ಕರ್ತವ್ಯ ಮುಗಿಸಿ ಮೈಸೂರಿಗೆ ವಾಪಸಾಗಿದ್ದ KSRPಯ 13 ಸಿಬ್ಬಂದಿಗೆ ಕೊರೊನಾ!
ಮೈಸೂರು: ಕೊರೊನಾ ವಾರಿಯರ್ಸ್‌ಗೂ ಮಹಾಮಾರಿ ಕೊವಿಡ್ ವಕ್ಕರಿಸಿದೆ. ಬೆಂಗಳೂರಿಗೆ ಕರ್ತವ್ಯಕ್ಕೆ ತೆರಳಿ ಮೈಸೂರಿಗೆ ವಾಪಸಾಗಿದ್ದ KSRPಯ 13 ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿದೆ. KSRP ಸಿಬ್ಬಂದಿ ಮೈಸೂರಿನ ಪೊಲೀಸ್ ವಸತಿಗೃಹದಲ್ಲಿ ವಾಸವಾಗಿದ್ದರು. ವಿಚಾರ ತಿಳಿದ ಪೊಲೀಸರು ವಸತಿಗೃಹ ಬಡಾವಣೆಗೆ ತೆರಳಿ ಮಾಹಿತಿ ಸಂಗ್ರಹ ಮಾಡಿದ್ದಾರೆ. ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಎಲ್ಲಾ ಸಿಬ್ಬಂದಿಗೂ ಧೈರ್ಯ ಹೇಳಿದ್ದಾರೆ. ಸದ್ಯ ಎಲ್ಲಾ 13 ಸಿಬ್ಬಂದಿ ಕೊವಿಡ್ 19 ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೈಸೂರು: ಕೊರೊನಾ ವಾರಿಯರ್ಸ್‌ಗೂ ಮಹಾಮಾರಿ ಕೊವಿಡ್ ವಕ್ಕರಿಸಿದೆ. ಬೆಂಗಳೂರಿಗೆ ಕರ್ತವ್ಯಕ್ಕೆ ತೆರಳಿ ಮೈಸೂರಿಗೆ ವಾಪಸಾಗಿದ್ದ KSRPಯ 13 ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿದೆ. KSRP ಸಿಬ್ಬಂದಿ ಮೈಸೂರಿನ ಪೊಲೀಸ್ ವಸತಿಗೃಹದಲ್ಲಿ ವಾಸವಾಗಿದ್ದರು.
ವಿಚಾರ ತಿಳಿದ ಪೊಲೀಸರು ವಸತಿಗೃಹ ಬಡಾವಣೆಗೆ ತೆರಳಿ ಮಾಹಿತಿ ಸಂಗ್ರಹ ಮಾಡಿದ್ದಾರೆ. ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಎಲ್ಲಾ ಸಿಬ್ಬಂದಿಗೂ ಧೈರ್ಯ ಹೇಳಿದ್ದಾರೆ. ಸದ್ಯ ಎಲ್ಲಾ 13 ಸಿಬ್ಬಂದಿ ಕೊವಿಡ್ 19 ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.