ರಾಯಚೂರು ನಗರಸಭೆ ಚುನಾವಣೆಯಲ್ಲಿ ಕುರುಡು ಕಾಂಚಾಣ, ವಿನಯ್‌ ಕುಮಾರ್ ವಿರುದ್ಧ ಆರೋಪ

|

Updated on: Nov 08, 2020 | 6:48 AM

ರಾಯಚೂರು: ಚುನಾವಣೆ ಬಂತಂದ್ರೆ ಸಾಕು ಹಣ ಹೆಂಡ ಹಂಚೊದು ಕಾಮನ್.. ಆದ್ರೆ ಇಲ್ಲೊಬ್ಬ ಕೌನ್ಸಲರ್ ನಗರಸಭೆ ಅಧ್ಯಕ್ಷ ಗಾದಿಗೆ ಪಕ್ಷಾತೀತವಾಗಿ ಕೋಟಿ ಕೋಟಿ ಹಣ ಹಂಚಿಕೆ ಮಾಡಿದ ಆರೋಪಕ್ಕೆ ಗುರಿಯಾಗಿದ್ದಾನೆ. ಇನ್ನು ಮುಜುಗರದಿಂದ ತಪ್ಪಿಸಿಕೊಳ್ಳೋಕೆ ಕೊನೆ ಘಳಿಗೆಯಲ್ಲಿ ಅಲ್ಪಸಂಖ್ಯಾತ ಅಭ್ಯರ್ಥಿಗೆ ಕೈ ಕೊಟ್ಟ ಕಾಂಗ್ರೆಸ್ ಪಕ್ಷದ ವಿರುದ್ದ ಸಧ್ಯ ಆ ಜಿಲ್ಲೆಯಲ್ಲಿ ಆಕ್ರೋಶ ಭುಗಿಲೆದ್ದಿದೆ. ರಾಯಚೂರು ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಈಚೆಗಷ್ಟೇ ಚುನಾವಣೆ ನಡೆದಿತ್ತು. ಕಾಂಗ್ರೆಸ್ ಪಕ್ಷದ ನಗರಸಭೆ ಸದಸ್ಯ ವಿನಯಕುಮಾರ್ ನಗರಸಭೆ ಅಧ್ಯಕ್ಷ ಸ್ಥಾನದ ಮೇಲೆ […]

ರಾಯಚೂರು ನಗರಸಭೆ ಚುನಾವಣೆಯಲ್ಲಿ ಕುರುಡು ಕಾಂಚಾಣ, ವಿನಯ್‌ ಕುಮಾರ್ ವಿರುದ್ಧ ಆರೋಪ
Follow us on

ರಾಯಚೂರು: ಚುನಾವಣೆ ಬಂತಂದ್ರೆ ಸಾಕು ಹಣ ಹೆಂಡ ಹಂಚೊದು ಕಾಮನ್.. ಆದ್ರೆ ಇಲ್ಲೊಬ್ಬ ಕೌನ್ಸಲರ್ ನಗರಸಭೆ ಅಧ್ಯಕ್ಷ ಗಾದಿಗೆ ಪಕ್ಷಾತೀತವಾಗಿ ಕೋಟಿ ಕೋಟಿ ಹಣ ಹಂಚಿಕೆ ಮಾಡಿದ ಆರೋಪಕ್ಕೆ ಗುರಿಯಾಗಿದ್ದಾನೆ. ಇನ್ನು ಮುಜುಗರದಿಂದ ತಪ್ಪಿಸಿಕೊಳ್ಳೋಕೆ ಕೊನೆ ಘಳಿಗೆಯಲ್ಲಿ ಅಲ್ಪಸಂಖ್ಯಾತ ಅಭ್ಯರ್ಥಿಗೆ ಕೈ ಕೊಟ್ಟ ಕಾಂಗ್ರೆಸ್ ಪಕ್ಷದ ವಿರುದ್ದ ಸಧ್ಯ ಆ ಜಿಲ್ಲೆಯಲ್ಲಿ ಆಕ್ರೋಶ ಭುಗಿಲೆದ್ದಿದೆ.

