ಎತ್ತುಗಳಂತೆ ಉಳುಮೆ ಮಾಡುತ್ತಿದ್ದ ಬಾಲಕಿಯರಿಗೆ ಟ್ರ್ಯಾಕ್ಟರ್‌ ಗಿಫ್ಟ್‌ ಕೊಟ್ಟ ಸೋನು ಸೂದ್‌‌

| Updated By:

Updated on: Jul 27, 2020 | 9:02 PM

ಚಿತ್ತೂರ್‌: ಕೆಲ ದಿನಗಳ ಹಿಂದಷ್ಟೇ ರೈತನೊಬ್ಬ ಆಂಧ್ರಪ್ರದೇಶದ ಚಿತ್ತೂರ್‌ನಲ್ಲಿ ಹೊಲದಲ್ಲಿ ಉಳುಮೆ ಮಾಡಲು ದುಡ್ಡಿಲ್ಲದೇ ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಎತ್ತಿನಂತೆ ಬಳಸಿ ಉಳುಮೆ ಮಾಡತ್ತಿದ್ದ ವಿಡಿಯೋ ವೈರಲ್‌ ಆಗಿತ್ತು. ಈ ವಿಡಿಯೋವನ್ನು ಗಮನಿಸಿದ ನಟ ಸೋನು ಸೂದ್‌ ಈ ಬಾಲಕೀಯರಿಗೆ ಟ್ರಾಕ್ಟರ್‌ ಅನ್ನು ಉಳುಮೆ ಮಾಡಲು ಉಡುಗೊರೆಯಾಗಿ ನೀಡಿದ್ದಾರೆ. ಹೌದು ಚಿತ್ತೂರು‌ ಜಿಲ್ಲೆಯ ವ್ಯಕ್ತಿಯೊಬ್ಬ ಮದನಪಲ್ಲೆಯಲ್ಲಿ ಕಳೆದ 15 ವರ್ಷಗಳಿಂದ ಚಹದ ಅಂಗಡಿ ನಡೆಸುತ್ತಿದ್ದ. ಆದ್ರೆ ಕೊರೊನಾ ಸಂಕಷ್ಟದಿಂದಾಗಿ ಲಾಕ್‌ಡೌನ್‌ ವಿಧಿಸಿದ ನಂತರ ತನ್ನ ಸ್ವಂತ ಗ್ರಾಮ […]

ಎತ್ತುಗಳಂತೆ ಉಳುಮೆ ಮಾಡುತ್ತಿದ್ದ ಬಾಲಕಿಯರಿಗೆ ಟ್ರ್ಯಾಕ್ಟರ್‌ ಗಿಫ್ಟ್‌ ಕೊಟ್ಟ ಸೋನು ಸೂದ್‌‌
Follow us on

ಚಿತ್ತೂರ್‌: ಕೆಲ ದಿನಗಳ ಹಿಂದಷ್ಟೇ ರೈತನೊಬ್ಬ ಆಂಧ್ರಪ್ರದೇಶದ ಚಿತ್ತೂರ್‌ನಲ್ಲಿ ಹೊಲದಲ್ಲಿ ಉಳುಮೆ ಮಾಡಲು ದುಡ್ಡಿಲ್ಲದೇ ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಎತ್ತಿನಂತೆ ಬಳಸಿ ಉಳುಮೆ ಮಾಡತ್ತಿದ್ದ ವಿಡಿಯೋ ವೈರಲ್‌ ಆಗಿತ್ತು. ಈ ವಿಡಿಯೋವನ್ನು ಗಮನಿಸಿದ ನಟ ಸೋನು ಸೂದ್‌ ಈ ಬಾಲಕೀಯರಿಗೆ ಟ್ರಾಕ್ಟರ್‌ ಅನ್ನು ಉಳುಮೆ ಮಾಡಲು ಉಡುಗೊರೆಯಾಗಿ ನೀಡಿದ್ದಾರೆ.

ಹೌದು ಚಿತ್ತೂರು‌ ಜಿಲ್ಲೆಯ ವ್ಯಕ್ತಿಯೊಬ್ಬ ಮದನಪಲ್ಲೆಯಲ್ಲಿ ಕಳೆದ 15 ವರ್ಷಗಳಿಂದ ಚಹದ ಅಂಗಡಿ ನಡೆಸುತ್ತಿದ್ದ. ಆದ್ರೆ ಕೊರೊನಾ ಸಂಕಷ್ಟದಿಂದಾಗಿ ಲಾಕ್‌ಡೌನ್‌ ವಿಧಿಸಿದ ನಂತರ ತನ್ನ ಸ್ವಂತ ಗ್ರಾಮ ರಾಜುವರಿಪಲ್ಲೆಗೆ ತನ್ನಿಬ್ಬರು ಹೆಣ್ಣುಮಕ್ಕಳೊಂದಿಗೆ ಹಿಂದಿರುಗಿದ್ದ. ಆದ್ರೆ ಹೊಟ್ಟೆಪಾಡಿಗಾಗಿ ಇದ್ದ ಸ್ವಲ್ಪ ಜಮೀನಿನಲ್ಲಿ ಉಳುಮೆ ಮಾಡಲು ಹಣವಿರಲಿಲ್ಲ. ಹೀಗಾಗಿ ಅಭ್ಯಾಸ ಮಾಡುತ್ತಿದ್ದ ತನ್ನಿಬ್ಬರು ಹೆಣ್ಣುಮಕ್ಳಾದ ಚಂದನಾ ಮತ್ತು ವೆನೀಲಾರನ್ನು ಎತ್ತುಗಳಂತೆ ಬಳಸಿ ಕೃಷಿ ಮಾಡಲಾರಂಭಿಸಿದ್ದ.

