ಬೆಂಗಳೂರು: ತಪ್ಪಿಲ್ಲ.. ಕರುನಾಡಿಗೆ ಕಂಟಕ ತಪ್ಪಿಲ್ಲ. ಹೆಜ್ಜೆ ಹೆಜ್ಜೆಗೂ ರಾಜ್ಯ ಡೆಡ್ಲಿ ಡೇಂಜರ್ ಆಗುತ್ತಿದೆ. ಗಲ್ಲಿ ಗಲ್ಲಿಗೂ ಗಂಡಾಂತರ ಕಾದಿದೆ. ಯಾಕಂದ್ರೆ ನಿತ್ಯ ಬರ್ತಿರೋ ಕೇಸ್ಗಳೇ ರಾಜ್ಯದ ಭಯಾನಕ ಭವಿಷ್ಯ ನುಡಿಯುತ್ತಿವೆ. ನಿನ್ನೆ ಕೂಡ ಕಿಲ್ಲರ್ ವೈರಸ್ 210 ಜನರ ಮೈ ಹೊಕ್ಕಿದ್ದು, ನಿನ್ನೆ ಒಂದೇ ದಿನ 12 ಜನರ ಜೀವ ತೆಗೆದಿದೆ.
ರಾಜ್ಯದಲ್ಲಿ ನಿನ್ನೆ 210 ಜನರಿಗೆ ಕುತ್ತು. 12 ಮಂದಿ ಬಲಿ!
ನಿಜ.. ರಾಜ್ಯಾದ್ಯಂತ ರಣಕೇಕೆ ಹಾಕುತ್ತಿರೋ ಡೆಡ್ಲಿ ವೈರಸ್, ಬೆಂಗಳೂರಿನಲ್ಲಿ ಭಯಾನಕ ಸಾವಿನ ಕೇಕೆ ಹಾಕಿದೆ. ನಿನ್ನೆ ಒಂದೇ ದಿನ 8 ಜನ ಜೀವ ಹಿಂಡಿದ್ದಲ್ಲದೇ 17 ಜನರ ಜೀವಕ್ಕೂ ಆಪತ್ತು ತಂದಿದೆ. ಆದ್ರೆ, ನಿನ್ನೆ ಉಸಿರು ಚೆಲ್ಲಿರೋ ಆ 8 ಜನರ ಟ್ರಾವೆಲ್ ಹಿಸ್ಟರಿಯೇ ಬೆಚ್ಚಿ ಬೀಳಿಸುವಂತಿದೆ..
ಬೆಂಗಳೂರಲ್ಲಿ 8 ಜನ ಬಲಿ
ಬಿಹಾರ್ನಿಂದ ಬೆಂಗಳೂರಿಗೆ ಬಂದಿದ್ದ 57 ವರ್ಷದ ವ್ಯಕ್ತಿ ಕೊರೊನಾಗೆ ಬಲಿಯಾಗಿದ್ದಾರೆ. ಅಲ್ದೆ, ಬೆಂಗಳೂರಿನ 58 ವರ್ಷದ ವ್ಯಕ್ತಿ ಕೊರೊನಾದಿಂದ ಮೃತಪಟ್ಟಿದ್ದು, ಬಳ್ಳಾರಿಯಿಂದ ಬೆಂಗಳೂರಿಗೆ ವಾಪಸಾದ ಹಿನ್ನೆಲೆ ಇದೆ. ಅಲ್ದೆ, 39 ವರ್ಷದ ವ್ಯಕ್ತಿ ILI ಸಮಸ್ಯೆಯಿಂದ ಬಳಲುತ್ತಿದ್ರು. ಕೊವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿತ್ತಾದ್ರೂ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಇದ್ರ ಜೊತೆಗೆ ಬೆಂಗಳೂರಿನ 40 ವರ್ಷದ ಮಹಿಳೆಯೂ ಕೊರೊನಾಗೆ ಬಲಿಯಾಗಿದ್ದಾರೆ.
ಮತ್ತೊಂದೆಡೆ, ಕಿಲ್ಲರ್ ವೈರಸ್ 68 ವರ್ಷದ ವೃದ್ಧನ ಜೀವ ತೆಗೆದಿದೆ. ಇದಿಷ್ಟೇ ಅಲ್ದೆ, 74 ವರ್ಷದ ವೃದ್ಧೆಯೂ ಕೊರೊನಾ ಕ್ರೌರ್ಯಕ್ಕೆ ಜೀವ ಬಿಟ್ಟಿದ್ದಾರೆ. ಇನ್ನೊಂದೆಡೆ, ತೀವ್ರ ಜ್ವರದಿಂದ ಬಳಲುತ್ತಿದ್ದ 65 ವರ್ಷದ ವೃದ್ಧೆಯ ಜೀವವನ್ನ ಕೊರೊನಾ ಹೊತ್ತೊಯ್ದಿದೆ. ಬೆಂಗಳೂರಿನಲ್ಲಿ ಕೊರೊನಾಗೆ 31 ವರ್ಷದ ವ್ಯಕ್ತಿಯನ್ನೂ ಬಲಿಪಡೆದಿದೆ. ಇವರು ಜೂನ್ 13ರಂದು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ರು. ಆದ್ರೆ, ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ.
