾಯಿ ವಹಿವಾಟು ನಡೆಸುತ್ತವೆ. ಇದರಿಂದ ಇಲ್ಲಿನ ಧವನದ ತೈಲ ತಯಾರಿಕಾ ಘಟಕಗಳಿಗೂ ಧವನ ಬೆಳೆಯುವ ರೈತರಿಗೂ ಲಾಭ ಸಿಗುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

perfume

ಧವನದ ಎಣ್ಣೆ ತೆಗೆಯುವ ದೃಶ್ಯ

ಇನ್ನು ತೈಲ ತಯಾರಿ ಮಾಡುವ ಘಟಕಗಳ ಮಾಲೀಕರು ಸ್ಥಳೀಯವಾಗಿ ಹತ್ತಾರು ರೈತರಿಗೆ ಧವನದ ಬೀಜ, ಗೊಬ್ಬರ, ಔಷಧಿಗಳನ್ನ ನೀಡಿ ಧವನ ಬೆಳೆಯಲು ಪ್ರೋತ್ಸಾಹ ನೀಡುತ್ತಾರೆ. ನಂತರ ರೈತರು ಬೆಳೆದ ಧವನವನ್ನು ಒಂದು ಟನ್​ಗೆ 12-14 ಸಾವಿರ ನೀಡಿ ಖರೀದಿ ಮಾಡುತ್ತಾರೆ. ಅದನ್ನು ತಂದು ತೈಲ ತಯಾರಿಕಾ ಘಟಕಗಳ ಬಳಿ ಚೆನ್ನಾಗಿ ಒಣಗಿಸಿ, ನಂತರ ಧವನವನ್ನು ದೊಡ್ಡ ದೊಡ್ಡ ಬಾಯ್ಲರ್​ಗಳಿಗೆ ತುಂಬಿ ಅದನ್ನು ವ್ಯಾಕ್ಯೂಮ್​ನಿಂದ ಬೇಯಿಸಲಾಗುತ್ತದೆ, ಇದಾದ ನಂತರ ಒಂದು ಟನ್​ ಧವನಕ್ಕೆ 700ರಿಂದ800 ಗ್ರಾಂ ತೈಲ ಉತ್ಪಾದನೆಯಾಗುತ್ತದೆ.

ಇದನ್ನು ಸುಗಂಧ ತಯಾರಿಕಾ ಕಂಪನಿಗಳು ಖರೀದಿ ಮಾಡಿ ವಿದೇಶಗಳಿಗೆ ರಪ್ತು ಮಾಡುತ್ತಾರೆ. ರೈತರು ಕೇವಲ ಮೂರು ತಿಂಗಳ ಬೆಳೆಯಿಂದ ಒಂದು ಎಕರೆಗೆ ಒಂದೂವರೆ ಲಕ್ಷ ರೂಪಾಯಿ ಹಣ ಗಳಿಸಬಹುದಾಗಿದೆ. ಮುಳಬಾಗಲು ತಾಲೂಕಿನಲ್ಲಿ ಈಚೆಗೆ ರೈತರು ಹೆಚ್ಚಾಗಿ ಧವನ ಬೆಳೆಯುತ್ತಿದ್ದಾರೆ. ಜಿಲ್ಲೆಯ ರೈತರು ಬೆಳೆಯುವ ಮಾವು, ಟೊಮೇಟೋ, ಮತ್ತಿತರರ ಹಣ್ಣುಗಳು ವಿದೇಶಗಳಿಗೆ ರಪ್ತು ಮಾಡಲಾಗುತ್ತಿತ್ತು.

perfume

ದೊಡ್ಡ ದೊಡ್ಡ ಬಾಯ್ಲರ್​ಗಳಿಗೆ ತುಂಬಿ ಅದನ್ನು ವ್ಯಾಕ್ಯೂಮ್​ನಿಂದ ಬೇಯಿಸಲಾಗುತ್ತದೆ

ಈಗ ಧವನದ ಸುಗಂಧ ದ್ರವ್ಯವನ್ನು ಅಮೇರಿಕಾ, ಸಿಂಗಾಪುರ, ಮಲೇಶಿಯಾ, ಚೈನಾ, ಸೇರಿದಂತೆ ಅರಬ್ ದೇಶಗಳಿಗೆ ರಪ್ತು ಮಾಡಲಾಗುತ್ತದೆ. ಇಲ್ಲಿ ತಯಾರು ಮಾಡುವ ಧವನದ ತೈಲವನ್ನು ವ್ಯಾಪಾರಸ್ಥರು ಇಲ್ಲಿಗೆ ಬಂದು ಖರೀದಿ ಮಾಡಿ ಹೋಗುತ್ತಾರೆ, ವಿಶೇಷತೆ ಎಂದ್ರೆ ಈ ತೈಲದಿಂದ ಪರ್ಫ್ಯೂಮ್ ಮಾತ್ರವಲ್ಲ ದುಬಾರಿ ನಶೆ ಏರುವ ಡ್ರಿಂಕ್ಸ್, ವಿವಿಧ ಬಗೆಯ ಔಷಧಗಳಿಗೆ ಹಾಗೂ ಕೆಲವೊಂದು ಆಹಾರ ಪದಾರ್ಥಗಳಿಗೂ ಈ ಧವನದ ತೈಲವನ್ನು ಬಳಸಲಾಗುತ್ತದೆ.

ಒಟ್ಟಾರೆ ರೈತರು ಅವೈಜ್ಞಾನಿಕ ಬೇಸಾಯದಿಂದ ಬೆಳೆಗಳನ್ನ ಬೆಳೆದು ಸಂಕಷ್ಟಕ್ಕೆ ಸಿಲುಕುವ ಬದಲು, ದೇಶ ವಿದೇಶಗಳಲ್ಲಿ ಬೇಡಿಕೆಯಿರುವ ಇಂತಹ ಲಾಭದಾಯಕ ಬೆಳೆಯನ್ನ ಬೆಳೆದ್ದಿದ್ದೇ ಆದಲ್ಲಿ ರೈತರು ಸಂಕಷ್ಟಕ್ಕೆ ಸಿಲುಕಿವ ಪರಿಸ್ಥಿತಿ ಬರೋದಿಲ್ಲ ಜೊತೆಗೆ ವಿಶ್ವ ಮಟ್ಟದಲ್ಲಿ ದೇಶಕ್ಕೂ ಪ್ರತಿಷ್ಠೆಯ ವಿಚಾರ ಎನ್ನುವುದರಲ್ಲಿ ಎರಡು ಮಾತಿಲ್ಲ.

(ವರದಿ: ರಾಜೇಂದ್ರ ಸಿಂಹ-9980914108)

ಇದನ್ನೂ ಓದಿ: ಪ್ರಧಾನಿ ಮೋದಿ ಬಳಿ ಸೆಲೆಬ್ರಿಟಿಗಳ ಬರ್ತ್ ​ಡೇ ವಿಶ್ ಮಾಡಲು ಸಮಯವಿದೆ, ರೈತರಿಗಾಗಿ ಸಮಯವಿಲ್ಲ: ಸತೀಶ್​ ಜಾರಕಿಹೊಳಿ

(Farmers from Kolar are making profits by growing davana)

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