ಎತ್ತುಗಳಂತೆ ನೊಗ ಹೊತ್ತ ಬಾಲಕಿಯರು
ಹೀಗೆ ವಿದ್ಯಾಭ್ಯಾಸ ಬಿಟ್ಟು ಎತ್ತುಗಳಂತೆ ಹೊಲದಲ್ಲಿ ನೊಗ ಎಳೆಯುತ್ತಿದ್ದ ಎಳೆ ಹೆಣ್ಣುಮಕ್ಕಳ ದೃಶ್ಯವನ್ನು ನೋಡಿದವರು ರೆಕಾರ್ಡ್‌ ಮಾಡಿ ಸೋಷಿಯಲ್‌ ಮಿಡಿಯಾದಲ್ಲಿ ಷೇರ್‌ ಮಾಡಿದ್ದರು. ಕ್ಷಣಾರ್ಧದಲ್ಲಿ ಈ ವಿಡಿಯೋ ವೈರಲ್‌ ಆಗಿತ್ತು. ಇದನ್ನು ನೋಡಿದ ಬಹುಬಾಷಾ ನಟ ಸೋನು ಸೂದ್‌ ಮನ ಕರಗಿತ್ತು. ತಕ್ಷಣವೆ ಈ ಹೆಣ್ಣುಮಕ್ಕಳು ವಿದ್ಯಾಭ್ಯಾಸ ಮಾಡಲಿ, ನಾನು ಅವರಿಗೆ ಎತ್ತುಗಳನ್ನು ಕೊಡಿಸುತ್ತೇನೆ ಎಂದು ಟ್ವೀಟ್‌ ಮಾಡಿದ್ದರು.

ಟ್ರಾಕ್ಟರ್‌ ನೀಡುವ ಭರವಸೆ ನೀಡಿದ ಸೋನು ಸೂದ್‌
ಇದಾದ ಕೆಲವೇ ಹೊತ್ತಿನಲ್ಲಿ ಎತ್ತು ಬೇಡ, ಅವರಿಗೆ ಟ್ರ್ಯಾಕ್ಟರ್‌ ಅನ್ನೇ ಕೊಡಿಸುತ್ತೇನೆ ಎಂದು ಭರವಸೆ ನೀಡಿದ್ದರು. ನೀಡಿದ ಭರವಸೆಯಂತೆ ಸೋನು ಸೂದ್‌ ಈಗ ಈ ಚಂದನಾ ಮತ್ತು ವೆನೀಲಾ ಅವರಿಗೆ ಟ್ರ್ಯಾಕ್ಟರ್‌ ಒಂದನ್ನು ಉಡುಗೊರೆಯಾಗಿ ನೀಡಿದ್ದಾರೆ. ಟ್ರ್ಯಾಕ್ಟರ್‌ ನೋಡಿದ ಚಂದನಾ ಮತ್ತು ವೆನೀಲಾ ಅವರ ಮುಖದಲ್ಲಿ ಈಗ ಮಂದಹಾಸ ಮೂಡಿದೆ.

ಕೊರೊನಾದ ಸಂಕಷ್ಟದ ಸಮಯದಲ್ಲಿ ಸೋನು ಸೂದ್‌ ಸಾಕಷ್ಟು ಜನರಿಗೆ ಸಹಾಯ ಮಾಡುತ್ತಿದ್ದಾರೆ. ಕಾಲ್ನಡಿಗೆಯಲ್ಲಿ ತವರಿಗೆ ವಾಪಸಾಗುತ್ತಿದ್ದ ದಿನಗೂಲಿ ಕಾರ್ಮಿಕರಿಗೆ ಬಸ್‌ ವ್ಯವಸ್ಥೆ ಸೇರಿದಂತೆ ಬಡ ಜನರ ಸಹಾಯಕ್ಕಾಗಿ ಸೂದ್‌ ಮಾಡುತ್ತಿರುವ ಸೇವೆ ನಿಜಕ್ಕೂ ಪ್ರಶಂಸಾರ್ಹವೇ ಸರಿ.

 

Published On - 9:47 pm, Sun, 26 July 20