ಎಚ್ಡಿಎಫ್ಸಿ ಬ್ಯಾಂಕ್ನ ಹೊಸ ಡಿಜಿಟಲ್ ಕೊಡುಗೆಗಳು, ಕ್ರೆಡಿಟ್ ಕಾರ್ಡ್ ಗ್ರಾಹಕರ ನೋಂದಣಿಗೆ ಆರ್ಬಿಐ ನಿರ್ಬಂಧ
ಎಚ್ಡಿಎಫ್ಸಿ ಬ್ಯಾಂಕ್ನ ಹೊಸ ಡಿಜಿಟಲ್ ಕೊಡುಗೆಗಳು ಮತ್ತು ಹೊಸದಾಗಿ ಕ್ರೆಡಿಟ್ ಕಾರ್ಡ್ ಗ್ರಾಹಕರ ನೋಂದಣಿಗೆ ಆರ್ಬಿಐ ನಿರ್ಬಂಧ ವಿಧಿಸಿದೆ. ಕಳೆದ ಎರಡು ವರ್ಷಗಳಿಂದ ಬ್ಯಾಂಕ್ನ ಗ್ರಾಹಕರು ದೂರುತ್ತಿದ್ದ ತಾಂತ್ರಿಕ ಸಮಸ್ಯೆಗಳನ್ನು ಆರ್ಬಿಐ ಗಂಭೀರವಾಗಿ ಪರಿಗಣಿಸಿದೆ.
ಮುಂಬೈ: ಎಚ್ಡಿಎಫ್ಸಿ ಬ್ಯಾಂಕ್ನ ಹೊಸ ಡಿಜಿಟಲ್ ಕೊಡುಗೆಗಳು ಮತ್ತು ಹೊಸದಾಗಿ ಕ್ರೆಡಿಟ್ ಕಾರ್ಡ್ ಗ್ರಾಹಕರ ನೋಂದಣಿಗೆ ಆರ್ಬಿಐ ನಿರ್ಬಂಧ ವಿಧಿಸಿದೆ. ಕಳೆದ ಎರಡು ವರ್ಷಗಳಿಂದ ಬ್ಯಾಂಕ್ನ ಗ್ರಾಹಕರು ದೂರುತ್ತಿದ್ದ ತಾಂತ್ರಿಕ ಸಮಸ್ಯೆಗಳನ್ನು ಆರ್ಬಿಐ ಗಂಭೀರವಾಗಿ ಪರಿಗಣಿಸಿದೆ.
‘ಮೊಬೈಲ್ ಬ್ಯಾಂಕಿಂಗ್, ಇಂಟರ್ನೆಟ್ ಬ್ಯಾಂಕಿಂಗ್, ಪೇಮೆಂಟ್ ಸೇವೆಗಳಲ್ಲಿ ಕಳೆದ 2 ವರ್ಷಗಳಲ್ಲಿ ಹಲವು ಬಾರಿ ತೊಂದರೆ ಕಾಣಿಸಿಕೊಂಡಿತ್ತು. ಇತ್ತೀಚೆಗೆ, ಅಂದರೆ ನವೆಂಬರ್ 21ರಂದು ಸಹ ಎಚ್ಡಿಎಫ್ಸಿ ಇಂಟರ್ನೆಟ್ ಬ್ಯಾಂಕಿಂಗ್ ಮತ್ತು ಪೇಮೆಂಟ್ ವ್ಯವಸ್ಥೆಯಲ್ಲಿ ವ್ಯತ್ಯಯ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಆರ್ಬಿಐ ಇಂಟರ್ನೆಟ್ ಬ್ಯಾಂಕಿಂಗ್ನ ಹೊಸ ಕೊಡುಗೆಗಳು ಮತ್ತು ಕ್ರೆಡಿಟ್ ಕಾರ್ಡ್ ವಿತರಣೆಗೆ ಕೆಲ ನಿರ್ಬಂಧಗಳನ್ನು ವಿಧಿಸಿದೆ’ ಎಂದು ಷೇರು ಮಾರುಕಟ್ಟೆ ನಿಯಂತ್ರಕರಿಗೆ ನೀಡಿರುವ ಮಾಹಿತಿಯಲ್ಲಿ ಎಚ್ಡಿಎಫ್ಸಿ ಬ್ಯಾಂಕ್ ತಿಳಿಸಿದೆ.
