ಮಿಡತೆ ಆಯ್ತು, ಇದೀಗ ರೈತರಿಗೆ ಭಯ ಹುಟ್ಟಿಸಿದೆ ಬಸವನ ಹುಳು

|

Updated on: Aug 24, 2020 | 7:32 AM

ಮಂಗಳೂರು: ಮಿಡತೆ ಭಯ ಸದ್ಯ ದೂರವಾಗಿದೆ. ಆದ್ರೆ ಕರಾವಳಿಯಲ್ಲಿ ಈಗ ಆಫ್ರಿಕನ್ ಸ್ನೈಲ್ ಅನ್ನೋ ಹುಳುವಿನ ಕಾಟ ರೈತರನ್ನು ಕಾಡುತ್ತಿದೆ. ಹೌದು ಬಸವನಹುಳು ಮಾದರಿಯ ಆಫ್ರಿಕನ್ ಸ್ನೈಲ್ ಈಗ ರೈತರ ತಲೆನೋವಿಗೆ ಕಾರಣವಾಗಿದೆ. ಕೃಷಿ ವಿಜ್ಞಾನಿಗಳು ಇದಕ್ಕೆ ಪರಿಹಾರ ಕಂಡು ಹಿಡಿದಿದ್ರೂ ಕೂಡ ಅದು ರೈತರ ಪಾಲಿಗೆ ದುಬಾರಿ ಎನಿಸಿದೆ. ಮಳೆಗಾಳ ಆರಂಭವಾಯ್ತು ಅಂದ್ರೆ ಸಾಕು ಮಲೆನಾಡು ಮತ್ತು ಕರಾವಳಿ ಪ್ರದೇಶಗಳಲ್ಲಿ ಬಸವನ ಹುಳುಗಳ ದರ್ಬಾರ್ ಶುರುವಾಗುತ್ತೆ. ಆದ್ರೆ ಇದೇ ಮಾದರಿಯ ಆಫ್ರಿಕನ್ ಬಸವನ ಹುಳುಗಳು ದಕ್ಷಿಣ […]

ಮಿಡತೆ ಆಯ್ತು, ಇದೀಗ ರೈತರಿಗೆ ಭಯ ಹುಟ್ಟಿಸಿದೆ ಬಸವನ ಹುಳು
Follow us on

ಮಂಗಳೂರು: ಮಿಡತೆ ಭಯ ಸದ್ಯ ದೂರವಾಗಿದೆ. ಆದ್ರೆ ಕರಾವಳಿಯಲ್ಲಿ ಈಗ ಆಫ್ರಿಕನ್ ಸ್ನೈಲ್ ಅನ್ನೋ ಹುಳುವಿನ ಕಾಟ ರೈತರನ್ನು ಕಾಡುತ್ತಿದೆ. ಹೌದು ಬಸವನಹುಳು ಮಾದರಿಯ ಆಫ್ರಿಕನ್ ಸ್ನೈಲ್ ಈಗ ರೈತರ ತಲೆನೋವಿಗೆ ಕಾರಣವಾಗಿದೆ. ಕೃಷಿ ವಿಜ್ಞಾನಿಗಳು ಇದಕ್ಕೆ ಪರಿಹಾರ ಕಂಡು ಹಿಡಿದಿದ್ರೂ ಕೂಡ ಅದು ರೈತರ ಪಾಲಿಗೆ ದುಬಾರಿ ಎನಿಸಿದೆ.

ಮಳೆಗಾಳ ಆರಂಭವಾಯ್ತು ಅಂದ್ರೆ ಸಾಕು ಮಲೆನಾಡು ಮತ್ತು ಕರಾವಳಿ ಪ್ರದೇಶಗಳಲ್ಲಿ ಬಸವನ ಹುಳುಗಳ ದರ್ಬಾರ್ ಶುರುವಾಗುತ್ತೆ. ಆದ್ರೆ ಇದೇ ಮಾದರಿಯ ಆಫ್ರಿಕನ್ ಬಸವನ ಹುಳುಗಳು ದಕ್ಷಿಣ ಕನ್ನಡ ಜಿಲ್ಲೆಯ ರೈತರ ನಿದ್ದೆಗೆಡಿಸಿವೆ.