ನಿನ್ನೆ ಎಂಟು ಜನರನ್ನು ಬಲಿ ಪಡೆಯೋ ಮೂಲಕ ಕೊರೊನಾ, ಬೆಂಗಳೂರಿನಲ್ಲಿ ಸಾವಿನ ಸಂಖ್ಯೆಯನ್ನ 51ಕ್ಕೇ ಹೆಚ್ಚಿಸಿಕೊಂಡಿದೆ. ಈ ಸಾವಿನ ಸಂಖ್ಯೆ ಬೆಂಗಳೂರಿಗೆ ಹೆಜ್ಜೆ ಹೆಜ್ಜೆಗೂ ಕುತ್ತು ತರುತ್ತಿದ್ರೆ, ನಿನ್ನೆ ಪತ್ತೆಯಾದ ಸೋಂಕಿತರ ಟ್ರಾವೆಲ್ ಹಿಸ್ಟರಿಯಿಂದ ಗಂಡಾಂತರ ಎದುರಾಗ್ತಿದೆ.
ಕೊರೊನಾ ವಾರಿಯರ್ಸ್ಗೆ ಕಾಡುತ್ತಿದೆ ಮಾರಿ!
ಸಂಕಷ್ಟದಲ್ಲಿ ಕಿಲ್ಲರ್ ವಿರುದ್ಧ ಹೋರಾಡ್ತಿರೋ ಸೇನಾನಿಗಳಿಗೆ ಕಿಲ್ಲರ್ ಅಂಟಿಕೊಳ್ತಿದೆ. ಪೊಲೀಸರು, ಆರೋಗ್ಯ ಅಧಿಕಾರಿಗಳನ್ನೇ ಟಾರ್ಗೆಟ್ ಮಾಡಿರೋ ಕೊರೊನಾ, ಬೆಂಬಿಡದೇ ಕಾಡುತ್ತಿದೆ.
ವಾರಿಯರ್ಸ್ಗೆ ವೈರಸ್
ಬೆಂಗಳೂರಿನಲ್ಲಿ ಮತ್ತೆ 7 ಪೊಲೀಸರಿಗೆ ಕಿಲ್ಲರ್ ವೈರಸ್ ಅಂಟಿದ್ದು, ಸೋಂಕಿತ ಟ್ರಾಫಿಕ್ ASI, ಕಲಾಸಿಪಾಳ್ಯ ಠಾಣೆ ಸಿಬ್ಬಂದಿ ಸಂಪರ್ಕ ಹಿನ್ನೆಲೆಯಲ್ಲಿ 7 ಪೊಲೀಸರಿಗೆ ಕೊರೊನಾ ಕುತ್ತು ತಂದಿದೆ. ಇದ್ರಿಂದ ವಿ.ವಿ.ಪುರಂ, ಕಲಾಸಿಪಾಳ್ಯ ಠಾಣೆ ಸಿಬ್ಬಂದಿಗೆ ಎದೆಬಡಿತ ಹೆಚ್ಚಾಗಿದೆ. ಮತ್ತೊಂದೆಡೆ, ಆರೋಗ್ಯ ಸಿಬ್ಬಂದಿಗೂ ಕೊರೊನಾ ಕುತ್ತು ತಂದಿದೆ.
ಜೀಪ್ ಚಾಲಕನಿಗೆ ಸೋಂಕು
ಮತ್ತೊಂದೆಡೆ, ಬೆಂಗಳೂರಿನ ಕೋಣಕುಂಟೆಯ ಸರ್ಕಾರಿ ಆಸ್ಪತ್ರೆಯ ಜೀಪ್ ಚಾಲಕನಿಗೂ ವೈರಸ್ ವಕ್ಕರಿಸಿದೆ. ಈ ಚಾಲಕ ಆರೋಗ್ಯಾಧಿಕಾರಿಗಳನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ. ಇದೀಗ ಸೋಂಕು ತಗುಲಿದ್ರಿಂದ ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿಗೆಲ್ಲಾ ಡವಡವ ಶುರುವಾಗಿದೆ. ಇದಿಷ್ಟೇ ಅಲ್ದೆ, ಗರ್ಭಿಣಿಯರನ್ನೂ ಬಿಡದೇ ಮಹಾಮಾರಿ ಕಾಡುತ್ತಿದೆ.
ಗರ್ಭಿಣಿಯರಿಗೂ ಕಂಟಕ
ನಾಲ್ವರು ಗರ್ಭಿಣಿಯರಿಗೆ ಕುತ್ತು ತಂದಿದೆ. ಚಾಮರಾಜಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಾಲ್ವರಿಗೂ ಪರೀಕ್ಷೆ ಮಾಡಲಾಗಿತ್ತು. ಆದ್ರೀಗ ವರದಿ ಪಾಸಿಟಿವ್ ಬಂದಿದೆ ಎನ್ನಲಾಗಿದ್ದು, ಬೆಚ್ಚಿ ಬೀಳಿಸುತ್ತಿದೆ. ಇದರಿಂದಾಗೇ ಬೆಂಗಳೂರು ಹೆಜ್ಜೆ ಹೆಜ್ಜೆಗೂ ಡೇಂಜರ್ ಆಗುತ್ತಿದ್ದು, ಜನರಿಗೆ ಭಯ ಹೆಚ್ಚಾಗಿದೆ.