ಹಾಸನ: ಕಾನ್ಸ್‌ಟೇಬಲ್‌ಗೆ ಕೊರೊನಾ ದೃಢಪಟ್ಟ ಹಿನ್ನೆಲೆಯಲ್ಲಿ ಹಾಸನದಲ್ಲಿ 100ಕ್ಕೂ ಹೆಚ್ಚು ಪೊಲೀಸರಿಗೆ ಕ್ವಾರಂಟೈನ್ ಮಾಡಲಾಗಿದೆ. ಸೋಂಕಿತ ಪೇದೆಯ ಜೊತೆ ಸಂಪರ್ಕ ಹೊಂದಿದ್ದ ಸಿವಿಲ್, ಕೆಎಸ್‌ಆರ್‌ಪಿ ಪೊಲೀಸರು ಸೇರಿ 100 ಪೇದೆಗಳಿಗೆ ಕ್ವಾರಂಟೈನ್ ಮಾಡಲಾಗಿದೆ. ಹಾಗೂ ಗಾಡೇನಹಳ್ಳಿಯಲ್ಲಿರುವ ಪೊಲೀಸ್ ತರಬೇತಿ ಕೇಂದ್ರವೂ ಸೀಲ್‌ಡೌನ್ ಮಾಡುವಂತೆ ಸೂಚಿಸಲಾಗಿದೆ.
ಪೇದೆ ಬೆಂಗಳೂರಿನಲ್ಲಿ ಡ್ಯೂಟಿ ಮುಗಿಸಿ ಹಾಸನಕ್ಕೆ ಬಂದಿದ್ರು. ಮೂರು ದಿನ ಹಾಸನದಲ್ಲಿದ್ರು. ಈ ನಡುವೆ 60ಕ್ಕೂ ಹೆಚ್ಚು ಜನರ ಜೊತೆ ಪ್ರಾಥಮಿಕ ಸಂಪರ್ಕ ಹೊಂದಿದ್ದಾರೆ. ಪೇದೆ ಟ್ರಾವೆಲ್ ಹಿಸ್ಟರಿ ತೀವ್ರ ಆತಂಕ ಮೂಡಿಸಿದೆ. ಪೊಲೀಸರು ಮೂರು ದಿನದಿಂದ ಪೇದೆ ಓಡಾಡಿರೊ ಕಂಪ್ಲೀಟ್ ಹಿಸ್ಟರಿ ಸಂಗ್ರಹ ಮಾಡುತ್ತಿದ್ದಾರೆ.