ಕಳುವಾದ ಕಾರು ಪತ್ತೆಯಾದ ಮೇಲೆ ಸ್ವಂತಕ್ಕೆ ಬಳಸಿದ ದಾವಣಗೆರೆ ಪೇದೆ ಕಾರು ಮಾಲೀಕ ಪ್ರಶ್ನಿಸಿದ್ದಕ್ಕೆ ಹಲ್ಲೆ ಮಾಡಿದ್ದಾನೆ!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jun 09, 2022 | 1:21 PM

ಒಬ್ಬ ಪೇದೆ ಪತ್ತೆಯಾದ ಕಾರನ್ನು ತನ್ನದೇ ಅನ್ನುವಂತೆ ಸ್ವಲ್ಪ ದಿನ ಓಡಾಡಿಸಿ, ಕಾರಿನ ಮಾಲೀಕ ಪ್ರಶ್ನಿಸಿದ್ದಕ್ಕೆ ಹಲ್ಲೆ ಮಾಡಿದ್ದಾನೆ. ಇದು ದಾವಣಗೆರೆ ಎಸ್ ಪಿ ಅವರ ಗಮನಕ್ಕೆ ಹೋದರೆ ಚೆನ್ನಾಗಿರುತ್ತದೆ ಅಂತ ನಾವಂದುಕೊಳ್ಳುತ್ತಿದ್ದೇವೆ

Davanagere:  ಇಂಥ ಪ್ರಕರಣಗಳು ಬಹಳಷ್ಟು ಪೊಲೀಸ್ ಠಾಣೆಗಳಲ್ಲಿ ನಡೆಯುತ್ತವೆ, ವರದಿಯಾಗುವುದಿಲ್ಲ. ಕಳುವಾದ (theft) ಕಾರುಗಳನ್ನು ಪತ್ತೆ ಮಾಡಿ ತಮ್ಮ ವಶಕ್ಕೆ ತೆಗೆದುಕೊಳ್ಳುವ ಪೊಲೀಸರು ಕೂಡಲೇ ದೂರು ದಾಖಲಿಸಿದ ಮಾಲೀಕರಿಗೆ ಅದನ್ನು ತಲುಪಿಸದೆ ಒಂದಷ್ಟು ದಿನ ತಮ್ಮ ಸ್ವಂತಕ್ಕೆ ಉಪಯೋಗಿಸುವ ಕೆಲಸ ಮಾಡುತ್ತಾರೆ. ಈ ವಿಡಿಯೋನಲ್ಲಿ ನಿಮಗೆ ಕಾಣುತ್ತಿರೋದು ಇಂಥದ್ದೇ ಒಂದು ಪ್ರಕರಣ. ದಾವಣಗೆರೆಯ (Davanagere) ಪೊಲೀಸ್ ಠಾಣೆಯ ಮಂಜುನಾಥ (Manjunath) ಹೆಸರಿನ ಒಬ್ಬ ಪೇದೆ ಪತ್ತೆಯಾದ ಕಾರನ್ನು ತನ್ನದೇ ಅನ್ನುವಂತೆ ಸ್ವಲ್ಪ ದಿನ ಓಡಾಡಿಸಿ, ಕಾರಿನ ಮಾಲೀಕ ಪ್ರಶ್ನಿಸಿದ್ದಕ್ಕೆ ಹಲ್ಲೆ ಮಾಡಿದ್ದಾನೆ. ಇದು ದಾವಣಗೆರೆ ಎಸ್ ಪಿ ಅವರ ಗಮನಕ್ಕೆ ಹೋದರೆ ಚೆನ್ನಾಗಿರುತ್ತದೆ ಅಂತ ನಾವಂದುಕೊಳ್ಳುತ್ತಿದ್ದೇವೆ.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.