ಊರಲ್ಲಿ ಕೊರೊನಾ ಇದ್ರೂ.. ಕುರಿ ಕಡಿದು ಮಟನ್‌ ತಿಂದ ಗ್ರಾಮಸ್ಥರು!

| Updated By:

Updated on: Jul 06, 2020 | 4:09 PM

ಹಾವೇರಿ: ಹಳ್ಳಿ ಜನರ ಈ ಕೆಲಸಕ್ಕೆ ಮುಗ್ದತೆ ಅನ್ನಬೇಕೋ ಅಥವಾ ತಿಳಿವಳಿಕೆ ಇಲ್ಲದವರೆನ್ನಬೇಕೋ. ಯಾಕಂದ್ರೆ ಕೊರೊನಾ ಹೆಮ್ಮಾರಿ ಊರಿಗೆ ಎಂಟ್ರಿ ಕೊಟ್ಟು ಬೆಂಕಿ ಹಚ್ಚಿರುವಾಗ ಇವರಿಗೆ ಕುರಿ ಕಡಿದು ಮಟನ್‌ ತಿನ್ನೋ ಆಶೆಯಾಗಿದೆ. ಹೌದು ಹಾವೇರಿ ಜಿಲ್ಲೆ ಹಾನಗಲ್‌ ತಾಲೂಕಿನ ಚಿಕ್ಕೇರಿಹೊಸಳ್ಳಿ ಗ್ರಾಮದಲ್ಲಿ ಜೂನ್‌ ತಿಂಗಳಲ್ಲಿಯೇ ಒಬ್ಬ ವ್ಯಕ್ತಿ ಕೊರೊನಾದಿಂದ ಸೋಂಕಿತನಾಗಿದ್ದಾನೆ. ಹೀಗಾಗಿ ಆತನ ಮನೆಯಿಂದ ನೂರು ಮೀಟರ್‌ವರೆಗೆ ಗ್ರಾಮದಲ್ಲಿ ಕಂಟೈನ್‌ಮೆಂಟ್‌ ಝೋನ್‌ ಎಂದು ಮಾರ್ಕ್‌ ಮಾಡಲಾಗಿದೆ. ಹಾಗೇನೆ ಇಡಿ ಗ್ರಾಮವನ್ನ ಬಫರ್‌ ಝೋನ್‌ ಆಗಿ ಜಿಲ್ಲಾಡಳಿತ […]

ಊರಲ್ಲಿ ಕೊರೊನಾ ಇದ್ರೂ.. ಕುರಿ ಕಡಿದು ಮಟನ್‌ ತಿಂದ ಗ್ರಾಮಸ್ಥರು!
Follow us on

ಹಾವೇರಿ: ಹಳ್ಳಿ ಜನರ ಈ ಕೆಲಸಕ್ಕೆ ಮುಗ್ದತೆ ಅನ್ನಬೇಕೋ ಅಥವಾ ತಿಳಿವಳಿಕೆ ಇಲ್ಲದವರೆನ್ನಬೇಕೋ. ಯಾಕಂದ್ರೆ ಕೊರೊನಾ ಹೆಮ್ಮಾರಿ ಊರಿಗೆ ಎಂಟ್ರಿ ಕೊಟ್ಟು ಬೆಂಕಿ ಹಚ್ಚಿರುವಾಗ ಇವರಿಗೆ ಕುರಿ ಕಡಿದು ಮಟನ್‌ ತಿನ್ನೋ ಆಶೆಯಾಗಿದೆ.

ಹೌದು ಹಾವೇರಿ ಜಿಲ್ಲೆ ಹಾನಗಲ್‌ ತಾಲೂಕಿನ ಚಿಕ್ಕೇರಿಹೊಸಳ್ಳಿ ಗ್ರಾಮದಲ್ಲಿ ಜೂನ್‌ ತಿಂಗಳಲ್ಲಿಯೇ ಒಬ್ಬ ವ್ಯಕ್ತಿ ಕೊರೊನಾದಿಂದ ಸೋಂಕಿತನಾಗಿದ್ದಾನೆ.

ಹೀಗಾಗಿ ಆತನ ಮನೆಯಿಂದ ನೂರು ಮೀಟರ್‌ವರೆಗೆ ಗ್ರಾಮದಲ್ಲಿ ಕಂಟೈನ್‌ಮೆಂಟ್‌ ಝೋನ್‌ ಎಂದು ಮಾರ್ಕ್‌ ಮಾಡಲಾಗಿದೆ. ಹಾಗೇನೆ ಇಡಿ ಗ್ರಾಮವನ್ನ ಬಫರ್‌ ಝೋನ್‌ ಆಗಿ ಜಿಲ್ಲಾಡಳಿತ ಘೋಷಣೆ ಮಾಡಿದೆ.

ಆದ್ರೂ ಈ ಗ್ರಾಮದ ಜನತೆಗೆ ಮಟನ್‌ ತಿನ್ನೋ ತವಕ. ಹೀಗಾಗಿ ಕುರಿ ಕಡಿದು ಮಟನ್‌ ಮಾಡಿಕೊಂಡು ಭರ್ಜರಿಯಾಗಿ ಮೇಯುತ್ತಿದ್ದಾರೆ. ಅದೂ ಸಾಮೂಹಿಕವಾಗಿ ದೈಹಿಕ ಅಂತರ ಕಾಯ್ದುಕೊಳ್ಳದೆ.

ಕೊರೊನಾನೇ ಮಟನ್‌ ಥರ ಜನರನ್ನ ಬಲಿ ಪಡಿತಿರಬೇಕಾದ್ರೆ, ಈ ಗ್ರಾಮದ ಜನತೆ ಕುರಿ ಕಡಿದು ಮಟನ್‌ ತಿನ್ನೋಕತ್ತಿದ್ದಾರಲ್ಲ ಏನು ಹೇಳಬೇಕು ಇಂಥವರಿಗೆ ಅಂತಾ ಅಧಿಕಾರಿಗಳು ಕಕ್ಕಾಬಿಕ್ಕಿಯಾಗಿದ್ದಾರೆ.

Published On - 3:44 pm, Mon, 6 July 20