ಮಂಡ್ಯ: ಮದ್ದೂರು ತಾಲೂಕಿನ ಹುರುಗಲವಾಡಿಯಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ, ಕತ್ತು ಕೊಯ್ದು ಅಮಾನವೀಯತೆ ಮೆರೆದ ಓರ್ವ ಅಪ್ರಾಪ್ತ ಯುವಕನ್ನು ಪೋಲಿಸರು ವಶಪಡಿಸಿಕೊಂಡಿದ್ದಾರೆ.
ಕಬ್ಬು ಕಟಾವು ಮಾಡಲು ಹುರುಗಲವಾಡಿಗೆ ಬಂದಿದ್ದ ಬಳ್ಳಾರಿ ಜಿಲ್ಲೆಯ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ನಂತರ ಅದೇ ಕಬ್ಬಿನ ಗದ್ದೆಯಲ್ಲಿ ಅವಿತುಕೊಂಡಿದ್ದ ಅಪ್ರಾಪ್ತನನ್ನು ನಿನ್ನೆಯೇ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಯಾರೋ ಇಬ್ಬರು ಬಾಲಕಿಯನ್ನು ಎಳೆದೊಯ್ಯುತ್ತಿದ್ದರು. ಬಿಡಿಸಲು ಹೋಗಲು ಭಯವಾಗಿ ಗದ್ದೆಯಲ್ಲಿ ಅವಿತು ಕುಳಿತಿದ್ದೆ ಎಂದು ಅಸ್ಪಷ್ಟ ಮಾಹಿತಿ ನೀಡುತ್ತಿದ್ದ. ಅಪ್ರಾಪ್ತ ಬಾಲಕ ಅದೇ ಗ್ರಾಮದವನಾಗಿದ್ದು, ಈತನ ವರ್ತನೆ ಕಂಡು ಅನುಮಾನಗೊಂಡ ಬಾಲಕಿಯ ಸಂಬಂಧಿಕರು ಪೊಲೀಸರಿಗೆ ಮಾಹಿತಿ ನೀಡಿದ್ದರು.
ಕಬ್ಬು ಕಟಾವು ಮಾಡುತ್ತಿದ್ದ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಕತ್ತು ಕೊಯ್ದು ಹತ್ಯೆ ಮಾಡಿದ ಕಿರಾತಕ
Published On - 1:10 pm, Thu, 3 December 20