ಜಾಗತಿಕ ಮೊಬೈಲ್ ಫೋನ್ ಮಾರ್ಕೆಟ್​ನಲ್ಲಿ ಶಾಮಿಯನ್ನು ಹಿಂದಿಕ್ಕಿ ಎರಡನೇ ಸ್ಥಾನಕ್ಕೇರಿದ  ಆ್ಯಪಲ್, ಸ್ಯಾಮ್ಸಂಗ್ ಅಗ್ರಸ್ಥಾನ ಅಬಾಧಿತ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Nov 03, 2021 | 9:34 PM

ಸದ್ಯಕ್ಕಂತೂ ವಿಶ್ವದ ಯಾವುದೇ ಕಂಪನಿ ಸ್ಯಾಮ್ಸಂಗ್ ಅನ್ನು ಅಗ್ರಸ್ಥಾನದಿಂದ ಸ್ಥಾನಪಲ್ಲಟಗೊಳಿಸದು. ಯಾಕೆಂದರೆ ನಂಬರ್ ವನ್ ಮತ್ತು ನಂಬರ್ 2 ನಡುವೆ ಅಜಗಜಾಂತರ ವ್ಯತ್ಯಾಸವಿದೆ.

ಕಳೆದೆರಡು ದಶಕಗಳಿಂದ ನಾವು ಮಾತ್ರ ಅಲ್ಲ, ಇಡೀ ವಿಶ್ವವೇ ಅತಿಹೆಚ್ಚು ಚರ್ಚಸಿದ ವಿಷಯ ಮೊಬೈಲ್ ಫೋನ್​ಗಳ ಕುರಿತಾಗಿಯಂತೆ. ಅದರಲ್ಲಿ ಅತಿಶಯೋಕ್ತಿ ಏನೂ ಇಲ್ಲ ಬಿಡಿ. ಫೋನ್ ಈಗ ಪ್ರತಿಯೊಬ್ಬರ ಬದುಕಿನ ಅವಿಭಾಜ್ಯ ಅಂಗವಾಗಿದೆ. ಪ್ರತಿದಿನ ನಾವು ಪೋನ್ಗಳ ಬಗ್ಗೆ ಮಾತಾಡುತ್ತೇವೆ, ಅವುಗಳ ಬ್ಯಾಟರಿ ಲೈಫ್, ಬೆಲೆ, ಕೆಮೆರಾ ಗುಣಮಟ್ಟ ಮೊದಲಾದ ಸಂಗತಿಗಳನ್ನು ನಾವು ಚರ್ಚಿಸುತ್ತಲೇ ಇರುತ್ತೇವೆ. ಓಕೆ ನಾವೀಗ ಫೋನಗಳ ಬಗ್ಗೆಯೇ ಬೇರೆ ಅಂಶವನ್ನು ಚರ್ಚಿಸುವ. ಪೋನ್ ಗಳ ಮಾರ್ಕೆಟ್​ನಲ್ಲಿ ಲೀಡರ್ ಯಾರೆಂದು ನಿಮಗೆ ಗೊತ್ತಿದೆಯಾ? ಆ್ಯಪಲ್ ಅಂತ ನೀವು ಭಾವಿಸಿದ್ದೇಯಾದರೆ ಅದು ತಪ್ಪು. ದಕ್ಷಿಣ ಕೊರಿಯಾದ ಸ್ಯಾಮ್ಸಂಗ್ ನಂಬರ್ ವನ್ ಸಂಸ್ಥೆ ಮಾರಾಯ್ರೇ.

ಹೌದು, ಸದ್ಯಕ್ಕಂತೂ ವಿಶ್ವದ ಯಾವುದೇ ಕಂಪನಿ ಸ್ಯಾಮ್ಸಂಗ್ ಅನ್ನು ಅಗ್ರಸ್ಥಾನದಿಂದ ಸ್ಥಾನಪಲ್ಲಟಗೊಳಿಸದು. ಯಾಕೆಂದರೆ ನಂಬರ್ ವನ್ ಮತ್ತು ನಂಬರ್ 2 ನಡುವೆ ಅಜಗಜಾಂತರ ವ್ಯತ್ಯಾಸವಿದೆ. ಕಳೆದ ಕ್ವಾರ್ಟರ್​ನಲ್ಲಿ (ತ್ರೈಮಾಸಿಕ) ಸ್ಯಾಮ್ಸಂಗ್ 6.90 ಕೋಟಿ ಪೋನ್ ಗಳನ್ನು ಮಾರಾಟ ಮಾಡಿದೆ.

ಮೊನ್ನೆಯಷ್ಟೇ ಐಪೋನ್ 13 ಮಾರ್ಕೆಟ್​ಗೆ ಬಿಡುಗಡೆ ಮಾಡಿದ ಆ್ಯಪಲ್ ದಾಖಲೆಯ ಮರಾಟ ಮಾಡಿ ಮೂರನೇ ಸ್ಥಾನದಿಂದ ಎರಡನೇ ಸ್ಥಾನಕ್ಕೇರಿದೆ. ಕಳೆದ ತ್ರೈಮಾಸಿಕದಲ್ಲಿ ಅದು 5.40 ಕೋಟಿ ಫೋನ್​ಗಳನ್ನು ಮಾರಾಟ ಮಾಡಿದೆಯಂತೆ! ಇದುವರೆಗೆ ಎರಡನೇ ಸ್ಥಾನದಲ್ಲಿದ್ದ ಶಾಮಿ ಮೂರನೇ ಸ್ಥಾನಕ್ಕಿಳಿದಿದ್ದು, 4 ಮತ್ತು 5 ನೇ ಸ್ಥಾನದಲ್ಲಿ ಕ್ರಮವಾಗಿ ವಿವೊ ಮತ್ತು ಒಪ್ಪೋ ಸಂಸ್ಥೆಗಳಿವೆ.

ಅಂದಹಾಗೆ, ಜಾಗತಿಕ ಮಾರ್ಕೆಟ್​ನಲ್ಲಿ ಸ್ಯಾಮ್ಸಂಗ್ ಸಂಸ್ಥೆಯ ಪಾಲುದಾರಿಕೆ ಶೇಕಡ 20.81 ಇದ್ದರೆ, ಆ್ಯಪಲ್ ಸಂಸ್ಥೆಯದು ಶೇ 15.2 ಇದೆ.

ಇದನ್ನೂ ಓದಿ:   ಪಟಾಕಿ ಹಚ್ಚೋದು ಬೇಡ, ದೇಹದ ಕ್ಯಾಲೋರಿ ಬರ್ನ್ ಮಾಡೋಣ; ದೀಪಾವಳಿಗೆ ಮನವಿ ಮಾಡಿದ್ದ ಪುನೀತ್ ಹಳೆಯ ವಿಡಿಯೋ ವೈರಲ್​