ಚಿಕಿತ್ಸೆಗಾಗಿ ಸೋಂಕಿತರು ರಸ್ತೆ ಮೇಲೆ ನಿಲ್ಲುವಂತೆ ಮಾಡುವುದಿಲ್ಲ: ಇದು ಅಶೋಕ ಪ್ರತಿಜ್ಞೆ
[lazy-load-videos-and-sticky-control id=”gu2preBTXqQ”] ಬೆಂಗಳೂರು: ಯಾವುದೇ ಕೊರೊನಾ ಸೋಂಕಿತ ವ್ಯಕ್ತಿ ಚಿಕಿತ್ಸೆಗಾಗಿ ರಸ್ತೆಯಲ್ಲಿ ಕಾಯಬಾರದು. ತಕ್ಷಣವೇ ಚಿಕಿತ್ಸೆ ಸಿಗುವಂತಾಗಬೇಕು. ಇದು ಕಂದಾಯ ಸಚಿವ ಆರ್ ಅಶೋಕ್ ಅವರ ಪ್ರತಿಜ್ಞೆ. ಅಷ್ಟೇ ಅಲ್ಲ ಈ ಸಂಬಂಧ ತಕ್ಷಣವೇ ಕಾರ್ಯಪ್ರವೃತ್ತರಾಗುವಂತೆ ಬೆಂಗಳೂರಿನ ಕಾರ್ಪೋರೇಟರ್‌ಗಳಿಗೆ ಅವರು ಮನವಿ ಕೂಡಾ ಮಾಡಿದ್ದಾರೆ. ಬೆಂಗಳೂರಿನಲ್ಲಿಂದು ಕೋರೊನಾ ಸಂಬಂಧ ನಡೆದ ಕಾರ್ಪೋರೇಟರ್‌ಗಳ ಸಭೆಯಲ್ಲಿ ಮಾತನಾಡಿದ ಆರ್ ಅಶೋಕ್, ಕೊರೊನಾ ಪಾಸಿಟಿವ್ ಅಂದಕೂಡಲೇ ಜನ ಭಯಭೀತರಾಗುತ್ತಿದ್ದಾರೆ. ಕೆಲವರು ಹಾರ್ಟ್ ಅಟಾಕ್ ಆಗಿ ಸಾಯುತ್ತಿದ್ದಾರೆ. ಎಷ್ಟೋ ಜನ ಕೊರೊನಾ ಬಂದ […]
[lazy-load-videos-and-sticky-control id=”gu2preBTXqQ”]
ಬೆಂಗಳೂರು: ಯಾವುದೇ ಕೊರೊನಾ ಸೋಂಕಿತ ವ್ಯಕ್ತಿ ಚಿಕಿತ್ಸೆಗಾಗಿ ರಸ್ತೆಯಲ್ಲಿ ಕಾಯಬಾರದು. ತಕ್ಷಣವೇ ಚಿಕಿತ್ಸೆ ಸಿಗುವಂತಾಗಬೇಕು. ಇದು ಕಂದಾಯ ಸಚಿವ ಆರ್ ಅಶೋಕ್ ಅವರ ಪ್ರತಿಜ್ಞೆ. ಅಷ್ಟೇ ಅಲ್ಲ ಈ ಸಂಬಂಧ ತಕ್ಷಣವೇ ಕಾರ್ಯಪ್ರವೃತ್ತರಾಗುವಂತೆ ಬೆಂಗಳೂರಿನ ಕಾರ್ಪೋರೇಟರ್‌ಗಳಿಗೆ ಅವರು ಮನವಿ ಕೂಡಾ ಮಾಡಿದ್ದಾರೆ.
ಬೆಂಗಳೂರಿನಲ್ಲಿಂದು ಕೋರೊನಾ ಸಂಬಂಧ ನಡೆದ ಕಾರ್ಪೋರೇಟರ್‌ಗಳ ಸಭೆಯಲ್ಲಿ ಮಾತನಾಡಿದ ಆರ್ ಅಶೋಕ್, ಕೊರೊನಾ ಪಾಸಿಟಿವ್ ಅಂದಕೂಡಲೇ ಜನ ಭಯಭೀತರಾಗುತ್ತಿದ್ದಾರೆ. ಕೆಲವರು ಹಾರ್ಟ್ ಅಟಾಕ್ ಆಗಿ ಸಾಯುತ್ತಿದ್ದಾರೆ. ಎಷ್ಟೋ ಜನ ಕೊರೊನಾ ಬಂದ ಬಗ್ಗೆ ಹೇಳುತ್ತಿಲ್ಲ. ಕೆಲವರು ಆಸ್ಪತ್ರೆಯಲ್ಲಿ ಸರಿಯಾದ ಚಿಕಿತ್ಸೆ, ಊಟ ಸಿಗೋದಿಲ್ಲ ಅನ್ನೋ ಭಾವನೆಯಿಂದ ಆಸ್ಪತ್ರೆಗೆ ಬಾರದೆ ಹೆದರಿ ಓಡಿಹೋಗುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ಹೀಗೆ ಭಯಭೀತರಾದವರಿಗೆ, ಓಡಿ ಹೋದವರಿಗೆ ಇದೂ ಕೂಡಾ ಸಾಮಾನ್ಯ ಕಾಯಿಲೆ, ಇದರ ಬಗ್ಗ ಭಯಬೇಡ ಅಂತಾ ಧೈರ್ಯ ತುಂಬಿ. ವಾರ್ಡ್‌ವಾರು ನೀಡಿರುವ 20 ಲಕ್ಷ ಮೆಡಿಕಲ್ ಫಂಡ್‌ನ್ನು ಸೀಲ್ ಡೌನ್ ಪ್ರದೇಶಗಳಲ್ಲಿ ಸದುಪಯೋಗವಾಗುವಂತೆ ಖರ್ಚು ಮಾಡಿ. ಇದರ ಜೊತೆಗೆ ಬೆಂಗಳೂರಿನ ಉತ್ತರ ಭಾಗ ಮತ್ತು ದಕ್ಷಿಣ ಭಾಗಗಳಲ್ಲಿ ಪ್ರತೇಕ ಕೋವಿಡ್ ಹೆರಿಗೆ ಆಸ್ಪತ್ರೆಗಳನ್ನು ಗುರುತಿಸಿ ಎಂದು ಕಾರ್ಪೋರೇಟರ್‌ಗಳಿಗೆ ಅವರು ಸೂಚಿಸಿದರು.
Published On - 5:17 pm, Mon, 6 July 20