ರಾಯಚೂರು ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಈಚೆಗಷ್ಟೇ ಚುನಾವಣೆ ನಡೆದಿತ್ತು. ಕಾಂಗ್ರೆಸ್ ಪಕ್ಷದ ನಗರಸಭೆ ಸದಸ್ಯ ವಿನಯಕುಮಾರ್ ನಗರಸಭೆ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದರು. ಆದ್ರೆ ಕಾಂಗ್ರೆಸ್ ಪಕ್ಷ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ನಗರಸಭೆ ಸದಸ್ಯ ಸಾಜೀದ್ ಸಮೀರ್‌ನನ್ನ ಅಧ್ಯಕ್ಷ ಸ್ಥಾನಕ್ಕೆ ಕಣಕ್ಕಿಳಿಸುವುದಾಗಿ ಭರವಸೆ ನೀಡಿತ್ತು. ಇದನ್ನರಿತ ವಿನಯ್‌ಕುಮಾರ್ ಬಹುಮತದ ಕೊರತೆ ಹೊಂದಿದ್ದ ಬಿಜೆಪಿ ಸದಸ್ಯರ ಬೆಂಬಲ ಪಡೆದಿದ್ದರು. ಕಾಂಗ್ರೆಸ್ ಕೈ ಕೊಟ್ರೆ ಬಿಜೆಪಿ ಬೆಂಬಲದೊಂದಿಗೆ ನಗರಸಭೆ ಅಧ್ಯಕ್ಷ ಗಾದಿಗೆ ಏರಲು ವಿನಯಕುಮಾರ್ ತಂತ್ರ ರೂಪಿಸಿದ್ದರು. ಕೊನೆ ಘಳಿಗೆಯಲ್ಲಿ ಕಾಂಗ್ರೆಸ್ ಪಕ್ಷ ಸಾಜೀದ್ ಸಮೀರ್‌ಗೆ ಕೈ ಕೊಟ್ಟು ವಿನಯಕುಮಾರ್ ಅವರನ್ನೆ ಕಾಂಗ್ರೆಸ್ ಪಕ್ಷದಿಂದ ಕಣಕ್ಕಿಳಿಸಿತ್ತು.

ನಗರಸಭೆ ಅಧ್ಯಕ್ಷ ಸ್ಥಾನಕ್ಕಾಗಿ ಕೋಟಿ ಕೋಟಿ ಹಣ ಸುರಿದ ಭೂಪ
ಕಾಂಗ್ರೆಸ್ ನಡೆಯಿಂದ ಬೇಸತ್ತ ರಾಯಚೂರು ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಬಶೀರುದ್ದೀನ್ ಕಾಂಗ್ರೆಸ್ ವಿರುದ್ಧ ಸಿಡಿದೆದ್ದಿದ್ದಾರೆ. ಕಾಂಗ್ರೆಸ್ ಪಕ್ಷ ಅಲ್ಪಸಂಖ್ಯಾತ ಸಮುದಾಯಕ್ಕೆ ಅನ್ಯಾಯ ಎಸಗಿದೆ ಎಂದು ಆರೋಪಿಸಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅಷ್ಟೇ ಅಲ್ಲ ವಿನಯ್ ಕುಮಾರ್ ಅಧ್ಯಕ್ಷಗಾದಿಗೆ ಏರಲು 7 ಕೋಟಿ ಹಣ ಹಂಚಿದ್ದಾರೆ ಎಂದು ಆರೋಪಿಸಿದ್ದಾರೆ.

ಇನ್ನು ರಾಯಚೂರು ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ವಿಚಾರ ಬಿಜೆಪಿಗೂ ಪ್ರತಿಷ್ಠೆಯ ಪ್ರಶ್ನೆಯಾಗಿತ್ತು. ನಗರ ಶಾಸಕ ಡಾ. ಶಿವರಾಜ್ ಪಾಟೀಲ್ ರಾಯಚೂರು ನಗರಸಭೆಯಲ್ಲಿ ಬಿಜೆಪಿ ಅಧಿಕಾರಕ್ಕೆ ತರಲು ಶತಾಯ ಗತಾಯ ಯತ್ನಿಸಿದ್ದರು.

