Kolar Animal Lover: ಅನಾಥ ಕೋತಿ‌ ಮರಿಗೆ ಆಶ್ರಯ ನೀಡಿ, ಮನೆ ಮಗುವಿನಂತೆ ಸಾಕುತ್ತಿರುವ ಕೋಲಾರದ ಪ್ರಾಣಿ ಪ್ರಿಯ!

| Updated By: ಸಾಧು ಶ್ರೀನಾಥ್​

Updated on: Jul 29, 2023 | 9:59 AM

orphaned Baby Monkey: ಕೋಲಾರದ ಜೀವಿ ಆನಂದ್ ಒಂದು ವಾರದಿಂದ ತಮ್ಮ ಮನೆಯಲ್ಲಿ ಕೋತಿ ಮರಿಯ ಆರೈಕೆ ಮಾಡುತ್ತಿದ್ದಾರೆ. ಆ ಅನಾಥ ಕೋತಿ ಮರಿಗೆ ರಾಮು ಎಂಬ ಹೆಸರಿಟ್ಟು, ಮನೆಯ ಸದಸ್ಯರಂತೆ ಆರೈಕೆ ಮಾಡುತ್ತಿದ್ದಾರೆ.

ಕೋಲಾರ, ಜುಲೈ 29: ತಾಯಿಯಿಂದ ದೂರವಾಗಿರುವ ಕೋತಿ‌ ಮರಿಗೆ (orphaned Baby Monkey) ಸ್ಥಳೀಯ ಪ್ರಾಣಿ ಪ್ರಿಯರೊಬ್ಬರು (Animal Lover) ಆಶ್ರಯ ನೀಡಿದ್ದಾರೆ. ಕೋಲಾರದ (Kolar) ಗಾಂಧಿನಗರ ಜೀವಿ ಆನಂದ್ ಎಂಬುವರಿಂದ ಕೋತಿ ಮರಿಗೆ ರಕ್ಷಣೆ ದೊರೆತಿದೆ. ತಾಯಿಯಿಂದ ದೂರಾಗಿ ಅನಾಥವಾಗಿದ್ದ ಪುಟ್ಟ ಕೋತಿ ಮರಿ ಅದು. ಕೋತಿ ಮರಿಯನ್ನು‌ ಮನೆಗೆ ತಂದು ಮನೆ ಮಗುವಿನಂತೆ ಜೀವಿ ಆನಂದ್ ಸಾಕುತ್ತಿದ್ದಾರೆ.

ಕಳೆದ ಒಂದು ವಾರದಿಂದ ತಮ್ಮ ಮನೆಯಲ್ಲಿ ಕೋತಿ ಮರಿಯ ಆರೈಕೆ ಮಾಡುತ್ತಿದ್ದಾರೆ. ಆ ಅನಾಥ ಕೋತಿ ಮರಿಗೆ ರಾಮು ಎಂಬ ಹೆಸರಿಟ್ಟು, ಮನೆಯ ಸದಸ್ಯರಂತೆ ಆರೈಕೆ ಮಾಡುತ್ತಿದ್ದಾರೆ ಆನಂದ್. ಮನೆಯ ಸದಸ್ಯರೊಂದಿಗೆ ಮುದ್ದಾಗಿ ಆಟವಾಡಿಕೊಂಡಿರುವ ಕೋತಿ ಮರಿಯನ್ನು ನೋಡುವುದೆ ಚೆಂದ. ಒಮ್ಮೆ ನೀವೂ ನೋಡಿ!

ಕೋಲಾರ ಜಿಲ್ಲಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