ಬಂಧಿಸಲು ಹೋದ ಅರಣ್ಯ ಸಿಬ್ಬಂದಿಯನ್ನೇ ಮುಳುಗಿಸಿ, ಸಾಯಿಸಿದ ಮೀನುಗಾರರು!
ಮೈಸೂರು: ಅಕ್ರಮವಾಗಿ ಮೀನು ಹಿಡಿಯುತ್ತಿದ್ದವರನ್ನ ಹಿಡಿಯಲು ಹೋದ ಅರಣ್ಯ ಸಿಬ್ಬಂದಿಯನ್ನೇ ನೀರಿನಲ್ಲಿ ಮುಳುಗಿಸಿರುವ ಘಟನೆ ಹೆಚ್.ಡಿ.ಕೋಟೆ ತಾಲೂಕಿನ ವನ್ಯಜೀವಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ನಡೆದಿದೆ. ನೀರಿನಲ್ಲಿ ಮುಳುಗಿ ಅರಣ್ಯ ಸಿಬ್ಬಂದಿಯಾದ ಶಿವಕುಮಾರ್ ಮತ್ತು ಮಹೇಶ ಮೃತಪಟ್ಟಿದ್ದಾರೆ. ಎನ್.ಬೇಗೂರು ಗುಂಡ್ರೆ ಅರಣ್ಯ ಪ್ರದೇಶದ ಕಬಿನಿ ಹಿನ್ನೀರಿನಲ್ಲಿ ಕಳ್ಳರು ಅಕ್ರಮವಾಗಿ ಮೀನು ಹಿಡಿಯುತ್ತಿದ್ದರು. ಮಾಹಿತಿ ಮೇರೆಗೆ ಮೀನುಗಾರರನ್ನು ಹಿಡಿಯಲು ಮೈಸೂರು ಅರಣ್ಯ ಇಲಾಖೆಯ ಸಿಬ್ಬಂದಿ ಹರಿಗೋಲಿನಲ್ಲಿ ಹೋಗಿದ್ದರು. ಈ ವೇಳೆ ಮೀನುಗಾರರನ್ನು ಕಂಡು ಅರಣ್ಯ ಸಿಬ್ಬಂದಿ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. […]
ಮೈಸೂರು: ಅಕ್ರಮವಾಗಿ ಮೀನು ಹಿಡಿಯುತ್ತಿದ್ದವರನ್ನ ಹಿಡಿಯಲು ಹೋದ ಅರಣ್ಯ ಸಿಬ್ಬಂದಿಯನ್ನೇ ನೀರಿನಲ್ಲಿ ಮುಳುಗಿಸಿರುವ ಘಟನೆ ಹೆಚ್.ಡಿ.ಕೋಟೆ ತಾಲೂಕಿನ ವನ್ಯಜೀವಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ನಡೆದಿದೆ. ನೀರಿನಲ್ಲಿ ಮುಳುಗಿ ಅರಣ್ಯ ಸಿಬ್ಬಂದಿಯಾದ ಶಿವಕುಮಾರ್ ಮತ್ತು ಮಹೇಶ ಮೃತಪಟ್ಟಿದ್ದಾರೆ.
ಎನ್.ಬೇಗೂರು ಗುಂಡ್ರೆ ಅರಣ್ಯ ಪ್ರದೇಶದ ಕಬಿನಿ ಹಿನ್ನೀರಿನಲ್ಲಿ ಕಳ್ಳರು ಅಕ್ರಮವಾಗಿ ಮೀನು ಹಿಡಿಯುತ್ತಿದ್ದರು. ಮಾಹಿತಿ ಮೇರೆಗೆ ಮೀನುಗಾರರನ್ನು ಹಿಡಿಯಲು ಮೈಸೂರು ಅರಣ್ಯ ಇಲಾಖೆಯ ಸಿಬ್ಬಂದಿ ಹರಿಗೋಲಿನಲ್ಲಿ ಹೋಗಿದ್ದರು. ಈ ವೇಳೆ ಮೀನುಗಾರರನ್ನು ಕಂಡು ಅರಣ್ಯ ಸಿಬ್ಬಂದಿ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಆಗ ಅರಣ್ಯ ಇಲಾಖೆಯ 4 ಜನರಿದ್ದ ಹರಿಗೋಲನ್ನೇ ನದಿಯಲ್ಲಿ ಕಳ್ಳರು ಮುಳುಗಿಸಿದ್ದಾರೆ.
ಅರಣ್ಯ ಇಲಾಖೆಗೆ ಸೇರಿದ ಬಂದೂಕು ನೀರುಪಾಲು: ಘಟನೆ ಬಳಿಕ ಅರಣ್ಯ ಇಲಾಖೆ ಇಬ್ಬರು ಈಜಿ ದಡ ಸೇರಿದ್ದಾರೆ. ಅದ್ರೆ, ಇಬ್ಬರು ನೀರಿನಲ್ಲಿ ಈಜಲಾಗದೆ ಮುಳುಗಿ ಇಬ್ಬರು ಸಾವಿಗೀಡಾಗಿದ್ದಾರೆ. ಘಟನೆಯಲ್ಲಿ ಅರಣ್ಯ ಇಲಾಖೆಗೆ ಸೇರಿದ ಬಂದೂಕು ಸಹ ನೀರುಪಾಲಾಗಿದೆ. ಸ್ಥಳಕ್ಕೆ ಡಿವೈಎಸ್‌ಪಿ ಸುಂದರ್ ರಾಜ್ ಸೇರಿ ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಬೀಚನಹಳ್ಳಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
Published On - 1:01 pm, Sat, 25 April 20