ಬೆಂಗಳೂರು: ಬಿಹಾರಿ ಕೊರೊನಾ ಬಾಂಬ್ಗೆ ಆಶ್ರಯತಾಣವಾಗಿರುವ ಹೊಂಗಸಂದ್ರದಲ್ಲಿ 750 ಮನೆಗಳನ್ನು ಸೀಲ್ ಮಾಡಲಾಗಿದೆ. ಸೀಲ್ ಮಾಡಿದ ಮನೆಯವರಿಗೆ ಅಗತ್ಯ ಸೇವೆ ನೀಡಲಾಗುತ್ತಿದೆ. ಎಲ್ಲರಿಗೂ ಹೆಲ್ತ್ ಚೆಕ್ ಆಫ್ ಮಾಡಲಾಗುತ್ತಿದೆ ಎಂದು ಸಚಿವ ಆರ್. ಆಶೋಕ್ ಹೇಳಿದ್ದಾರೆ.
ಸೀಲ್ ಡೌನ್ ಆದ ಮನೆಯವರಿಗೆ ಬೇಕಾದ ವಸ್ತುಗಳನ್ನು ನಾವೆ ತಲುಪ್ಪಿಸುತ್ತಿದ್ದೇವೆ. ಆಶಾ ಕಾರ್ಯಕರ್ತೆಯರು ಮನೆ ಮನೆಗೆ ಹೋಗಿ ಮಾಹಿತಿ ಪಡೆಯುತ್ತಿದ್ದಾರೆ. ಸಹಾಯವಾಣಿ ಮೂಲಕ ಅಗತ್ಯ ಸೇವೆಗಳನ್ನ ನೀಡುತ್ತಿದ್ದೇವೆ. ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಈಗಾಗಲೇ ಕೈಗೊಳ್ಳಲಾಗಿದೆ ಎಂದು ಸಚಿವ ಆಶೋಕ್ ತಿಳಿಸಿದ್ದಾರೆ.
ಇಲ್ಲಿ ಯಾವುದೇ ಅಂಗಡಿಗಳನ್ನ ತೆರಯಲು ಅವಕಾಶ ಇಲ್ಲ. ಯಾವುದೇ ದೈನಂದಿನ ವಹಿವಾಟು ನಡೆಸಲೂ ಅವಕಾಶವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
Published On - 2:46 pm, Sat, 25 April 20