ಭಾರತದಲ್ಲಿ ಕೋಟಿಯತ್ತ ಕೊರೊನಾ.. ಚುನಾವಣೆಯ ವೇಳೆ ಎಲ್ಲರಿಗೂ ಲಸಿಕೆ ಎಂದಿದ್ದ ಮೋದಿ ವಿರುದ್ಧ ರಾಹುಲ್​ ಕಿಡಿ

ಕೊವಿಡ್​ ಲಸಿಕೆಯನ್ನು ಎಲ್ಲರಿಗೂ ಹಂಚುತ್ತೇವೆಂದು ಹೇಳಿಲ್ಲ ಎಂಬ ಕೇಂದ್ರದ ಹೇಳಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್​ ಗಾಂಧಿ ಕಿಡಿಕಾರಿದ್ದಾರೆ.

ಭಾರತದಲ್ಲಿ ಕೋಟಿಯತ್ತ ಕೊರೊನಾ.. ಚುನಾವಣೆಯ ವೇಳೆ ಎಲ್ಲರಿಗೂ ಲಸಿಕೆ ಎಂದಿದ್ದ ಮೋದಿ ವಿರುದ್ಧ ರಾಹುಲ್​ ಕಿಡಿ
ಪ್ರಾತಿನಿಧಿಕ ಚಿತ್ರ
Follow us
Skanda
|

Updated on:Dec 03, 2020 | 12:14 PM

ದೆಹಲಿ: ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 95 ಲಕ್ಷದ ಗಡಿ ದಾಟಿದೆ. ನಿನ್ನೆ ಒಂದೇ ದಿನ 35,551 ಹೊಸ ಪ್ರಕರಣಗಳು ಪತ್ತೆಯಾಗಿದ್ದು ಇದುವರೆಗೆ ಒಟ್ಟು 95,34,964 ಕೊವಿಡ್​ ಕೇಸ್​ಗಳು ದಾಖಲಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಇಂದು  ತಿಳಿಸಿದೆ.

ದೇಶದಲ್ಲಿ ಸೋಂಕಿನಿಂದ ಗುಣಮುಖರಾಗುತ್ತಿರುವವರ ಪ್ರಮಾಣ ಶೇ. 94.11ಕ್ಕೆ ಏರಿದ್ದು ನಿನ್ನೆಯ ತನಕ ಒಟ್ಟು 89,73,373 ಜನ ಗುಣಮುಖರಾಗಿದ್ದಾರೆ. ಪ್ರಸ್ತುತ ದೇಶದಲ್ಲಿ 5 ಲಕ್ಷಕ್ಕಿಂತಲೂ ಕಡಿಮೆ ಅಂದರೆ 4,22,943 ಸಕ್ರಿಯ ಪ್ರಕರಣಗಳಿವೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ಕೊರೊನಾದಿಂದ ಸಾವಿಗೀಡಾದವರ ಸಂಖ್ಯೆ 1,38,648 ಕೊರೊನಾದಿಂದ ನಿನ್ನೆ 526 ಜನ ಮೃತಪಟ್ಟಿದ್ದು ಆರಂಭದಿಂದ ಇಲ್ಲಿಯವರೆಗೆ ಸಾವಿಗೀಡಾದವರ ಸಂಖ್ಯೆ 1,38,648ಕ್ಕೆ ತಲುಪಿದೆ. ಈ ಮೂಲಕ ಮರಣ ಪ್ರಮಾಣ ಶೇ. 1.45ರಷ್ಟು ದಾಖಲಾಗಿದೆ. ಕೊರೊನಾ ಸೋಂಕಿಗೆ ಒಳಗಾಗುವ ಮೊದಲು ಇತರ ಸಮಸ್ಯೆಗಳಿಂದ ಬಳಲುತ್ತಿದ್ದವರೇ ಹೆಚ್ಚು ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸೋಂಕಿತರಲ್ಲಿ ಗಣನೀಯ ಏರಿಕೆ ಭಾರತದಲ್ಲಿ ಆಗಸ್ಟ್​ 7ರ ವೇಳೆಗೆ 20 ಲಕ್ಷದಷ್ಟಿದ್ದ ಕೊರೊನಾ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆ ಕಂಡಿದೆ. ತಿಂಗಳಿಗೆ 20ಲಕ್ಷದಷ್ಟು ಸೋಂಕಿತರು ಹೆಚ್ಚಿದ್ದು ಆಗಸ್ಟ್​ 23 (30 ಲಕ್ಷ), ಸೆಪ್ಟೆಂಬರ್ 5 (40ಲಕ್ಷ), ಸೆಪ್ಟೆಂಬರ್ 16 (50 ಲಕ್ಷ), ಸೆಪ್ಟೆಂಬರ್ 28 (60 ಲಕ್ಷ), ಅಕ್ಟೋಬರ್ 11 (70 ಲಕ್ಷ), ಅಕ್ಟೋಬರ್ 29 (80 ಲಕ್ಷ) ಹಾಗೂ ನವೆಂಬರ್ 20 (90 ಲಕ್ಷ) ಪ್ರಕರಣಗಳು ದಾಖಲಾಗಿವೆ.