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ, ಪುತ್ತೂರು, ಸುಳ್ಯ ಸೇರಿದಂತೆ ವಿವಿಧ ಕಡೆ ಈ ಹುಳುವಿನ ಅಬ್ಬರ ಜೋರಾಗಿದೆ. ರಬ್ಬರ್, ಅಡಿಕೆ, ತೆಂಗಿನಮರ ಸೇರಿದಂತೆ ಹಲವು ಬೆಳೆಯನ್ನ ಇವು ತಿಂದು ಹಾಕುತ್ತಿವೆ. ಸಹಸ್ರಾರು ಸಂಖ್ಯೆಯಲ್ಲಿ ದಾಳಿ ಇಟ್ಟಿರುವ ಬಸವನಹುಳುಗಳು ಎಕರೆಗಟ್ಟಲೆ ಸಸ್ಯವನ್ನು ನಾಶಪಡಿಸುತ್ತಿವೆ.

ಬಸವನ ಹುಳುಗಳ ಆರ್ಭಟಕ್ಕೆ ಬೇಸತ್ತ ರೈತರು ಕೃಷಿ ಅಧಿಕಾರಿಗಳ ಮೊರೆ ಹೋಗಿದ್ದಾರೆ. ಈ ಬಗ್ಗೆ ಅಧ್ಯಯನ ನಡೆಸಿದ ಮಂಗಳೂರು ಕೃಷಿ ವಿಜ್ಞಾನ ಕೇಂದ್ರದ ಅಧಿಕಾರಿಗಳು ಪರಿಹಾರ ಕಂಡುಕೊಂಡಿದ್ದಾರೆ. ಬಸವನ ಹುಳುಗಳಿರುವ ಪ್ರದೇಶ ಪತ್ತೆ ಹಚ್ಚಿ 100 ಚದರ ಅಡಿ ಪ್ರದೇಶದಲ್ಲಿ 50 ರಿಂದ 80 ಗ್ರಾಂ ಮೆಟಾಲ್ಡಿಹೈಡ್ ರಾಸಾಯನಿಕದ ಸಣ್ಣ ಸಣ್ಣ ತುಂಡುಗಳನ್ನು 1 ಎಕರೆ ತೋಟದಲ್ಲಿ ಹಾಕಿದ್ದಾರೆ.

ಅಷ್ಟೇ ಅಲ್ಲ ಪಪ್ಪಾಯಿ, ಎಲೆ ಕೋಸು ತುಂಡುಗಳನ್ನು ಕೀಟನಾಶಕದಲ್ಲಿ ಮುಳುಗಿಸಿ ಇಟ್ಟಿದ್ದಾರೆ. ಇದರಿಂದ ಹುಳುಗಳ ಕಾಟದಿಂದ ಮುಕ್ತಿ ಸಿಗುತ್ತಿದೆ. ಆದ್ರೆ ರೈತರಿಗೆ ಈ ಪರಿಹಾರ ಬಹಳ ದುಬಾರಿಯಾಗಿದೆ. ಮೆಟಾಲ್ಡಿಹೈಡ್ ರಾಸಾಯನಿಕ ಬಳಸಬೇಕೆಂದ್ರೆ ಹತ್ತು ಎಕರೆ ಪ್ರದೇಶಕ್ಕೆ 44,500 ರೂಪಾಯಿ ಖರ್ಚು ಬೀಳಲಿದೆಯಂತೆ.

ಒಂದು ಬಾರಿ ಬಳಸಿ ಸುಮ್ಮನಾಗುವುದಾದ್ರೆ ಖರ್ಚು ಮಾಡಬಹುದು. ಆದ್ರೆ ಇದು ನಿರಂತರ ಪ್ರಕ್ರಿಯೆ ಹಾಗಾಗಿ ಬೇರೆ ಏನಾದ್ರೂ ಮಾರ್ಗಕಂಡುಕೊಡಬೇಕು ಅನ್ನೋದು ರೈತರ ಮನವಿ. ಇನ್ನು ಬಸವನ ಹುಳುವಿನಿಂದ ನಾಶವಾಗಿರುವ ಬೆಳೆಗೆ ಸರ್ಕಾರ ಪರಿಹಾರ ಕೊಡಬೇಕು ಎನ್ನವುದು ಕರಾವಳಿ ಭಾಗದ ರೈತರ ಮನವಿಯಾಗಿದೆ.

Published On - 7:29 am, Mon, 24 August 20