ಆರ್ಬಿಐ ರೂಪಿಸಿರುವ ನಿಗಾ ವ್ಯವಸ್ಥೆಯಿಂದ ಹಾಲಿ ಕ್ರೆಡಿಟ್ ಕಾರ್ಡ್ ಹೊಂದಿರುವ ಮತ್ತು ಡಿಜಿಟಲ್ ಮಾಧ್ಯಮಗಳ ಮೂಲಕ ವ್ಯವಹರಿಸತ್ತಿರುವ ಗ್ರಾಹಕರಿಗೆ ಯಾವುದೇ ತೊಂದರೆಯಾಗುವುದಿಲ್ಲ. ವ್ಯವಸ್ಥೆ ಸರಿಯಾಗಿದೆ ಎಂದು ಮನವರಿಕೆಯಾದ ನಂತರ ಆರ್ಬಿಐ ನಿರ್ಬಂಧಗಳನ್ನು ತೆರವುಗೊಳಿಸಲಿದೆ. ಎಲ್ಲಿ ತಪ್ಪಾಗುತ್ತಿದೆ ಎಂಬುದನ್ನು ಕಂಡುಕೊಂಡು ತಕ್ಷಣ ಸರಿಪಡಿಸುವಂತೆ ಎಚ್ಡಿಎಫ್ಸಿ ಆಡಳಿತ ಮಂಡಳಿಗೆ ಆರ್ಬಿಐ ಸೂಚಿಸಿದೆ ಎಂದು ಬ್ಯಾಂಕ್ ಸ್ಪಷ್ಟಪಡಿಸಿದೆ.
ವಿದ್ಯುತ್ ವ್ಯತ್ಯಯದಿಂದಾಗಿ ನ.21ರಂದು ಮುಂಬೈನಲ್ಲಿರುವ ಬ್ಯಾಂಕ್ನ ಪ್ರಮುಖ ದತ್ತಾಂಶ ಕೇಂದ್ರದ ಸೇವೆಯಲ್ಲಿ ತಾಂತ್ರಿಕ ಸಮಸ್ಯೆಗಳು ಕಾಣಿಸಿಕೊಂಡಿದ್ದವು. ಎಟಿಎಂ, ಕಾರ್ಡ್ಗಳು, ಇಂಟರ್ನೆಟ್ ಬ್ಯಾಂಕಿಂಗ್, ಯುಪಿಐ ಮತ್ತು ಐಎಂಪಿಎಸ್ ಸೇವೆಗಳು ಕೆಲ ಗಂಟೆಗಳ ಕಾಲ ಸ್ಥಗಿತಗೊಂಡಿತ್ತು. ಸಾವಿರಾರು ಗ್ರಾಹಕರು ಟ್ವಿಟರ್ನಲ್ಲಿ ತಮಗೆ ಆಗುತ್ತಿರುವ ತೊಂದರೆಯನ್ನು ಹೇಳಿಕೊಂಡಿದ್ದರು.
ಈ ಹಿಂದೆಯೂ ಎಚ್ಡಿಎಫ್ಸಿ ಡಿಜಿಟಲ್ ಸೇವೆಗಳಲ್ಲಿ ವ್ಯತ್ಯಯಗಳು ಉಂಟಾಗಿದ್ದವು. ಎಚ್ಡಿಎಫ್ಸಿ ಗ್ರಾಹಕರಿಗೆ ಆಗಾಗ ಎದುರಾಗುತ್ತಿದ್ದ ತಾಂತ್ರಿಕ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿದ ಆರ್ಬಿಐ ಇದೀಗ ನಿರ್ಬಂಧದ ಬಿಸಿ ಮುಟ್ಟಿಸಿದೆ.
ಯಾವುದಕ್ಕೆ ನಿರ್ಬಂಧ ಡಿಜಿಟಲ್ 2.0 ಯೋಜನೆಯಡಿ ಹೊಸದಾಗಿ ವ್ಯಾಪಾರ ವೃದ್ಧಿ ಚಟುವಟಿಕೆಗಳು ಪ್ರಸ್ತಾವಿತ ವ್ಯಾಪಾರ ವೃದ್ಧಿಗಾಗಿನ ಮಾಹಿತಿ ತಂತ್ರಜ್ಞಾನ (ಐಟಿ) ಉಪಕ್ರಮ ಹೊಸ ಕ್ರೆಡಿಟ್ ಕಾರ್ಡ್ ಗ್ರಾಹಕರ ನೋಂದಣಿ
Published On - 12:18 pm, Thu, 3 December 20