ಒಟ್ಟು 14,35,57,647 ಮಾದರಿಗಳನ್ನು ಕೊವಿಡ್ ಪರೀಕ್ಷೆಗೆ ಒಳಪಡಿಸಲಾಗಿದೆ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ನೀಡಿರುವ ಮಾಹಿತಿ ಪ್ರಕಾರ ಇದುವರೆಗೆ 14,35,57,647 ಮಾದರಿಗಳನ್ನು ಕೊವಿಡ್ ಪರೀಕ್ಷೆಗೆ ಒಳಪಡಿಸಲಾಗಿದೆ. ಈಗ ಹೊಸದಾಗಿ ದಾಖಲಾದ 526 ಸಾವಿನಲ್ಲಿ ಮಹಾರಾಷ್ಟ್ರದ 111, ದೆಹಲಿಯ 82, ಪಶ್ಚಿಮ ಬಂಗಾಳದ 51, ಹರ್ಯಾಣದ 32, ಉತ್ತರ ಪ್ರದೇಶದ 29, ಕೇರಳದ 28, ಛತ್ತೀಸ್​ಗಡದ 27 ಹಾಗೂ ಪಂಜಾಬ್​ನ 21 ಮಂದಿ ಮೃತಪಟ್ಟಿದ್ದಾರೆ.

ಕೊರೊನಾ ಲಸಿಕೆ ಹಂಚಲು ಸಿದ್ಧವಾದ ರಷ್ಯಾ, ಇಂಗ್ಲೆಂಡ್ ಕೊವಿಡ್​ ಸೋಂಕು ನಿವಾರಣೆಗೆ ರಷ್ಯಾ ಮತ್ತು ಇಂಗ್ಲೆಂಡ್ ದೇಶಗಳು ಲಸಿಕೆ ತಯಾರಿಸಿದ್ದು ತಮ್ಮ ದೇಶದ ಪ್ರಜೆಗಳಿಗೆ ಹಂಚಲು ಸಿದ್ಧವಾಗಿವೆ. ಇಂಗ್ಲೆಂಡ್ ತಯಾರಿಸಿರುವ ಫೈಜರ್​ ಮತ್ತು ರಷ್ಯಾದ ಸ್ಪುಟ್ನಿಕ್​ ವಿ ಲಸಿಕೆಗಳು ಸದ್ಯದಲ್ಲೇ ಆಯಾ ದೇಶದ ಜನರಿಗೆ ಲಭ್ಯವಾಗಲಿದ್ದು ಲಸಿಕೆಗಳು ಸಂಪೂರ್ಣ ಯಶಸ್ಸು ಕಂಡರೆ ಜಾಗತಿಕ ಮಟ್ಟದಲ್ಲಿ ಬೇಡಿಕೆ ಹೆಚ್ಚುವ ಸಾಧ್ಯತೆ ಇದೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (ಸಾಂದರ್ಭಿಕ ಚಿತ್ರ)

ಚುನಾವಣೆಯ ವೇಳೆ ಎಲ್ಲರಿಗೂ ಲಸಿಕೆ ಎಂದಿದ್ದ ಕೇಂದ್ರದ ವಿರುದ್ಧ ರಾಹುಲ್​ ಗಾಂಧಿ ಕಿಡಿ ಕೊವಿಡ್​ ಲಸಿಕೆಯನ್ನು ಎಲ್ಲರಿಗೂ ಹಂಚುತ್ತೇವೆಂದು ಹೇಳಿಲ್ಲ ಎಂಬ ಕೇಂದ್ರದ ಹೇಳಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್​ ಗಾಂಧಿ ಕಿಡಿಕಾರಿದ್ದಾರೆ. ಬಿಹಾರ ಚುನಾವಣೆಯ ವೇಳೆಯಲ್ಲಿ ಎಲ್ಲರಿಗೂ ಲಸಿಕೆ ಎಂದಿದ್ದ ಮೋದಿ ಈಗ ತಿರುಗಿಬಿದ್ದಿದ್ದು ಏಕೆ ಎಂದು ಪ್ರಶ್ನಿಸಿದ್ದಾರೆ. ಪ್ರಧಾನಿ ತಮ್ಮ ನಿಲುವನ್ನು ಜನತೆಯ ಮುಂದೆ ಸ್ಪಷ್ಟವಾಗಿ ಹೇಳಲಿ ಎಂದು ಒತ್ತಾಯಿಸಿದ್ದಾರೆ.

Published On - 12:07 pm, Thu, 3 December 20

ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