ಬೈಕ್ ಓಡಿಸಿದ್ದಕ್ಕೆ ಪೊಲೀಸರು ಥಳಿಸಿದ ಆರೋಪ, ಬಾಲಕ ಆತ್ಮಹತ್ಯೆ

|

Updated on: Jun 30, 2020 | 12:18 PM

ಮೈಸೂರು: ಅಪ್ರಾಪ್ತ ಬಾಲಕ ಬೈಕ್ ಚಾಲನೆ ಮಾಡಿದ ಹಿನ್ನೆಲೆಯಲ್ಲಿ ಬೈಕ್​ ವಶಕ್ಕೆ ಪಡೆದು ಬಾಲಕನನ್ನು ಪೊಲೀಸರು ಥಳಿಸಿದ್ದಾರೆ ಎನ್ನಲಾಗಿದೆ. ಇದರಿಂದ ಮನನೊಂದು ಸುಣ್ಣದ ಕೇರಿಯ 17 ವರ್ಷದ ಬಾಲಕ ಆತ್ಮಹತ್ಯೆಗೆ ಶರಣಾಗಿದ್ದಾನೆ. ಬೈಕ್ ತಪಾಸಣೆ ವೇಳೆ ಸ್ಕೂಟರ್ ಹಿಂಬದಿಯಲ್ಲಿ ನಂಬರ್ ಪ್ಲೇಟ್ ಇರಲಿಲ್ಲ. KA 09 Ec 4215 ಸಂಖ್ಯೆಯ ಬಜಾಜ್ ಡಿಸ್ಕವರ್ ಸ್ಕೂಟರ್​ನ ನಂಬರ್ ಪ್ಲೇಟ್ ಇರಲಿಲ್ಲ. ಇದನ್ನ ಪ್ರಶ್ನೆ ಮಾಡಿ ಬೈಕ್​ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಈ ವೇಳೆ ಬಾಲಕನನ್ನು ಥಳಿಸಿ, ಕೆ.ಆರ್.ಠಾಣೆ […]

ಬೈಕ್ ಓಡಿಸಿದ್ದಕ್ಕೆ ಪೊಲೀಸರು ಥಳಿಸಿದ ಆರೋಪ, ಬಾಲಕ ಆತ್ಮಹತ್ಯೆ
Follow us on

ಮೈಸೂರು: ಅಪ್ರಾಪ್ತ ಬಾಲಕ ಬೈಕ್ ಚಾಲನೆ ಮಾಡಿದ ಹಿನ್ನೆಲೆಯಲ್ಲಿ ಬೈಕ್​ ವಶಕ್ಕೆ ಪಡೆದು ಬಾಲಕನನ್ನು ಪೊಲೀಸರು ಥಳಿಸಿದ್ದಾರೆ ಎನ್ನಲಾಗಿದೆ. ಇದರಿಂದ ಮನನೊಂದು ಸುಣ್ಣದ ಕೇರಿಯ 17 ವರ್ಷದ ಬಾಲಕ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಬೈಕ್ ತಪಾಸಣೆ ವೇಳೆ ಸ್ಕೂಟರ್ ಹಿಂಬದಿಯಲ್ಲಿ ನಂಬರ್ ಪ್ಲೇಟ್ ಇರಲಿಲ್ಲ. KA 09 Ec 4215 ಸಂಖ್ಯೆಯ ಬಜಾಜ್ ಡಿಸ್ಕವರ್ ಸ್ಕೂಟರ್​ನ ನಂಬರ್ ಪ್ಲೇಟ್ ಇರಲಿಲ್ಲ. ಇದನ್ನ ಪ್ರಶ್ನೆ ಮಾಡಿ ಬೈಕ್​ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದರು.

ಈ ವೇಳೆ ಬಾಲಕನನ್ನು ಥಳಿಸಿ, ಕೆ.ಆರ್.ಠಾಣೆ ಪೊಲೀಸರು ಕಿರುಕುಳ ನೀಡಿದ್ದಾರೆ. ಅವಮಾನ ಸಹಿಸಲಾಗದೆ ಮನೆಗೆ ಬಂದು ಸ್ನಾನದ ಕೊಠಡಿಯಲ್ಲಿ ನೇಣಿಗೆ ಶರಣಾಗಿದ್ದಾನೆ ಎಂದು ಬಾಲಕನ ಪೋಷಕರು ಆರೋಪಿಸಿದ್ದಾರೆ.