ಕಾಂಗ್ರೆಸ್ ಪಕ್ಷ ಸಾಜೀದ್ ಸಮೀರ್‌ಗೆ ಅಧ್ಯಕ್ಷ ಸ್ಥಾನಕ್ಕೆ ಅಖಾಡಕ್ಕಿಳಿಸಿದ್ರೆ, ವಿನಯಕುಮಾರ್ ಅವರನ್ನ ಬಿಜೆಪಿ ಬೆಂಬಲಿಸಿ ಆಪರೇಷನ್ ಕಮಲ ನಡೆಸುವ ತಂತ್ರ ಹೆಣೆದಿದ್ದರು. ಆದ್ರೆ ಬಹುಮತ ಹೊಂದಿದ್ದ ಕಾಂಗ್ರೆಸ್ ಪಕ್ಷ ಮುಜುಗರದಿಂದ ತಪ್ಪಿಸಿಕೊಳ್ಳಲು ಕೊನೆ ಘಳಿಗೆಯಲ್ಲಿ ಅಲ್ಪಸಂಖ್ಯಾತ ಸಮುದಾಯದ ಸಮೀರ್‌ಗೆ ಕೈ ಕೊಟ್ಟು ವಿನಯ್‌ಕುಮಾರ್​ಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಸಿತ್ತು.

ಇನ್ನು ಜೆಡಿಎಸ್ ಸದಸ್ಯರ ಬೆಂಬಲವೂ ಪಡೆದಿದ್ದ ಕಾಂಗ್ರೆಸ್‌ನ ವಿನಯ್‌ ಕುಮಾರ್, ಪಕ್ಷಾತೀತವಾಗಿ ಬಿಜೆಪಿ, ಜೆಡಿಎಸ್ ಮುಖಂಡರು ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರಿಗೆ ಒಟ್ಟಾರೆ 7 ಕೋಟಿ ರೂಪಾಯಿ ಹಣ ಹಂಚಿಕೆ ಮಾಡಿದ್ದಾರೆಂಬ ಗಂಭೀರ ಆರೋಪಕ್ಕೆ ಗುರಿಯಾಗಿದ್ದಾರೆ. ಆದ್ರೆ ಅಧ್ಯಕ್ಷ ಸ್ಥಾನ ವಂಚಿತ ನಗರಸಭೆ ಸದಸ್ಯ ಸಾಜೀದ್ ಸಮೀರ್ ತಮಗೆ ಅರ್ಧ ಅವಧಿ ಅಧ್ಯಕ್ಷ ಸ್ಥಾನದ ಭರವಸೆ ನೀಡಿದ್ದಾರೆ ಅಂತೆಲ್ಲಾ ತೇಪೆ ಹಚ್ಚುವ ಕೆಲಸ ಮಾಡ್ತಿದ್ದಾರೆ.

ಒಟ್ನಲ್ಲಿ ರಾಯಚೂರು ನಗರಸಭೆ ಅಧ್ಯಕ್ಷ ಗಾದಿಗೆ ನಡೆದ ಚುನಾವಣೆಯಲ್ಲಿ ಕುರುಡು ಕಾಂಚಾಣ ಸದ್ದು ಮಾಡಿದ್ದಂತು ಮೇಲ್ನೋಟಕ್ಕೆ ಸಾಬೀತಾಗಿದೆ. ಆದ್ರೆ ನಗರಸಭೆ ಅಧ್ಯಕ್ಷ ವಿನಯ್‌ಕುಮಾರ್ ಯಾವುದೇ ರೀತಿಯ ಹಣದ ವ್ಯವಹಾರ ನಡೆದಿಲ್ಲ. ಬಶೀರುದ್ದೀನ್ ಮಾಡಿರುವ ಆರೋಪ ಸತ್ಯಕ್ಕೆ ದೂರ ಅಂತೆಲ್ಲಾ ಪತ್ರಿಕಾ ಹೇಳಿಕೆ ರಿಲೀಸ್ ಮಾಡಿ ಕೈತೊಳೆದುಕೊಂಡಿದ್ದಾರೆ.